”2022ರಲ್ಲಿ ಉತ್ತರಪ್ರದೇಶದಲ್ಲಿ ಪ್ರಜಾಪ್ರಭುತ್ವದ ಕ್ರಾಂತಿ” : ಅಖಿಲೇಶ್ ಯಾದವ್
ಉತ್ತರ ಪ್ರದೇಶ : 2022ರಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ರಾಜಕೀಯ ಚಟುವಟಿಕೆಗಳು ಗರಗೆದರಿವೆ.. ಈ ನಡುವೆ ಪ್ರಸ್ತುತ ಉತ್ತರ ಪ್ರದೇಶದಲ್ಲಿರುವ ‘ಹಾನಿಕಾರಕ’ ಮತ್ತು ನಕಾರಾತ್ಮಕ ರಾಜಕೀಯದ ವಿರುದ್ಧವಾಗಿ 2022ರಲ್ಲಿ ಪ್ರಜಾಪ್ರಭುತ್ವದ ಕ್ರಾಂತಿ ಆಗಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಹೇಳಿದ್ದಾರೆ.
ಟ್ವೀಟ್ ನಮಾಡಿರುವ ಅವರು ಈಗಿನ ಹಾನಿಕಾರಕ, ಸಾಂಪ್ರಾದಾಯಿಕ, ನಕಾರಾತ್ಮಕ ರಾಜಕೀಯದ ವಿರುದ್ಧ ಒಗ್ಗೂಡೋಣ. ಶೋಷಿತರು, ನಿರ್ಲಕ್ಷ್ಯಿತರು, ದಲಿತರು,ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಕರ ಪರವಾದ ಹೊಸ ರಾಜಕೀಯ ಸೃಷ್ಟಿಯಾಗಲಿದೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ 2022ರಲ್ಲಿ ಕೇವಲ ಚುನಾವಣೆ ನಡೆಯುವುದಿಲ್ಲ. ಬದಲಾಗಿ ನಾಟಕೀಯ ಕ್ರಾಂತಿಯಾಗಲಿದೆ. ವಿಧಾನಸಭಾ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ 350 ಸೀಟುಗಳನ್ನು ಸಮಾಜವಾದಿ ಪಕ್ಷ ಗೆಲ್ಲಲಿದೆ. ಜನರು ಬಿಜೆಪಿಯ ವಿರುದ್ಧ ಇದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.