Akshay Kumar : ಕೆನಡಾ ಪೌರತ್ವ ತ್ಯಜಿಸಿ ಭಾರತದ ಪೌರತ್ವ ಪಡೆಯಲು ಮುಂದಾದ ಅಕ್ಷಯ್ ಕುಮಾರ್…
ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೆಲ್ಫಿ ಚಿತ್ರದ ಪ್ರಚಾರದ ವೇಳೆ ನಡೆದ ಸಂದರ್ಶನದಲ್ಲಿ ತಮ್ಮ ಪೌರತ್ವದ ಕುರಿತು ಮಾತನಾಡಿದ್ದಾರೆ. ಭಾರತವೇ ತನಗೆ ಸರ್ವಸ್ವ ಎಂದು ಹೇಳುವ ಅಕ್ಷಯ್ ಕುಮಾರ್ ಅವರು ಈಗಾಗಲೇ ಪಾಸ್ಪೋರ್ಟ್ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಅದೇ ಸಮಯದಲ್ಲಿ, ತನ್ನ ಕೆನಡಾ ಪೌರತ್ವದ ಕಾರಣವನ್ನ ತಿಳಿಯದೆ ಜನರು ಏನನ್ನಾದರೂ ಹೇಳಿದಾಗ ತನಗೆ ಬೇಸರವಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅಕ್ಷಯ್ ಕುಮಾರ್ “ನಾನು ಏನನ್ನು ಗಳಿಸಿದ್ದೇನೋ, ಏನು ಸಿಕ್ಕಿದೆಯೋ, ಅದೆಲ್ಲವನ್ನೂ ಇಲ್ಲಿಂದ ಪಡೆದುಕೊಂಡಿದ್ದೇನೆ ಮತ್ತು ಮರಳಿ ಕೊಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಜನರು ಏನೂ ತಿಳಿಯದೆ ಏನನ್ನಾದರೂ ಹೇಳಿದಾಗ ನನಗೆ ಬೇಸರವಾಗುತ್ತದೆ. 1990 ರ ದಶಕದಲ್ಲಿ ಅಕ್ಷಯ್ ಕುಮಾರ್ ಅವರ 15 ಕ್ಕೂ ಹೆಚ್ಚು ಚಿತ್ರಗಳು ಸೋತಿದ್ದವು. ಬಾಕ್ಸ್ ಆಫೀಸ್ ನಲ್ಲಿ ಚಿತ್ರಗಳ ಕಳಪೆ ಪ್ರದರ್ಶನ ಕೆನಡಾದ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ನನ್ನನ್ನು ಪ್ರೇರೇಪಿಸಿತು.
ಆ ಸಮಯದಲ್ಲಿ ನನ್ನ ಎರಡು ಚಿತ್ರಗಳ ಬಿಡುಗಡೆ ಬಾಕಿ ಇದ್ದ ಕಾರಣ ಇಲ್ಲಿ ಉಳಿದೆ ಅವರೆಡೂ ಸೂಪರ್ ಹಿಟ್ ಆದವು. ಮತ್ತೆ ನಾನು ಇಲ್ಲಿಯೇ ಉಳಿದೆ. ನಾನು ಈ ಪಾಸ್ ಪೋರ್ಟ್ ಬದಲಿಸಬೇಕು ಎಂದು ಎಂದೂ ಊಹಿಸಿರಲಿಲ್ಲ. ಹೌದು ಇದೀಗ ನಾನು ಪಾಸ್ ಪೋರ್ಟ್ ಬದಲಿಸಲು ಅರ್ಜಿ ಸಲ್ಲಿಸಿದ್ದೇನೆ ಎಂದು ನಟ ಅಕ್ಷಯ್ ಕುಮಾರ್ ತಿಳಿಸಿದ್ದಾರೆ.
ಕೆನಡಾ ಪೌರತ್ವದ ಕಾರಣಕ್ಕೆ ಜನರ ಟೀಕೆಗೆ ಗುರಿಯಾಗಿದ್ದ ಅಕ್ಷಯ್ ಇದೀಗ ಮತ್ತೆ ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲಿದ್ದಾರೆ.
Akshay Kumar: Akshay Kumar renounced Canadian citizenship and sought Indian citizenship…