Akshay Kumar : ಸಿನಿಮಾಗಳ ಬಗ್ಗೆ ಟೀಕೆ ಬೇಡ – ಮೋದಿಗೆ ಧನ್ಯವಾದ ತಿಳಿಸಿದ ಅಕ್ಷಯ್ ಕುಮಾರ್…
ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನ ಪ್ರತೀ ಚಿತ್ರವೂ ಒಂದಲ್ಲ ಒಂದು ಕಾರಣಕ್ಕೆ ಟೀಕೆಗಳನ್ನ ಎದುರಿಸುತ್ತಿದೆ. ಅದರಲ್ಲೂ ಅಮೀರ್ ಮತ್ತು ಶಾರುಖ್ ಖಾನ್ ಅವರ ಚಿತ್ರಗಳೂ ಹೆಚ್ಚು ಚರ್ಚೆಗಳಿಗೆ ಒಳಗಾಗುತ್ತಿದೆ. ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರದಲ್ಲಿ ಹಿಂದೂ ಧರ್ಮಕ್ಕೆ ಅವಮಾನ ಮಾಡಲಾಗಿದೆ ಎಂದು ಧಾರ್ಮಿಕ ಸಮುದಾಯಗಳ ಜೊತೆಗೆ ಬಿಜೆಪಿ ನಾಯಕರು ತೀವ್ರ ಟೀಕೆ ಮಾಡಿ ವಿವಾದಕ್ಕೆ ಕಾರಣರಾಗುತ್ತಿದ್ದಾರೆ.
ಇತ್ತೀಚೆಗಷ್ಟೇ ಬಿಜೆಪಿಯ ಹಲವು ಮುಖಂಡರು ಪಠಾಣ್ ಚಿತ್ರದ ಕುರಿತಾಗಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಇತ್ತೀಚೆಗೆ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಮೋದಿ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದರು. ಸಿನಿಮಾಗಳ ಕುರಿತಾಗಿ ಅನಗತ್ಯ ವಿಷಯಗಳನ್ನ ಟೀಕಿಸುವ ಸಲುವಾಗಿ ಮಾಧ್ಯಮಗಳ ಮುಂದೆ ನಿಲ್ಲದಂತೆ ಮೋದಿ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಇದೀಗ ಬಾಲಿವುಡ್ ಹೀರೋ ಅಕ್ಷಯ್ ಕುಮಾರ್ ಮೋದಿ ಅವರು ತೆಗೆದುಕೊಂಡ ಕ್ರಮಗಳಿಗೆ ಧನ್ಯವಾದ ಹೇಳಿದ್ದಾರೆ. “ಸಿನಿಮಾ ಮಾಡಲು ತುಂಬಾ ಕಷ್ಟ ಪಡುತ್ತಿದ್ದೇವೆ. ಆದರೇ ಯಾರೋ ಮಾಡಿದ ಅನಗತ್ಯ ಕಾಮೆಂಟ್ ಗಳಿಂದ ವಿವಾದಗಳು ಉದ್ಭಬಿಸುತ್ತವೆ. ಪ್ರಧಾನಿ ಮೋದಿ ದೇಶದ ಅತಿ ದೊಡ್ಡ ಪ್ರಭಾವಿ. ಅವರ ಈ ಕಾಮೆಂಟ್‌ಗಳು ಸ್ವಲ್ಪ ಬದಲಾವಣೆ ತಂದರೆ ಚಿತ್ರರಂಗಕ್ಕೆ ಒಳ್ಳೆಯದಾಗುತ್ತದೆ “ ಇಂತಹ ಕ್ರಮಗಳನ್ನ ಕೈಗೊಂಡಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಅಕ್ಷಯ್ ಧನ್ಯವಾದ ಅರ್ಪಿಸಿದ್ದಾರೆ.
ಅಕ್ಷಯ್ ಪ್ರಸ್ತುತ ಎರಡು ಸೌತ್ ರಿಮೇಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಒಂದು ಆಕಾಶಂ ನಿ ಹದ್ದುರಾ ಮತ್ತು ಮಲಯಾಳಂ ಸಿನಿಮಾ ಡ್ರೈವಿಂಗ್ ಲೇಸೆನ್ಸ್. ಇವುಗಳ ಹೊರತಾಗಿ ಛತ್ರಪತಿ ಶಿವಾಜಿ ಮತ್ತು ಓ ಮೈ ಗಾಡ್ 2 ಚಿತ್ರಗಳಲ್ಲಿ ನಟಿಸಲು ರೆಡಿಯಾಗಿದ್ದಾರೆ.
Akshay Kumar: Don’t criticize movies – Akshay Kumar thanked Modi…