ದಿಸ್ಪುರ್: ಅಲ್ ಖೈದಾ (Al Qaeda) ಉಗ್ರರ ಸಂಪರ್ಕದಲ್ಲಿದ್ದ ಮತ್ತೋರ್ವನನ್ನು ಅಸ್ಸಾಂ ವಿಶೇಷ ಕಾರ್ಯಾಚರಣೆ ಪಡೆ ಅಸ್ಸಾಂನ (Assam) ಬಂಧಿಸಿದೆ.
ಬಂಧಿತ ವ್ಯಕ್ತಿಯನ್ನು ಅಲ್ಲಿನ ಕೊಕ್ರಜಾರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಗಾಜಿ ರೆಹಮಾನ್ (35) ಬಂಧಿತ ವ್ಯಕ್ತಿ. ಆರೋಪಿ ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆ ಅನ್ಸರುಲ್ಲಾ ಬಾಂಗ್ಲಾ ತಂಡದ (ಎಬಿಟಿ) ಪ್ರಮುಖ ಸದಸ್ಯ ಎನ್ನಲಾಗಿದೆ. ಬಂಧಿತ ಅಲ್ ಖೈದಾ ಉಗ್ರರ ಸಂಪರ್ಕದಲ್ಲಿದ್ದ. ಅಸ್ಸಾಂನ ವಿಶೇಷ ಕಾರ್ಯಪಡೆ ಆಪರೇಷನ್ ಪರ್ಘಾಟ್ ಅಡಿಯಲ್ಲಿ ಭಯೋತ್ಪಾದಕರನ್ನು ಬಂಧಿಸಲು ಕಾರ್ಯಾಚರಣೆ ನಡೆಸುತ್ತಿದ್ದು, ಇದರ ಭಾಗವಾಗಿ ರೆಹಮಾನ್ ಅರೆಸ್ಟ್ ಆಗಿದ್ದಾನೆ.
ಇಲ್ಲಿಯವರೆಗೆ ಭಯೋತ್ಪಾದನಾ ಘಟಕದ ಕನಿಷ್ಠ 12 ಸಹಚರರನ್ನು ಬಂಧಿಸಲಾಗಿದೆ.
ಅಲ್ಲಾಹನ ಹೊರತು ಯಾರನ್ನೂ ಪೂಜಿಸಲ್ಲ, ಎದ್ದು ನಿಲ್ಲುತ್ತೇನೆ ಆದರೆ ವಂದೇ ಮಾತರಂ ಹಾಡುವುದಿಲ್ಲ, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ವಿವಾದಾತ್ಮಕ ಹೇಳಿಕೆ
ನವದೆಹಲಿ: ಸ್ವಾತಂತ್ರ್ಯ ದಿನೋತ್ಸವದಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ಸೋನಿಯಾ ಗಾಂಧಿ ಅಡ್ಡಿಪಡಿಸಿದ್ದಾರೆ ಎಂಬ ಬಿಜೆಪಿ ಆರೋಪದ ಬೆನ್ನಲ್ಲೇ, ಕಾಂಗ್ರೆಸ್ ಸಂಸದ ಇಮ್ರಾನ್...








