ಆಲ್ಬೇನಿಯಾ..!!!
70 % ರಷ್ಟು ಈ ದೇಶ ಬೆಟ್ಟ ಗುಡ್ಡಗಳಿಂದ ಕೂಡಿದೆ.. ವಿಶ್ವದ ಸಣ್ಣ ರಾಷ್ಟ್ರಗಳ ಪಟ್ಟಿಗೆ ಸೇರೋ ಈ ಸುಂದರ ದೇಶ ಮತ್ಯಾವುದೂ ಅಲ್ಲ ಅಲ್ಬೇನಿಯಾ…
ಅಧಿಕೃತ ಹೆಸರು : ರಿಪಬ್ಲಿಕ್ ಆಫ್ ಅಲ್ಬೇನಿಯಾ..
ಉತ್ತರ ಪೂರ್ವದಲ್ಲಿ ಸ್ಥಿತಿವಾಗಿರುವ ಆಲ್ಬೇನಿಯಾ ಇತರ ಅನೇಕ ದೇಶಗಳಿಂತ ಅನೇಕ ವಿಚಾರಗಳಲ್ಲಿ ವಿಭಿನ್ನ..
ವಿಸ್ತೀರ್ಣದ ವಿಚಾರಕ್ಕೆ ಬಂದ್ರೆ ಅಲ್ಬೇನಿಯಾ ವಿಶ್ವದ 139 ನೇ ದೊಡ್ಡ ದೇಶವಾಗಿದೆ..
ಆದ್ರೆ ಜನಸಂಖ್ಯೆ ವಿಚಾರದಲ್ಲಿ ತುಂಬಾ ಸಣ್ಣ ದೇಶ – ಇಲ್ಲಿನ ಜನಸಂಖ್ಯೆ ಕೇವಲ 28. 7 ಲಕ್ಷ
ಅಧಿಕೃತ ಭಾಷೆ – ಅಲ್ಬೇನಿಯನ್ – ಇಂಡೋ ಯೂರೋಪಿಯನ್ ಭಾಷೆ
ರಾಜಧಾನಿ – ತಿರಾನಾ
ಇಲ್ಲಿ ದೇಶದ ಜವಾಬ್ದಾರಿ ರಾಷ್ಟ್ರಪತಿಗಳದ್ದಾಗಿರುತ್ತೆ..
1900 ರ ಿಸವಿಯ ವರೆಗೂ ಈ ದೇಶ ರೋಮನ್ ಸಾಮ್ರಾಜ್ಯದ ಭಾಗವಾಗಿತ್ತು.. ಆದ್ರೆ 1912 ರಲ್ಲಿ ಒಂದು ಸ್ವತಂತ್ರ್ಯ ದೇಶವಾಗಿ ಹೊರಹೊಮ್ಮಿತ್ತು..
1939 ರಲ್ಲಿ ಮತ್ತೆ ಈ ದೇಶವನ್ನ ಇಟಲಿ ಆಕ್ರಮಿಸಿಕೊಂಡಿತ್ತು..
ಸೇವೆಗಳು , ಕೃಷಿ , ಇಂಡಸ್ಟ್ರಿಗಳು ಇಲ್ಲಿನ ಅರ್ಥವ್ಯವಸ್ಥೆಯ ಪ್ರಮುಖ ಮೂಲಗಳಾಗಿವೆ..
ಇಲ್ಲಿನ ಆರ್ಥಿಕತೆಗೆ ಕೃಷಿಯಿಂದ ಸುಮಾರು 21 % , ಸಿಕ್ಕರೆ 50% ಗಿಂತ ಹೆಚ್ಚು ಸೇವೆಗಳಿಂದ ಸಿಗುತ್ತೆ..
ಶ್ರೀಮಂತ ದೇಶಗಳಲ್ಲಿ ಒಂದು ಅಲ್ಬೇನಿಯಾ..
ಈ ದೇಶದಲ್ಲಿ 60 % ರಷ್ಟು ಮುಸ್ಲಿಮರಿದ್ದರೆ , 35 % ರಷ್ಟು ಕ್ರೈಸ್ತರಿದ್ದರೆ, 5 % ರಷ್ಟು ಉಳಿದ ಬೇರೆ ಬೇರೆ ಧರ್ಮದವರಿದ್ದಾರೆ..
ಅಂದ್ಹಾಗೆ ಆಶ್ಚರ್ಯಕಾರಿ ಸಂಗತಿಯೆಂದ್ರೆ ಈ ದೇಶದಲ್ಲಿ ಅತಿ ಹೆಚ್ಚು ನಾಸ್ತಿಕರಿದ್ದಾರೆ ಅನ್ನೋದು..
1967 ರಲ್ಲಿ ಅಲ್ಬೇನಿಯಾ ವಿಶ್ವದ ಮೊದಲ ನಾಸ್ತಿಕ ದೇಶವಾಗಿ ಹೊರಹೊಮ್ಮಿತ್ತು.. ಇಲ್ಲಿನ ಸುಮಾರು 90 % ರಷ್ಟು ಜನರು ಯಾವುದೇ ಧರ್ಮವನ್ನ ಪಾಲನೆ ಮಾಡುವುದಿಲ್ಲ.. ಪೂಜೆ , ಪುನಸ್ಕಾರ , ದೇವರು ಯಾವುದನ್ನ ನಂಬುವುದಿಲ್ಲ..
ಈ ದೇಶದಲ್ಲಿ ಮತ್ತೊಂದು ವಿಶೇಷತೆ ಅಂದ್ರೆ ಇಲ್ಲಿನ ಪ್ರತಿ ಮಕ್ಕಳಿಗೆ ಸರ್ಕಾರ ಪ್ರೈಮರಿ ಮತ್ತು ಸೆಕೆಂಡರಿ ಹಂತದವರೆಗೂ ಉಚಿತ ಶಿಕ್ಷಣ ಒದಗಿಸುತ್ತದೆ..
2009 ರ ವರದಿ ಪ್ರಕಾರ ಈ ದೇಶದ ಲಿಟ್ರೆಸಿ ರೇಟ್ 98 %
ಈ ದೇಶದಲ್ಲಿ ಹದ್ದಿಗೆ ವಿಶೇಷ ಸ್ಥಾನವಿದೆ.. ಈ ದೇಶದ ರಾಷ್ಟ್ರೀಯ ಚಿಹ್ನಿಯೂ ಆಗಿದೆ.. ಈ ದೇಶದ ರಾಷ್ಟ್ರೀಯ ಧ್ವಜದಲ್ಲೂ ಹದ್ದು ಕಾಣಿಸುತ್ತೆ.. ಆದ್ರೆ ಎರೆಡು ತಲೆಯ ಹದ್ದಿನ ಚಿತ್ರವದು..
ಇನ್ನೊಂದು ವಿಚಾರ,,,,, ಇಡೀ ವಿಶ್ವದಲ್ಲೇ ಫೇಮಸ್ ಮೆಕ್ ಡೊನಾಲ್ಡ್ಸ್ ಇಡೀ ಅಲ್ಬೇನಿಯಾ ಸುತ್ತಿದ್ರೂ ಎಲ್ಲೂ ಸಿಗೋದಿಲ್ಲ…
ಇಡೀ ದೇಶದಲ್ಲಿ ಅಲ್ಲಲ್ಲಿ ಅತಿ ಹಳೆಯದಾದ ಬಂಕರ್ಸ್ ಗಳು ಕಾಣ ಸಿಗುತ್ವೆ… 2 ನೇ ಮಹಾಯುದ್ಧದ ಸಂದರ್ಭದಲ್ಲಿ ಅಲ್ಲಿನ ಸರ್ಕಾರ ಈ ಬಂಕರ್ಸ್ ಗಳನ್ನ ನಿರ್ಮಾಣ ಮಾಡಿಸಿತ್ತು.., ಈಗಲೂ ಈ ಬಂಕರ್ ಗಳಲ್ಲು ಅಲಲ್ಲಿ ಸ್ಕೂಲ್ ಕಾಲೇಜ್ , ಆಸ್ಪತ್ರೆ , ಬೆಟ್ಟ ಗುಡ್ಡಗಳು , ರಸ್ತೆಗಳ ಬಳಿ ಕಾಣ ಸಿಗುತ್ವೆ…
ಇಡೀ ಅಲ್ಬೇನಿಯಾ ದೇಶದಲ್ಲಿ ಸುಮಾರು 2 ಲಕ್ಷ ಬಂಕರ್ ಗಳಿವೆ..
ಇಲ್ಲಿ ಸತ್ತ ಪ್ರಾಣಿ , ಪಕ್ಷಿಗಳನ್ನ ಶುಭ ಎಂದು ಜನ ಭಾವಿಸುತ್ತಾರೆ..
ಅಷ್ಟೇ ಅಲ್ಲ… ಸತ್ತ ಪ್ರಾಣಿಗಳನ್ನ ತಮ್ಮ ಮನೆಯ ಹೊರಗೂ ನೇತಾಕುತ್ತಾರೆ..
ಹೀಗೆ ಮಾಡೋದ್ರಿಂದ ಕೆಟ್ಟ ಆತತ್ಮಗಳು ಮನೆಯನ್ನ ಪ್ರವೇಶಿಸುವುದಿಲ್ಲ ಎಂಬುದು ಅಲ್ಲಿನ ಜನರ ನಂಬಿಕೆ…