ವಿಶ್ವದ ಮಹಾನ್ ವಿಜ್ಞಾನಿ ಐನ್ ಸ್ಟೈನ್ ಅವರಿಗೆ ಶೂ ಲೇಸ್ ಕೂಡ ಕಟ್ಟಿಕೊಳ್ಲಲು ಬರುತ್ತಿರಲಿಲ್ಲ..!
ಜೀವನದಲ್ಲಿ ತಪ್ಪೇ ಮಾಡದೇ ಇರುವ ವ್ಯಕ್ತಿ ಇವತ್ತಿನ ವರೆಗೂ ಏನೂ ಹೊಸ ಪ್ರಯತ್ನಗಳನ್ನ ಮಾಡಿಯೇ ಇಲ್ಲ ಎಂಬುದನ್ನ ನಂಬುತ್ತಿದ್ದವರು ವಿಶ್ವದ ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್… ಮಾರ್ಚ್ 18 1879 ರಲ್ಲಿ ಜರ್ಮನಿಯಲ್ಲಿ ಯಹೂದಿ ಪರಿವಾರದಲ್ಲಿ ಐನ್ ಸ್ಟೈನ್ ಅವರ ಜನನವಾಗಿತ್ತು.
ಐನ್ ಸ್ಟೈನ್ ಅವರ ಜನನದ ಸಮಯದಲ್ಲಿ ಅವರ ತಲೆ ಬಾಕಿ ಮಕ್ಕಳ ಹೋಲಿಕೆಯಲ್ಲಿ ಸ್ವಲ್ಪ ದೊಡ್ಡದಾಗಿರೋದನ್ನ ವೈದ್ಯರು ಗಮನಿಸಿದ್ದರು. ಇನ್ನೂ ಐನ್ ಸ್ಟೈನ್ ಅವರ ಬುದ್ದಿವಂತಿಗೆ ಯಾರೂ ಕೂಡ ಸರಿ ಸಾಟಿಯೇ ಇಲ್ಲ. ಐನ್ ಸ್ಟೈನ್ ಅಗಲಿ ದಶಕಗಳೇ ಕಳೆದಿದ್ರೂ ಇವತ್ತಿಗೂ ವಿಜ್ಞಾನ ಕ್ಷೇತ್ರದಲ್ಲಿ ಐನ್ ಸ್ಟೈನ್ ಅವರ ಥೀಸಿಸ್ ಇಲ್ಲದೇ ಏನೂ ಇಲ್ಲ ಅನ್ನುವಂತಿದೆ.
ವಿಶ್ವದ ಮಹಾನ್ ವಿಜ್ಞಾನಿ ಐನ್ ಸ್ಟೈನ್ ಅವರು ನಾರ್ಮಲ್ ಮಕ್ಕಳ ರೀತಿ ಇರಲಿಲ್ಲ. ಇತರೇ ಮಕ್ಕಳಿಗಿಂತಲೂ ಅವರ ತಲೆ ದೊಡ್ಡದ್ದಾಗಿತ್ತು ಎನ್ನುವದನ್ನ ವೈದ್ಯರು ಗಮನಿಸಿದ್ದರು. ಅಲ್ಲದೇ ಪ್ರತಿ ವಿಚಾರದಲ್ಲೂ ಐನ್ ಸ್ಟೈನ್ ಬಹಳ ನಿಧಾನ ಎಂದೇ ಹೇಳಲಾಗಿತ್ತು. ಇನ್ನೂ ಸಾಮಾನ್ಯವಾಗಿ ಮಕ್ಕಳು 1 – 2 ವರ್ಷಗಳಲ್ಲಿ ಮಾತನಾಡೋದನ್ನ ಕಲಿಯುತ್ತಾರೆ. ಆದ್ರೆ ಐನ್ ಸ್ಟೈನ್ ಅವರು 4 ವರ್ಷಗಳ ವರೆಗೂ ಮಾತೇ ಆಡಿರಲಿಲ್ಲ. ಆದ್ರೆ ಒಂದಿನ ಇದ್ದಕ್ಕಿದ್ದ ಹಾಗೆ ಐನ್ ಸ್ಟೈನ್ ಪರಿವಾರದ ಜೊತೆಗೆ ಊಟ ಮಾಡುವಾಗ ಸೂಪ್ ತುಂಬಾ ಬಿಸಿ ಇದೆ ಎಂದು ಹೇಳಿದ್ದರಂತೆ. ಅಚಾನಕ್ ಆಗಿ ಐನ್ ಸ್ಟೈನ್ ಮಾತನಾಡಿದ್ದನ್ನ ಕಂಡು ಮನೆಯವರು ದಂಗಾಗಿದ್ರು ಎನ್ನಲಾಗುತ್ತೆ.
ವಿಚಿತ್ರ ಅಂದ್ರೆ ಐನ್ ಸ್ಟೈನ್ ಬಳಿ ಇಷ್ಟು ವರ್ಷಗಳ ಕಾಲ ಮಾತನಾಡದೇ ಇದ್ದಕ್ಕೆ ಪರಿವಾರದವರು ಕಾರಣ ಕೇಳಿದಾಗ ಐನ್ ಸ್ಟೈನ್ ಅವರು ಕೊಟ್ಟಿದ್ದ ಉತ್ತರ “ ಇಲ್ಲಿಯ ವರೆಗೂ ಎಲ್ಲವೂ ಸರಿಯಾಗಿಯೇ ಇತ್ತು” ಎಂದಿದ್ದರಂತೆ. ಹೀಗೆ ಅವರು ಅನೇಕ ಸಂದರ್ಭದಲ್ಲಿ ಅಸಹಜ ವಿಚಿತ್ರ ನಡವಳಿಕೆಗಳಿಂದ ಎಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿಸಿದ್ದಾರೆ. ಐನ್ ಸ್ಟೈನ್ ಯಾರಿಗೂ ಸರಿಯಾಗಿ ಅರ್ಥವಾಗದೇ ಇದ್ದ ವ್ಯಕ್ತಿ ಅಂತಲೂ ಹೇಳಬಹುದು.
ಅಷ್ಟೇ ಅಲ್ಲ ಮಹಾನ್ ವಿಜ್ಞಾನಿ ಐನ್ ಸ್ಟೈನ್ ಅವರು ಟೀನೇಜ್ ಹಂತದ ವರೆಗೂ ಸರಿಯಾಗಿ ದಿನಾಂಕ ಹಾಗೂ ಫೋನ್ ನಂಬರ್ ಗಳನ್ನ ಕೂಡ ನೆನಪಿನಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ ಎನ್ನಲಾಗುತ್ತದೆ. ಅಷ್ಟೇ ಅಲ್ಲ ಸ್ವತಃ ಅವರದ್ದೇ ಟೆಲಿಫೋನ್ ನಂಬರ್ ಗಳು ಅವರಿಗೆ ನೆನಪಿರುತ್ತಿರಲಿಲ್ಲವಂತೆ.
ಆದ್ರೆ ಈ ಬಗ್ಗೆ ಒಮ್ಮೆ ಅವರ ಸಹದ್ಯೋಗಿ ಪ್ರಶ್ನಿಸಿದ್ದರಂತೆ. ಇದಕ್ಕೆ ಐನ್ ಸ್ಟೈನ್ ಅವರು “ ಟೆಲಿಫೋನ್ ಡೈರೆಕ್ಟರಿನಲ್ಲಿ ಸಿಗುವ ಟೆಲಿಫೋನ್ ನಂಬರ್ ಗಳನ್ನ ನಾನು ನೆನಪಿನಲ್ಲಿ ಏಕೆ ಇಟ್ಟುಕೊಳ್ಳಬೇಕು..?” ಅಂದಿದ್ರಂತೆ. ಇನ್ನೂ ಐನ್ ಸ್ಟೈನನ್ ಅವವರ ಕಾಲಿನ ಬೆರಳುಗಳು ಬಹಳ ಉದ್ದವಿದ್ದ ಕಾರಣ ಅವರು ಸಾಕ್ಸ್ ಹಾಕದೆಯೇ ಶೂಗಳನ್ನ ಧರಿಸುತ್ತಿದ್ದರಂತೆ. ಇನ್ನೂ ಆಶ್ಚರ್ಯಕಾರಿ ವಿಚಾರ ಅಂದ್ರೆ ಐನ್ ಸ್ಟೈನ್ ತಮ್ಮ ಶೂಗಳ ಲೇಸ್ ಗಳನ್ನೂ ಕೂಡ ಇತರರ ಕೈಗಳಿಂದಲೇ ಕಟ್ಟಿಸಿಕೊಳ್ತಿದ್ರು ಎನ್ನಲಾಗುತ್ತೆ. ಕಾರಣ ಅವರಿಗೆ ಸರಿಯಾಗಿ ಶೂಗಳ ಲೇಸ್ ಗಳನ್ನ ಸಹ ಕಟ್ಟಿಕೊಳ್ಳುವುದಕ್ಕೆ ಬರುತ್ತಿರಲಿಲ್ಲವಂತೆ.
ವಿಶ್ವದ ಮಹಾನ್ ವಿಜ್ಞಾನಿ ಐನ್ ಸ್ಟೈನ್ ಅವರು ಚಿಕ್ಕ ವಯಸ್ಸಿನಲ್ಲಿ ವಿದ್ಯಾಭ್ಯಾಸದಲ್ಲಿ ಬಹಳ ಹಿಂದಿದ್ದರಂತೆ. ಅಷ್ಟೇ ಅಲ್ಲ ಚಿಕ್ಕ ವಯಸ್ಸಿನಲ್ಲಿ ಪೆದ್ದ ವಿದ್ಯಾರ್ಥಿಗಳ ಗುಂಪಿನಲ್ಲಿ ಐನ್ ಸ್ಟೈನ್ ಅವರನ್ನ ಪರಿಗಣನೆಗೆ ತೆಗೆದುಉಕೊಳ್ಳಲಾಗ್ತಿತ್ತಂತೆ. ಅಷ್ಟೇ ಅಲ್ದೇ ಕೆಲವರಂತೂ ಐನ್ ಸ್ಟೈನ್ ಅವರನ್ನ ಶಾರಿರಿಕ , ಮಾನಸಿಕವಾಗಿ ವಿಕಲಾಂಗರು ಅಂತ ಕೂಡ ಕರೆದಿದ್ದರಂತೆ.
ಅಲ್ದೇ ಐನ್ ಸ್ಟೈನ್ ಅವರ ಶಿಕ್ಷಕರು ಕೂಡ ಅವರನ್ನ ಅಷ್ಟಾಗಿ ಇಷ್ಟ ಪಡುತ್ತಿರಲಿಲ್ಲವಂತೆ. ಕಾರಣ ವಿಜ್ಞಾನ , ಗಣಿತ ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲೂ ಐನ್ ಸ್ಟೈನ್ ಅವರು ಫೇಲ್ ಆಗ್ತಿದ್ರು ಎನ್ನಲಾಗಿದೆ. ಅಷ್ಟೇ ಅಲ್ಲ ಚಿಕ್ಕ ವಯಸಸ್ಸಿನಿಂದಲೂ ಐನ್ ಸ್ಟೈನ್ ಅವರಿಗೆ ಓದುಬರಹದಲ್ಲಿ ಆಸಕ್ತಿಯೇ ಇರಲಿಲ್ಲವಂತೆ. ಆದ್ರೂ ಕೂಡ ಐನ್ ಸ್ಟೈನ್ ಅವರು ವಿಶ್ವದ ಮುಂದಿಟ್ಟ ವಿಜ್ಞಾನದ ಥೀಸಿಸ್ ಗಳು ಇಲ್ಲ ಅಂದ್ರೆ ವಿಜ್ಞಾನ ದುರ್ಬಲವಾಗುತ್ತದೆ ಅಂತ ಹೇಳಬಹುದು.
18 ಏಪ್ರಿಲ್ 1955 ರಲ್ಲಿ ಐನ್ ಸ್ಟೈನ್ ಅವರು ವಿಧಿವಶವಾದ್ರು. ಆಗ ಡಾ ಥಾಮಸ್ ಹಾರ್ವೆ ಎಂಬುವವರು ಐನ್ ಸ್ಟೈನ್ ಅವರ ಪರಿವಾರದ ಅನುಮತಿ ಇಲ್ಲದೆಯೇ ಐನ್ ಸ್ಟೈನ್ ಅವರು ಮೆದುಳನ್ನ ಸಂಶೋಧನೆಗಾಗಿ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದರು. ಇದಾದ ನಂತರ ಡಾಕ್ಟರ್ ಹಾರ್ವೆ ಅವರನ್ನ ಕೆಲಸದಿಂದ ಕಿತ್ತುಹಾಕಲಾಗಿತ್ತು.
ಆದ್ರೆ ಹಾರ್ವೆ ಅವರು ಐನ್ ಸ್ಟೈನ್ ಮೆದುಳನ್ನ ಕೇವಲ ಸಂಶೋಧನೆಗಾಗಿ ತೆಗೆದುಕೊಂಡಿದ್ದಾಗಿ ತಿಳಿಸಿದ್ದರು. ಆದ್ರೂ ಸಂಶೋಧನೆಗೆ ಅನುಮತಿ ಸಿಗದೇ ಹೋದ ಪರಿಣಾಮ ಐನ್ ಸ್ಟೈನ್ ಅವರ ಮೆದುಳನ್ನು ಒಂದು ಜಾರನಲ್ಲಿಟ್ಟು ಬೇಸ್ ಮೆಂಟ್ನಲ್ಲಿಟ್ಟಿದ್ದರು. ನಂತರ ಐನ್ ಸ್ಟೈನ್ ಅವರ ಮಗ ಹೆನ್ಸ್ ಆಲರ್ಟ್ ರಿಂದ ಅನುಮತಿ ಪಡೆದ ಹಾರ್ವೆ ಐನ್ ಸ್ಟೈನ್ ಮೆದುಳಿನ ಮೇಲೆ ಸಂಶೋಧನೆ ನಡೆಸಲು ಆರಂಭಿಸಿದ್ರು. ಮೊದಲಿಗೆ ಹಾರ್ವೆ ಐನ್ ಸ್ಟೈನ್ ಅವರ ಮೆದುಳಿನ ತೂಕ ಮಾಡಿದ್ದರು. ಈ ವೇಳೆ ಮೆದುಳಿನ ತೂಕ 1230 ಗ್ರಾಂ ಇತ್ತು. ಅಂದ್ರೆ ಇತರೇ ಸಾಮಾನ್ಯ ಮನುಷ್ಯರಿಗಿಂತ ತುಂಬಾ ಚಿಕ್ಕದಿತ್ತು. ಒಬ್ಬ ವ್ಯಕ್ತಿಯ ಮೆದುಳಿನ ತೂಕ ಸುಮಾರು 1400 ಗ್ರಾಂ ಇರುತ್ತದೆ. ನಂತರ ಹಾರ್ವೆ ಐನ್ ಸ್ಟೈನ್ ಅವರ ಮೆದುಳನ್ನ 240 ಭಾಗಗಳಾಗಿ ಕತ್ತರಿಸುತ್ತಾರೆ. ಕತ್ತರಿಸಿದ ಎಲ್ಲಾ ಭಾಗಗಳನ್ನ ವಿಶ್ವಾದ್ಯಂತದ ಜನಪ್ರಿಯ ವಿಜ್ಞಾನಿಗಳ ಬಳಿಗೆ ಸಂಶೋಧನೆಗಾಗಿ ಕಳುಹಿಸಿಕೊಡುತ್ತಾರೆ.
ಸಂಶೋಧನೆ ವೇಳೆ ಸಾಮಾನ್ಯವಾಗಿ ಇತರೇ ವ್ಯಕ್ತಿಗಳ ಹೋಲಿಕೆಯಲ್ಲಿ ಐನ್ ಸ್ಟೈನ್ ಅವರ ಮೆದುಳಿನಲ್ಲಿ ಅತಿ ಹೆಚ್ಚು ಸೆಲ್ಸ್ ಇದ್ದದ್ದು ಕಂಡು ಬಂದಿತ್ತು. ಅಲ್ಲದೇ ಮೆದುಳಿನ ಸೆರಿಬ್ರೆಲ್ ಕಾರ್ಟೇಜ್ ಭಾಗವು ಇತರೇ ಸಾಮಾನ್ಯ ವ್ಯಕ್ತಿಗಳ ಹೋಲಿಯಲ್ಲಿ ಬಹಳ ವಿಭಿನ್ನವಾಗಿತ್ತು ಎನ್ನಲಾಗಿದೆ. ಅಲ್ಲದೇ ಈ ಭಾಗ ಮೆದುಳಿನ ಬಹುಮುಖ್ಯ ಭಾಗವೂ ಆಗಿದ್ದು, ಇದೇ ಭಾಗ ಅಸಹಹಜವಾಗಿ ವಿಕಸಿತಗೊಳ್ಳುತ್ತೆ ಅಂತ ಹೇಳಲಾಗುತ್ತದೆ. ಇದೇ ಕಾರಣಕ್ಕೆ ಐನ್ ಸ್ಟೈನ್ ಅವರ ಯೋಚನೆ ಯಾವಗಲೂ ಅಸಾದಾರಣವಾಗಿರುತ್ತಿತ್ತು ಎಂಬುದು ವಿಜ್ಞಾನಿಗಳ ಮಾತು. ಅಷ್ಟೇ ಅಲ್ದೇ ಸಂಶೋಧನೆ ಮುಂದುವರೆದಾಗ ಐನ್ ಸ್ಟೈನ್ ಅವರ ಮೆದುಳಿನಲ್ಲಿ ಬಹುಮುಖ್ಯ ಭಾಗವಾಗಿದ್ದ ರಿಂಕಲ್ ಪ್ಯಾರಿಯೇಟಲ್ ಆಒರೇಕ್ಯುಲ್ ಇಲ್ಲದನ್ನ ಗಮನಿಸಿದ ವೈದ್ಯರೇ ಶಾಕ್ ಆಗಿದ್ದರಂತೆ. ಹೀಗಾಗಿಯೇ ಐನ್ಸ್ ಸ್ಟೈನ್ ಅವರ ಕಲ್ಪನಾ ಶಕ್ತಿ ಮತ್ತು ಗಣಿತ ಶಕ್ತಿ ಬಹಳ ಉತ್ತಮವಾಗಿತ್ತು ಎಂದು ವಿಜ್ಞಾನಿಗಳು ನಂಬಿದ್ದರು.
ಸದ್ಯ ಐನ್ ಸ್ಟೈನ್ ಅವರ ಮೆದುಳಿನ ಸುಮಾರು 40 ಭಾಗಗಳನ್ನ ಅಮೆರಿಕಾದ ಫಿಲಡೆಲ್ಫಿಯ ನಗರದ ಮಟರ್ ಮ್ಯೂಸಿಯಂನಲ್ಲಿ ಸಂಗ್ರಹಿಸಿಡಲಾಗಿದೆ.








