ADVERTISEMENT
Friday, September 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ವಿಶ್ವದ ಮಹಾನ್ ವಿಜ್ಞಾನಿ ಐನ್ ಸ್ಟೈನ್  ಅವರಿಗೆ ಶೂ ಲೇಸ್ ಕೂಡ ಕಟ್ಟಿಕೊಳ್ಲಲು ಬರುತ್ತಿರಲಿಲ್ಲ..!

Namratha Rao by Namratha Rao
October 9, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ವಿಶ್ವದ ಮಹಾನ್ ವಿಜ್ಞಾನಿ ಐನ್ ಸ್ಟೈನ್  ಅವರಿಗೆ ಶೂ ಲೇಸ್ ಕೂಡ ಕಟ್ಟಿಕೊಳ್ಲಲು ಬರುತ್ತಿರಲಿಲ್ಲ..!

ಜೀವನದಲ್ಲಿ ತಪ್ಪೇ ಮಾಡದೇ ಇರುವ ವ್ಯಕ್ತಿ ಇವತ್ತಿನ ವರೆಗೂ ಏನೂ ಹೊಸ ಪ್ರಯತ್ನಗಳನ್ನ ಮಾಡಿಯೇ ಇಲ್ಲ ಎಂಬುದನ್ನ ನಂಬುತ್ತಿದ್ದವರು ವಿಶ್ವದ ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್…  ಮಾರ್ಚ್ 18 1879 ರಲ್ಲಿ ಜರ್ಮನಿಯಲ್ಲಿ ಯಹೂದಿ ಪರಿವಾರದಲ್ಲಿ ಐನ್ ಸ್ಟೈನ್ ಅವರ ಜನನವಾಗಿತ್ತು.

Related posts

ಅಟ್ಟಿಕಾ ಗೋಲ್ಡ್ ಸಾಮ್ರಾಜ್ಯಕ್ಕೆ ಇಡಿ ಶಾಕ್: 4 ರಾಜ್ಯಗಳ 19 ಕಡೆ ಮಹಾ ದಾಳಿ, ಮಾಲೀಕ ಬಾಬು ಪರಾರಿ

ಅಟ್ಟಿಕಾ ಗೋಲ್ಡ್ ಸಾಮ್ರಾಜ್ಯಕ್ಕೆ ಇಡಿ ಶಾಕ್: 4 ರಾಜ್ಯಗಳ 19 ಕಡೆ ಮಹಾ ದಾಳಿ, ಮಾಲೀಕ ಬಾಬು ಪರಾರಿ

September 25, 2026
ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಾಗಬಾರದು: ಜ್ಞಾನೇಶ್ ಕುಮಾರ್ ವಜಾಕ್ಕೆ ಸಿದ್ದರಾಮಯ್ಯ ಪಟ್ಟು.

ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಾಗಬಾರದು: ಜ್ಞಾನೇಶ್ ಕುಮಾರ್ ವಜಾಕ್ಕೆ ಸಿದ್ದರಾಮಯ್ಯ ಪಟ್ಟು.

September 25, 2026

ಐನ್ ಸ್ಟೈನ್ ಅವರ ಜನನದ ಸಮಯದಲ್ಲಿ ಅವರ ತಲೆ ಬಾಕಿ ಮಕ್ಕಳ ಹೋಲಿಕೆಯಲ್ಲಿ ಸ್ವಲ್ಪ ದೊಡ್ಡದಾಗಿರೋದನ್ನ ವೈದ್ಯರು ಗಮನಿಸಿದ್ದರು. ಇನ್ನೂ ಐನ್ ಸ್ಟೈನ್ ಅವರ ಬುದ್ದಿವಂತಿಗೆ ಯಾರೂ ಕೂಡ ಸರಿ ಸಾಟಿಯೇ ಇಲ್ಲ. ಐನ್ ಸ್ಟೈನ್ ಅಗಲಿ ದಶಕಗಳೇ ಕಳೆದಿದ್ರೂ ಇವತ್ತಿಗೂ ವಿಜ್ಞಾನ ಕ್ಷೇತ್ರದಲ್ಲಿ ಐನ್ ಸ್ಟೈನ್ ಅವರ ಥೀಸಿಸ್  ಇಲ್ಲದೇ ಏನೂ ಇಲ್ಲ ಅನ್ನುವಂತಿದೆ.

ವಿಶ್ವದ  ಮಹಾನ್ ವಿಜ್ಞಾನಿ ಐನ್ ಸ್ಟೈನ್ ಅವರು ನಾರ್ಮಲ್ ಮಕ್ಕಳ ರೀತಿ ಇರಲಿಲ್ಲ. ಇತರೇ ಮಕ್ಕಳಿಗಿಂತಲೂ ಅವರ ತಲೆ ದೊಡ್ಡದ್ದಾಗಿತ್ತು  ಎನ್ನುವದನ್ನ ವೈದ್ಯರು ಗಮನಿಸಿದ್ದರು. ಅಲ್ಲದೇ ಪ್ರತಿ ವಿಚಾರದಲ್ಲೂ ಐನ್ ಸ್ಟೈನ್ ಬಹಳ ನಿಧಾನ ಎಂದೇ ಹೇಳಲಾಗಿತ್ತು. ಇನ್ನೂ ಸಾಮಾನ್ಯವಾಗಿ ಮಕ್ಕಳು 1 – 2 ವರ್ಷಗಳಲ್ಲಿ ಮಾತನಾಡೋದನ್ನ ಕಲಿಯುತ್ತಾರೆ. ಆದ್ರೆ ಐನ್ ಸ್ಟೈನ್ ಅವರು 4 ವರ್ಷಗಳ ವರೆಗೂ ಮಾತೇ ಆಡಿರಲಿಲ್ಲ. ಆದ್ರೆ ಒಂದಿನ ಇದ್ದಕ್ಕಿದ್ದ ಹಾಗೆ ಐನ್ ಸ್ಟೈನ್ ಪರಿವಾರದ ಜೊತೆಗೆ ಊಟ ಮಾಡುವಾಗ ಸೂಪ್ ತುಂಬಾ ಬಿಸಿ ಇದೆ ಎಂದು ಹೇಳಿದ್ದರಂತೆ. ಅಚಾನಕ್ ಆಗಿ ಐನ್ ಸ್ಟೈನ್ ಮಾತನಾಡಿದ್ದನ್ನ ಕಂಡು ಮನೆಯವರು ದಂಗಾಗಿದ್ರು ಎನ್ನಲಾಗುತ್ತೆ.

ವಿಚಿತ್ರ ಅಂದ್ರೆ ಐನ್ ಸ್ಟೈನ್ ಬಳಿ ಇಷ್ಟು ವರ್ಷಗಳ ಕಾಲ ಮಾತನಾಡದೇ ಇದ್ದಕ್ಕೆ ಪರಿವಾರದವರು ಕಾರಣ ಕೇಳಿದಾಗ ಐನ್ ಸ್ಟೈನ್ ಅವರು ಕೊಟ್ಟಿದ್ದ  ಉತ್ತರ “ ಇಲ್ಲಿಯ ವರೆಗೂ ಎಲ್ಲವೂ ಸರಿಯಾಗಿಯೇ ಇತ್ತು” ಎಂದಿದ್ದರಂತೆ. ಹೀಗೆ ಅವರು ಅನೇಕ ಸಂದರ್ಭದಲ್ಲಿ ಅಸಹಜ ವಿಚಿತ್ರ  ನಡವಳಿಕೆಗಳಿಂದ ಎಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿಸಿದ್ದಾರೆ. ಐನ್ ಸ್ಟೈನ್ ಯಾರಿಗೂ ಸರಿಯಾಗಿ ಅರ್ಥವಾಗದೇ ಇದ್ದ ವ್ಯಕ್ತಿ ಅಂತಲೂ ಹೇಳಬಹುದು.

ಅಷ್ಟೇ ಅಲ್ಲ ಮಹಾನ್ ವಿಜ್ಞಾನಿ ಐನ್ ಸ್ಟೈನ್ ಅವರು ಟೀನೇಜ್ ಹಂತದ ವರೆಗೂ ಸರಿಯಾಗಿ ದಿನಾಂಕ ಹಾಗೂ ಫೋನ್ ನಂಬರ್ ಗಳನ್ನ ಕೂಡ ನೆನಪಿನಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ ಎನ್ನಲಾಗುತ್ತದೆ. ಅಷ್ಟೇ ಅಲ್ಲ ಸ್ವತಃ ಅವರದ್ದೇ ಟೆಲಿಫೋನ್ ನಂಬರ್ ಗಳು ಅವರಿಗೆ ನೆನಪಿರುತ್ತಿರಲಿಲ್ಲವಂತೆ.

ಆದ್ರೆ ಈ ಬಗ್ಗೆ ಒಮ್ಮೆ ಅವರ ಸಹದ್ಯೋಗಿ ಪ್ರಶ್ನಿಸಿದ್ದರಂತೆ. ಇದಕ್ಕೆ ಐನ್ ಸ್ಟೈನ್ ಅವರು  “ ಟೆಲಿಫೋನ್ ಡೈರೆಕ್ಟರಿನಲ್ಲಿ ಸಿಗುವ ಟೆಲಿಫೋನ್ ನಂಬರ್ ಗಳನ್ನ ನಾನು ನೆನಪಿನಲ್ಲಿ ಏಕೆ ಇಟ್ಟುಕೊಳ್ಳಬೇಕು..?” ಅಂದಿದ್ರಂತೆ. ಇನ್ನೂ ಐನ್ ಸ್ಟೈನನ್ ಅವವರ ಕಾಲಿನ ಬೆರಳುಗಳು ಬಹಳ ಉದ್ದವಿದ್ದ ಕಾರಣ ಅವರು ಸಾಕ್ಸ್ ಹಾಕದೆಯೇ ಶೂಗಳನ್ನ ಧರಿಸುತ್ತಿದ್ದರಂತೆ. ಇನ್ನೂ ಆಶ್ಚರ್ಯಕಾರಿ ವಿಚಾರ ಅಂದ್ರೆ ಐನ್ ಸ್ಟೈನ್  ತಮ್ಮ ಶೂಗಳ ಲೇಸ್ ಗಳನ್ನೂ ಕೂಡ ಇತರರ ಕೈಗಳಿಂದಲೇ ಕಟ್ಟಿಸಿಕೊಳ್ತಿದ್ರು ಎನ್ನಲಾಗುತ್ತೆ. ಕಾರಣ ಅವರಿಗೆ ಸರಿಯಾಗಿ ಶೂಗಳ ಲೇಸ್ ಗಳನ್ನ ಸಹ ಕಟ್ಟಿಕೊಳ್ಳುವುದಕ್ಕೆ ಬರುತ್ತಿರಲಿಲ್ಲವಂತೆ.

ವಿಶ್ವದ ಮಹಾನ್ ವಿಜ್ಞಾನಿ ಐನ್ ಸ್ಟೈನ್ ಅವರು ಚಿಕ್ಕ ವಯಸ್ಸಿನಲ್ಲಿ ವಿದ್ಯಾಭ್ಯಾಸದಲ್ಲಿ ಬಹಳ ಹಿಂದಿದ್ದರಂತೆ.  ಅಷ್ಟೇ ಅಲ್ಲ ಚಿಕ್ಕ ವಯಸ್ಸಿನಲ್ಲಿ ಪೆದ್ದ ವಿದ್ಯಾರ್ಥಿಗಳ ಗುಂಪಿನಲ್ಲಿ ಐನ್ ಸ್ಟೈನ್ ಅವರನ್ನ ಪರಿಗಣನೆಗೆ ತೆಗೆದುಉಕೊಳ್ಳಲಾಗ್ತಿತ್ತಂತೆ. ಅಷ್ಟೇ ಅಲ್ದೇ ಕೆಲವರಂತೂ ಐನ್ ಸ್ಟೈನ್ ಅವರನ್ನ ಶಾರಿರಿಕ , ಮಾನಸಿಕವಾಗಿ ವಿಕಲಾಂಗರು ಅಂತ ಕೂಡ ಕರೆದಿದ್ದರಂತೆ.

ಅಲ್ದೇ ಐನ್ ಸ್ಟೈನ್ ಅವರ ಶಿಕ್ಷಕರು ಕೂಡ ಅವರನ್ನ ಅಷ್ಟಾಗಿ ಇಷ್ಟ ಪಡುತ್ತಿರಲಿಲ್ಲವಂತೆ. ಕಾರಣ ವಿಜ್ಞಾನ , ಗಣಿತ ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲೂ ಐನ್ ಸ್ಟೈನ್ ಅವರು  ಫೇಲ್ ಆಗ್ತಿದ್ರು ಎನ್ನಲಾಗಿದೆ. ಅಷ್ಟೇ ಅಲ್ಲ ಚಿಕ್ಕ ವಯಸಸ್ಸಿನಿಂದಲೂ ಐನ್ ಸ್ಟೈನ್ ಅವರಿಗೆ ಓದುಬರಹದಲ್ಲಿ ಆಸಕ್ತಿಯೇ ಇರಲಿಲ್ಲವಂತೆ. ಆದ್ರೂ ಕೂಡ  ಐನ್ ಸ್ಟೈನ್  ಅವರು ವಿಶ್ವದ ಮುಂದಿಟ್ಟ ವಿಜ್ಞಾನದ ಥೀಸಿಸ್ ಗಳು ಇಲ್ಲ ಅಂದ್ರೆ ವಿಜ್ಞಾನ ದುರ್ಬಲವಾಗುತ್ತದೆ ಅಂತ ಹೇಳಬಹುದು.

18 ಏಪ್ರಿಲ್ 1955 ರಲ್ಲಿ ಐನ್ ಸ್ಟೈನ್ ಅವರು ವಿಧಿವಶವಾದ್ರು. ಆಗ ಡಾ ಥಾಮಸ್ ಹಾರ್ವೆ ಎಂಬುವವರು ಐನ್ ಸ್ಟೈನ್ ಅವರ ಪರಿವಾರದ ಅನುಮತಿ ಇಲ್ಲದೆಯೇ  ಐನ್ ಸ್ಟೈನ್ ಅವರು ಮೆದುಳನ್ನ ಸಂಶೋಧನೆಗಾಗಿ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದರು. ಇದಾದ ನಂತರ ಡಾಕ್ಟರ್ ಹಾರ್ವೆ ಅವರನ್ನ ಕೆಲಸದಿಂದ ಕಿತ್ತುಹಾಕಲಾಗಿತ್ತು.

ಆದ್ರೆ ಹಾರ್ವೆ ಅವರು ಐನ್ ಸ್ಟೈನ್ ಮೆದುಳನ್ನ ಕೇವಲ ಸಂಶೋಧನೆಗಾಗಿ ತೆಗೆದುಕೊಂಡಿದ್ದಾಗಿ ತಿಳಿಸಿದ್ದರು. ಆದ್ರೂ ಸಂಶೋಧನೆಗೆ ಅನುಮತಿ ಸಿಗದೇ ಹೋದ ಪರಿಣಾಮ ಐನ್ ಸ್ಟೈನ್ ಅವರ ಮೆದುಳನ್ನು ಒಂದು ಜಾರನಲ್ಲಿಟ್ಟು ಬೇಸ್ ಮೆಂಟ್ನಲ್ಲಿಟ್ಟಿದ್ದರು. ನಂತರ ಐನ್ ಸ್ಟೈನ್ ಅವರ ಮಗ ಹೆನ್ಸ್ ಆಲರ್ಟ್ ರಿಂದ ಅನುಮತಿ ಪಡೆದ ಹಾರ್ವೆ ಐನ್ ಸ್ಟೈನ್ ಮೆದುಳಿನ ಮೇಲೆ ಸಂಶೋಧನೆ ನಡೆಸಲು ಆರಂಭಿಸಿದ್ರು. ಮೊದಲಿಗೆ ಹಾರ್ವೆ ಐನ್ ಸ್ಟೈನ್ ಅವರ ಮೆದುಳಿನ ತೂಕ  ಮಾಡಿದ್ದರು. ಈ ವೇಳೆ ಮೆದುಳಿನ ತೂಕ 1230 ಗ್ರಾಂ ಇತ್ತು. ಅಂದ್ರೆ ಇತರೇ ಸಾಮಾನ್ಯ ಮನುಷ್ಯರಿಗಿಂತ ತುಂಬಾ ಚಿಕ್ಕದಿತ್ತು. ಒಬ್ಬ ವ್ಯಕ್ತಿಯ ಮೆದುಳಿನ ತೂಕ ಸುಮಾರು 1400 ಗ್ರಾಂ ಇರುತ್ತದೆ. ನಂತರ ಹಾರ್ವೆ ಐನ್ ಸ್ಟೈನ್ ಅವರ ಮೆದುಳನ್ನ 240 ಭಾಗಗಳಾಗಿ ಕತ್ತರಿಸುತ್ತಾರೆ. ಕತ್ತರಿಸಿದ ಎಲ್ಲಾ ಭಾಗಗಳನ್ನ ವಿಶ್ವಾದ್ಯಂತದ ಜನಪ್ರಿಯ ವಿಜ್ಞಾನಿಗಳ ಬಳಿಗೆ ಸಂಶೋಧನೆಗಾಗಿ ಕಳುಹಿಸಿಕೊಡುತ್ತಾರೆ.

ಸಂಶೋಧನೆ ವೇಳೆ ಸಾಮಾನ್ಯವಾಗಿ ಇತರೇ ವ್ಯಕ್ತಿಗಳ ಹೋಲಿಕೆಯಲ್ಲಿ ಐನ್ ಸ್ಟೈನ್ ಅವರ ಮೆದುಳಿನಲ್ಲಿ ಅತಿ ಹೆಚ್ಚು ಸೆಲ್ಸ್ ಇದ್ದದ್ದು ಕಂಡು ಬಂದಿತ್ತು. ಅಲ್ಲದೇ ಮೆದುಳಿನ ಸೆರಿಬ್ರೆಲ್ ಕಾರ್ಟೇಜ್ ಭಾಗವು ಇತರೇ ಸಾಮಾನ್ಯ ವ್ಯಕ್ತಿಗಳ ಹೋಲಿಯಲ್ಲಿ ಬಹಳ ವಿಭಿನ್ನವಾಗಿತ್ತು ಎನ್ನಲಾಗಿದೆ. ಅಲ್ಲದೇ ಈ ಭಾಗ ಮೆದುಳಿನ ಬಹುಮುಖ್ಯ ಭಾಗವೂ ಆಗಿದ್ದು, ಇದೇ ಭಾಗ ಅಸಹಹಜವಾಗಿ ವಿಕಸಿತಗೊಳ್ಳುತ್ತೆ ಅಂತ ಹೇಳಲಾಗುತ್ತದೆ.  ಇದೇ ಕಾರಣಕ್ಕೆ ಐನ್ ಸ್ಟೈನ್ ಅವರ ಯೋಚನೆ ಯಾವಗಲೂ ಅಸಾದಾರಣವಾಗಿರುತ್ತಿತ್ತು ಎಂಬುದು ವಿಜ್ಞಾನಿಗಳ ಮಾತು. ಅಷ್ಟೇ ಅಲ್ದೇ ಸಂಶೋಧನೆ ಮುಂದುವರೆದಾಗ ಐನ್ ಸ್ಟೈನ್ ಅವರ ಮೆದುಳಿನಲ್ಲಿ ಬಹುಮುಖ್ಯ ಭಾಗವಾಗಿದ್ದ ರಿಂಕಲ್ ಪ್ಯಾರಿಯೇಟಲ್ ಆಒರೇಕ್ಯುಲ್ ಇಲ್ಲದನ್ನ ಗಮನಿಸಿದ ವೈದ್ಯರೇ ಶಾಕ್ ಆಗಿದ್ದರಂತೆ. ಹೀಗಾಗಿಯೇ ಐನ್ಸ್ ಸ್ಟೈನ್ ಅವರ ಕಲ್ಪನಾ ಶಕ್ತಿ ಮತ್ತು ಗಣಿತ ಶಕ್ತಿ ಬಹಳ ಉತ್ತಮವಾಗಿತ್ತು ಎಂದು ವಿಜ್ಞಾನಿಗಳು ನಂಬಿದ್ದರು.

ಸದ್ಯ ಐನ್ ಸ್ಟೈನ್ ಅವರ ಮೆದುಳಿನ ಸುಮಾರು 40 ಭಾಗಗಳನ್ನ ಅಮೆರಿಕಾದ ಫಿಲಡೆಲ್ಫಿಯ ನಗರದ ಮಟರ್ ಮ್ಯೂಸಿಯಂನಲ್ಲಿ ಸಂಗ್ರಹಿಸಿಡಲಾಗಿದೆ.

 

 

Tags: albert einstienAll India Institute of Medical Sciencesinteresting factsScience
ShareTweetSendShare
Join us on:

Related Posts

ಅಟ್ಟಿಕಾ ಗೋಲ್ಡ್ ಸಾಮ್ರಾಜ್ಯಕ್ಕೆ ಇಡಿ ಶಾಕ್: 4 ರಾಜ್ಯಗಳ 19 ಕಡೆ ಮಹಾ ದಾಳಿ, ಮಾಲೀಕ ಬಾಬು ಪರಾರಿ

ಅಟ್ಟಿಕಾ ಗೋಲ್ಡ್ ಸಾಮ್ರಾಜ್ಯಕ್ಕೆ ಇಡಿ ಶಾಕ್: 4 ರಾಜ್ಯಗಳ 19 ಕಡೆ ಮಹಾ ದಾಳಿ, ಮಾಲೀಕ ಬಾಬು ಪರಾರಿ

by Shwetha
September 25, 2026
0

ಹಳೆಯ ಚಿನ್ನ ಖರೀದಿ ಮತ್ತು ಅಡವಿಟ್ಟ ಚಿನ್ನ ಬಿಡಿಸಿಕೊಡುವ ಹೆಸರಿನಲ್ಲಿ ಜನಪ್ರಿಯವಾಗಿದ್ದ ಅಟ್ಟಿಕಾ ಗೋಲ್ಡ್ ಕಂಪನಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ಅಕ್ರಮ ಹಣ...

ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಾಗಬಾರದು: ಜ್ಞಾನೇಶ್ ಕುಮಾರ್ ವಜಾಕ್ಕೆ ಸಿದ್ದರಾಮಯ್ಯ ಪಟ್ಟು.

ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಾಗಬಾರದು: ಜ್ಞಾನೇಶ್ ಕುಮಾರ್ ವಜಾಕ್ಕೆ ಸಿದ್ದರಾಮಯ್ಯ ಪಟ್ಟು.

by Shwetha
September 25, 2026
0

ಬೆಂಗಳೂರು: ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನಡವಳಿಕೆ ಮತ್ತು ಕಾರ್ಯವೈಖರಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ....

ಉಳ್ಳವರಿಗೆ ಗ್ಯಾರಂಟಿ ರದ್ದು ಮಾಡಬೇಕಾ, ಬಡವರಿಗೆ ಮಾತ್ರ ಭಾಗ್ಯ ಸೀಮಿತವಾಗಲಿ: ಬಿಜೆಪಿ ಶಾಸಕರ ಪ್ರಸ್ತಾವನೆಗೆ ಡಿಕೆಶಿ ಖಡಕ್ ಕೌಂಟರ್

ಉಳ್ಳವರಿಗೆ ಗ್ಯಾರಂಟಿ ರದ್ದು ಮಾಡಬೇಕಾ, ಬಡವರಿಗೆ ಮಾತ್ರ ಭಾಗ್ಯ ಸೀಮಿತವಾಗಲಿ: ಬಿಜೆಪಿ ಶಾಸಕರ ಪ್ರಸ್ತಾವನೆಗೆ ಡಿಕೆಶಿ ಖಡಕ್ ಕೌಂಟರ್

by Shwetha
September 25, 2026
0

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಭವಿಷ್ಯದ ಬಗ್ಗೆ ಈಗ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಬರಗಾಲದ ನೆಪವೊಡ್ಡಿ ಗ್ಯಾರಂಟಿ ಯೋಜನೆಗಳನ್ನು ಕೇವಲ ಬಡವರಿಗಷ್ಟೇ ಅಂದರೆ ಬಿಪಿಎಲ್...

ನೀಲಿ ಶಾಲು ಸಮಾನತೆಯ ಸಂಕೇತ ನಾನು ದಲಿತ ವಿರೋಧಿಯಲ್ಲ: ದಲಿತ ವಿರೋಧಿ ಎಂಬ ಟೀಕೆಗೆ ಪ್ರತಾಪ್ ಸಿಂಹ ಖಡಕ್ ಕೌಂಟರ್

ನೀಲಿ ಶಾಲು ಸಮಾನತೆಯ ಸಂಕೇತ ನಾನು ದಲಿತ ವಿರೋಧಿಯಲ್ಲ: ದಲಿತ ವಿರೋಧಿ ಎಂಬ ಟೀಕೆಗೆ ಪ್ರತಾಪ್ ಸಿಂಹ ಖಡಕ್ ಕೌಂಟರ್

by Shwetha
September 25, 2026
0

ಟಿ ನರಸೀಪುರ ಘಟನೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಎರಡು ಎಫ್ ಐ ಆರ್ ದಾಖಲಾಗಿರುವ ಬೆನ್ನಲ್ಲೇ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸರ್ಕಾರದ ವಿರುದ್ಧ ವಾಗ್ದಾಳಿ...

5 ಗಂಟೆಗಳ ಕಾಲ ಅಸಹನೀಯ ಕಿರಿಕಿರಿ,ನಾಗರಿಕ ಪ್ರಜ್ಞೆ ಎಲ್ಲಿಗೆ ಹೋಯಿತು:ದೇವರೇ ಈ ದೇಶವನ್ನು ಕಾಪಾಡಬೇಕು – ರೈಲಿನಲ್ಲಿ ಪ್ರಯಾಣಿಕರ ಅಸಭ್ಯ ವರ್ತನೆಗೆ ಅಸಹಾಯಕತೆ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

5 ಗಂಟೆಗಳ ಕಾಲ ಅಸಹನೀಯ ಕಿರಿಕಿರಿ,ನಾಗರಿಕ ಪ್ರಜ್ಞೆ ಎಲ್ಲಿಗೆ ಹೋಯಿತು:ದೇವರೇ ಈ ದೇಶವನ್ನು ಕಾಪಾಡಬೇಕು – ರೈಲಿನಲ್ಲಿ ಪ್ರಯಾಣಿಕರ ಅಸಭ್ಯ ವರ್ತನೆಗೆ ಅಸಹಾಯಕತೆ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

by Shwetha
September 25, 2026
0

ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ನಮಗೆ ಕನಿಷ್ಠ ನಾಗರಿಕ ಪ್ರಜ್ಞೆ ಇರಬೇಕಲ್ಲವೇ? ಇತರರ ವೈಯಕ್ತಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವುದು ಎಷ್ಟು ಸರಿ? ಇಂತಹ ಹತ್ತಾರು ಪ್ರಶ್ನೆಗಳನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram