ಹೆಂಡತಿ ಇಲ್ಲ, ಕರೇಂಟ್ ಇಲ್ಲ ಇನ್ನೂ ನಾನೇಕೆ ಇರಲಿ | ಟ್ರಾನ್ಸ್ಫಾರ್ಮ್ ಕಂಬವೇರಿ ಹೈಡ್ರಾಮ
ದೊಡ್ಡಬಳ್ಳಾಪುರ: ವ್ಯಕ್ತಿಯೊಬ್ಬ ಕಂಠಪೂರ್ತಿ ಮದ್ಯ ಸೇವಿಸಿ, ಟ್ರಾನ್ಸ್ಫಾರ್ಮ್ ಕಂಬವೇರಿ ಹೈಡ್ರಾಮ ನಡೆಸಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಉಜ್ಜನಿ ಗ್ರಾಮದಲ್ಲಿ ನಡೆದಿದೆ.
ಕಳೆದ ರಾತ್ರಿ 45 ವರ್ಷದ ವ್ಯಕ್ತಿ, ಗ್ರಾಮದಲ್ಲಿ ನಿರಂತರ ಲೋಡ್ ಶೆಡ್ಡಿಂಗ್ ಮತ್ತು ಹೆಂಡತಿ ಬಿಟ್ಟು ಹೋಗಿದ್ದಾಳೆಂದು ಸಾಂಸಾರಿಕ ಜೀವನದಲ್ಲಿ ಬೇಸತ್ತು ಕುಡಿದ ಮತ್ತಿನಲ್ಲಿ 11 ಕೆವಿ ವಿದ್ಯುತ್ ಟ್ರಾನ್ಸ್ಫಾರ್ಮ್ ಕಂಬ ಏರಿದ್ದಾನೆ.
ಇದನ್ನು ಕಂಡ ಗ್ರಾಮಸ್ಥರು ಕೂಡಲೇ ಲೈನ್ಮ್ಯಾನ್ಗೆ ವಿಷಯ ತಿಳಿಸಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ನಂತರ ಆತನನ್ನು ಗ್ರಾಮದ ಜನರೆಲ್ಲಾ ಸೇರಿ ಮನವೊಲಿಸಿ ಟ್ರಾನ್ಸ್ಫಾರ್ಮ್ ಕಂಬದಿಂದ ಕೆಳಗಿಳಿಸಿದ್ದಾರೆ. ಇದರಿಂದಾಗಿ ಪ್ರಾಣಾಪಾಯ ತಪ್ಪಿದೆ.









