ಬಳ್ಳಾರಿ : ಜಿಲ್ಲೆಯ ಆಂಧ್ರಪ್ರದೇಶದ ಗಡಿಭಾಗದಲ್ಲಿ ಮದ್ಯದ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಬ್ರೇಕ್ ಹಾಕುವಂತೆ ಒತ್ತಾಯಿಸಿ ಇಟಗಿಹಾಳು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಮದ್ಯದಂಗಡಿ ಬಂದ್ ಮಾಡುವಂತೆ ಒತ್ತಾಯಿಸಿ ಹೆದ್ದಾರಿ ಬಂದ್ ಮಾಡಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದು, ಸ್ಥಳದಲ್ಲೇ ಅಡುಗೆ ತಯಾರಿಸಿ ವಿಭಿನ್ನವಾಗಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಸಿರುಗುಪ್ಪ ತಾಲೂಕಿನ ಇಟಗಿಹಾಳು ಗ್ರಾಮದ ಸುತ್ತಮುತ್ತ ಹಲವು ದಿನಗಳಿಂದ ಮದ್ಯದಂಗಡಿಗಳ ಹಾವಳಿ ಜೋರಾಗಿದೆ. ಇದರಿಂದ ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಈಗಾಗಲೇ ಅನೇಕ ಬಾರಿ ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜ ಆಗಿಲ್ಲ ಎಂದು ದೂರಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಹೆದ್ದಾರಿಯಲ್ಲೇ ಪ್ರತಿಭಟಿಸಲು ಸ್ಥಳೀಯರು ನಿರ್ಧರಿಸಿದ್ದಾರೆ.
ಇನ್ನು ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ಹಿನ್ನೆಲೆ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ರಸ್ತೆಯಲ್ಲೇ ವಾಹನಗಳು ಸಾಲುಗಟ್ಟಿ ನಿಂತಿವೆ.
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.
https://youtu.be/lwfLpyPrcX0








