ಫೆ, 25 ಕ್ಕೆ ತೆರೆಗೆ ಬರಲಿದೆ ಗಂಗೂಬಾಯಿ ಕಥಿಯಾವಾಡಿ….
ಇಷ್ಟು ದಿನಗಳು ಕಾದ ನಂತರ ಇದೀಗ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಚಿತ್ರದ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಚಿತ್ರ ಫೆಬ್ರವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಂಜಯ್ ಲೀಲಾ ಬನ್ಸಾಲಿ ಪ್ರಕಟಿಸಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಫೆಬ್ರವರಿ 25 ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಗಂಗೂಬಾಯಿ ಕಥಿಯಾವಾಡಿ ವೀಕ್ಷಿಸಿ ಎಂದು ಬರದುಕೊಂಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರಕ್ಕೆ ಜಯಂತಿಲಾಲ್ ಗಧಾ ಹಣ ಹೂಡಿದ್ದಾರೆ.
ಚಿತ್ರವನ್ನು ಮೊದಲು ಜನವರಿ 18 ರಂದು ಮತ್ತು ನಂತರ ಫೆಬ್ರವರಿ 18 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ಕರೋನಾ ಮೂರನೇ ಅಲೆಯ ಕಾರಣ ಬಿಡುಗಡೆಯನ್ನು ತಡೆಯಿಡಿಯಲಾಗಿತ್ತು.
ಚಿತ್ರದಲ್ಲಿ ಆಲಿಯಾ ಭಟ್ ಮಾಫಿಯಾ ಕ್ವೀನ್ ಗಂಗೂಬಾಯಿ ಕಥಿಯಾವಾಡಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಹುಸೇನ್ ಜೈದಿ ಅವರ ಪುಸ್ತಕವನ್ನು ಆಧರಿಸಿದೆ. ಗಂಗೂಬಾಯಿಯನ್ನು ಹಣದ ದುರಾಸೆಗೆ ಮಾರಾಟ ಮಾಡಲಾಗುತ್ತದೆ. ಅಲ್ಲಿಂದ ತನ್ನದೇ ಆದ ಬದುಕು ಕಟ್ಟಿಕೊಳ್ಳುವ ಕಥೆಯನ್ನ ಸಿನಿಮಾ ಹೊಂದಿದೆ.
ಆಲಿಯಾ ಭಟ್ ಜೊತೆಗೆ ಅಜಯ್ ದೇವಗನ್, ಶಂತನು ಮಹೇಶ್ವರಿ, ವಿಜಯ್ ರಾಜ್, ಸೀಮಾ ಪಹ್ವಾ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಜಯ್ ದೇವಗನ್, ಹುಮಾ ಖುರೇಷಿ ಮತ್ತು ಇಮ್ರಾನ್ ಹಶ್ಮಿ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ಗಂಗೂಬಾಯಿ ಕಥಿಯವಾಡಿ ಚಿತ್ರದ ಪ್ರಥಮ ಪ್ರದರ್ಶನ ಫೆಬ್ರವರಿ 10 ರ ವರೆಗೆ 20 ನಡೆಯಲಿರುವ 72 ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಡೆಯಲಿದೆ. ನಂತರ ಫೆಬ್ರವರಿ 25 ರಂದು ಹಿಂದಿಯ ಜೊತೆಗೆ ತೆಲುಗಿನಲ್ಲೂ ಬಿಡುಗಡೆಯಾಗಲಿದೆ.