ಮತ್ತೊಂದು “ಎಣ್ಣೆ”ಯ ಬೆಲೆ ಏರಿಕೆ – ಬಿಯರ್ ರೇಟ್ ಕೇಳಿದ್ರೆ ಇಳಿಯುತ್ತೆ ಕಿಕ್
1 min read
ಮತ್ತೊಂದು “ಎಣ್ಣೆ”ಯ ಬೆಲೆ ಏರಿಕೆ – ಬಿಯರ್ ರೇಟ್ ಕೇಳಿದ್ರೆ ಇಳಿಯುತ್ತೆ ಕಿಕ್
ರಾಜ್ಯದಲ್ಲಿ ಬೆಲೆ ಏರಿಕೆಯ ಬಿಸಿ ಮುಂದುವರಿದೆ. ಪೆಟ್ರೋಲ್ ಡೀಸೆಲ್ , ವಿದ್ಯುತ್ ಬೆಲೆಗಳು ಗಗನ ಮುಟ್ಟಿದ್ದು ಆಯ್ತು ಈ ಮತ್ತೊಂದು ಇಂಧನದ ಬೆಲೆ ಜಾಸ್ತಿಯಾಗಿದೆ, ಇದೀಗ ಮದ್ಯಪಾನ ಪ್ರಿಯರ ಸರದಿ, ಎಣ್ಣೆ ಪ್ರಿಯರಿಗೆ ಕಿಕ್ ಇಳಿಸೋ ಸುದ್ದಿ ಹೊರಬಿದ್ದಿದೆ. ಮದ್ಯಪಾನದ ಬೆಲೆ ಏರಿಕೆ ಮಾಡುವ ಕುರಿತು ಮದ್ಯಪಾನ ಕಂಪನಿಗಳು ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿ ಅನುಮತಿಯನ್ನ ಪಡೆದುಕೊಂಡಿವೆ.
ಬಿಯರ್ ಉತ್ಪಾದನೆಗೆ ಪ್ರಮುಖವಾಗಿ ಬಳಸುವ ಬಾರ್ಲಿ ರಷ್ಯಾ ಮತ್ತು ಉಕ್ರೇನ್‌ನಿಂದ ಆಮದಾಗುತ್ತಿತ್ತು. ಅಲ್ಲಿ ಯುದ್ಧ ನಡೆಯುತ್ತಿರುವುದರಿಂದ ಅಗತ್ಯಕ್ಕೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ. ಜೊತೆಗೆ ಕಚ್ಛಾ ವಸ್ತುಗಳ ಬೆಲೆ ಏರಿಕೆಯ ಜೊತೆಗೆ ಡೀಸೆಲ್ ಮತ್ತು ಪೆಟ್ರೋಲ್ ದರ ಹೆಚ್ಚಳದಿಂದ ಸಾಗಣೆ ದರ ಹೆಚ್ಚಳವಾಗಿರುವುದರಿಂದ ಬಿಯರ್ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂಬುದು ಕಂಪನಿಗಳ ಹೇಳಿಕೆ. ಪ್ರತಿ ಬಾಟಲ್‌ಗೆ 5 ರಿಂದ 10 ರೂ. ಏರಿಸುವ ಪ್ರಸ್ತಾಪವನ್ನು ನಿಯಮದಂತೆ ಅಬಕಾರಿ ಇಲಾಖೆಗೆ ಸಲ್ಲಿಸಿ, ಅನುಮತಿ ಪಡೆದುಕೊಂಡಿವೆ.
ಏ. 15ರಿಂದ ಕಿಂಗ್ ಫಿಷರ್, ಬಡ್ ವೈಸರ್, ಟುಬೊರ್ಗ್ ಸೇರಿದಂತೆ ಎಲ್ಲಾ ಬಗೆಯ ಬಿಯರ್ ಮೇಲಿನ ಪರಿಷ್ಕೃತ ದರ ಜಾರಿಗೆ ಬರಲಿದೆ,” ಎಂದು ಮೂಲಗಳು ಖಚಿತಪಡಿಸಿವೆ.