ಚೀನಾ ಸರಕುಗಳನ್ನು ಬಹಿಷ್ಕರಿಸಲು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ನಿರ್ಧಾರ
ಹೊಸದಿಲ್ಲಿ, ಜೂನ್ 18: ಗಾಲ್ವನ್ ಕಣಿವೆಯಲ್ಲಿ 20 ಮಂದಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ ಚೀನಾಗೆ ತಕ್ಕ ಶಾಸ್ತ್ರ ಮಾಡಿರುವ ಭಾರತ ಸುಮಾರು 40ಕ್ಕೂ ಹೆಚ್ಚು ಚೀನಾ ಸೈನಿಕರನ್ನು ಹತ್ಯೆ ಮಾಡಿದೆ. ಅಷ್ಟೇ ಅಲ್ಲ ಸನ್ನದ್ಧ ಸ್ಥಿತಿಯಲ್ಲಿ ಸೇನೆ ಗಡಿಯನ್ನು ಕಾಯುತ್ತಿದೆ. ಇದೇ ವೇಳೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವೂ
ಚೀನಾಕ್ಕೆ ಬುದ್ಧಿ ಕಲಿಸಲು ಸಜ್ಜಾಗಿದೆ. ಚೀನಾ ವಸ್ತುಗಳಿಗೆ ಭಾರತ ಪ್ರಮುಖ ಮಾರುಕಟ್ಟೆಯಾಗಿರುವ ಕಾರಣ ಚೀನಾ ಉತ್ಪನ್ನಗಳಿಗೆ ನಿರ್ಬಂಧ ಹೇರಿ ಆರ್ಥಿಕವಾಗಿ ತಿರುಗೇಟು ನೀಡಲು ಮುಂದಾಗಿದೆ.
ಗೊಂಬೆ, ಪೀಠೋಪಕರಣ, ವಾಚ್, ಕಾಸ್ಮೆಟಿಕ್ಸ್ ಸೇರಿದಂತೆ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಚೀನಿ ಉತ್ಪನ್ನಗಳನ್ನು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ನಿಷೇಧಿಸಿದೆ .
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ಪ್ರವೀಣ್ ಖಂಡೇಲ್ವಾಲ್ ಚೀನಾ ಭಾರತೀಯ ಯೋಧರನ್ನು ಹತ್ಯೆ ಮಾಡಿದ ಹಿನ್ನಲೆಯಲ್ಲಿ ಚೀನಾ ಸರಕುಗಳನ್ನು ಬಹಿಷ್ಕರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ಕೊರೊನಾ ಸೋಂಕು ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ಚೀನಾದ ವಸ್ತುಗಳ ಅಮದು ಶೇಕಡಾ 40ರಷ್ಟು ಕುಸಿದಿದ್ದು, ಇದೀಗ ಭಾರತೀಯ ಯೋಧರ ಹತ್ಯೆಗೆ ಪ್ರತೀಕಾರವಾಗಿ ಎಲ್ಲಾ ತರಹದ ಚೀನಾ ಉತ್ಪನ್ನಗಳನ್ನು ನಿರ್ಬಂಧಿಸಲಾಗುವುದು ಎಂದು ಕೊಲ್ಕತ್ತಾ ಕಸ್ಟಮ್ಸ್ ಹೌಸ್ ಏಜೆಂಟ್ ಅಸೋಸಿಯೇಷನ್ ಅಧ್ಯಕ್ಷ ಸುಜಿತ್ ಚಕ್ರವರ್ತಿ ಹೇಳಿದ್ದಾರೆ