ಒಂದೆಡೆ ಇಡೀ ದೇಶವೇ ರಾಮ ಮಂದಿರ ನಿರ್ಮಾಣದ ಸರ್ಕಾರದ ನಿಲುವನ್ನು ಸ್ವಾಗತಿಸಿದ್ದು, ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದೆ. ಆದ್ರೆ ಮತ್ತೊಂದೆಡೆ ತನ್ನ ಹಳೇ ಚಾಳಿ ಮುಂದುವರೆಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ವಿಚಾರವಾಗಿ ಮತ್ತೆ ಕ್ಯಾತೆ ತೆಗೆದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಂಡಳಿ “ ಆ ಜಾಗದಲ್ಲಿ ಇದ್ದದ್ದು, ಬಾಬ್ರಿ ಮಸೀದಿಯೇ” ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ನ ತೀರ್ಪನ್ನು ಪ್ರಶ್ನಿಸಿದೆ. ಅಲ್ಲದೇ “ ಅಲ್ಲಿ ಸದಾ ಇದ್ದದ್ದು ಬಾಬ್ರಿ ಮಸೀದಿಯೇ, ಹಿಂದೆಯೂ ಅಲ್ಲಿ ಬಾಬ್ರಿ ಮಸೀದಿ ಇತ್ತು, ಮುಂದೆಯೂ ಅಲ್ಲಿಯೇ ಇರಲಿದೆ ಎಂದು ಹೇಳಿಕೊಂಡಿದೆ.
ಇನ್ನೂ “ ಅನ್ಯಾಯದ, ದಬ್ಬಾಳಿಕೆಯ, ನಾಚಿಕೆಗೇಡಿನ ಮತ್ತು ಬಹುಸಂಖ್ಯಾತರ ತುಷ್ಟಿಕರಣದ ನಿರ್ಧಾರಗಳು ಯಾವುವೂ ಇಲ್ಲಿ ಉಳಿಯುವುದಿಲ್ಲ. ಈ ರೀತಿ ಮಾಡಿದರೆ ನಿಜಾಂಶ ಬದಲಾಗುವುದಿಲ್ಲ. ಯಾವುದೇ ಪರಿಸ್ಥಿತಿ ಶಾಶ್ವತವಾಗಿ ಉಳಿಯುವುದಿಲ್ಲ, ದುಃಖಿಸುವ ಅಗತ್ಯವಿಲ್ಲ. ಹಗಿಯಾ ಸೋಫಿಯಾ ಇದಕ್ಕೆ ಉತ್ತಮ ಉದಾಹರಣೆ” ಎಂದಿದೆ.








