ಆಂಗ್ಲರ ಬೇಟೆಗೆ ಭಾರತದ ಸಿಂಹಿಣಿಯರು ಸಜ್ಜು
ನವದೆಹಲಿ : ಮುಂದಿನ ತಿಂಗಳು ನಡೆಯಲಿರುವ ಇಂಗ್ಲೆಂಡ್ ಪ್ರವಾಸಕ್ಕೆ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಪ್ರಕಟವಾಗಿದೆ. ತಂಡಕ್ಕೆ ಅನುಭವಿ ವೇಗಿ ಶಿಖಾ ಪಾಂಡೆ ಹಾಗೂ ಟಿ20 ಜತೆಗೆ ಟೆಸ್ಟ್, ಏಕದಿನ ತಂಡಕ್ಕೆ ಶೆಫಾಲಿ ವರ್ಮ ವಾಪಸ್ ಆಗಿದ್ದಾರೆ.
ಇನ್ನು ಮುಖ್ಯವಾಗಿ ಜಾಖರ್ಂಡ್ನ ಯುವ ವಿಕೆಟ್ ಕೀಪರ್ ಇಂದ್ರಾಣಿ ರಾಯ್ ಇದೇ ಮೊದಲ ಬಾರಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಫಿಟ್ನೆಸ್ ಕೊರತೆಯ ಕಾರಣದಿಂದಾಗಿ ತಂಡದಲ್ಲಿ ಸ್ಥಾನ ಪಡೆದಿಲ್ಲ. ಸ್ನೇಹ್ ರಾಣಾ 2016ರ ಬಳಿಕ ತಂಡಕ್ಕೆ ಮರಳಿದ್ದಾರೆ.
ಸದ್ಯ ಭಾರತದ ತಂಡವನ್ನ ಗಮನಿಸಿದ್ರೆ ನೀತು ಡೇವಿಡ್ ಸಾರಥ್ಯದ ಆಯ್ಕೆ ಸಮಿತಿ, ಕೆಲವೊಂದು ಪ್ರಯೋಗಗಳನ್ನು ಮಾಡುತ್ತಾ, ಏಕೈಕ ಟೆಸ್ಟ್, 3 ಏಕದಿನ, 3 ಟಿ20 ಪಂದ್ಯಗಳಿಗೆ ಬಲಿಷ್ಠ ತಂಡವನ್ನು ಆರಿಸಿದೆ. ಜೂನ್ 16ರಿಂದ ಜುಲೈ 15ರವರೆಗೆ ಪ್ರವಾಸ ನಡೆಯಲಿದೆ.
ಇನ್ನು ತಂಡ ಹೀಗಿದೆ.
ಟೆಸ್ಟ್-ಏಕದಿನ ತಂಡ: ಮಿಥಾಲಿ ರಾಜ್ (ನಾಯಕಿ), ಸ್ಮತಿ ಮಂದನಾ, ಹರ್ಮಾನ್ಪ್ರೀತ್ ಕೌರ್ (ಉಪನಾಯಕಿ), ಪೂನಂ ರಾವತ್, ಪ್ರಿಯಾ ಪೂನಿಯಾ, ದೀಪ್ತಿ ಶರ್ಮ, ಜೆಮೀಮಾ ರೋಡ್ರಿಗಸ್, ಶೆಫಾಲಿ ವರ್ಮ, ಸ್ನೇಹ್ ರಾಣಾ, ತಾನಿಯಾ ಭಾಟಿಯಾ, ಇಂದ್ರಾಣಿ ರಾಯ್, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸಾಕರ್, ಅರುಂಧತಿ ರೆಡ್ಡಿ, ಪೂನಂ ಯಾದವ್, ಏಕ್ತಾ ಬಿಷ್ಟ್, ರಾಧಾ ಯಾದವ್.
ಟಿ20 ತಂಡ: ಹರ್ಮಾನ್ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂದನಾ, ದೀಪ್ತಿ ಶರ್ಮ, ಜೆಮೀಮಾ ರೋಡ್ರಿಗಸ್, ಶೆಫಾಲಿ ವರ್ಮ, ರಿಚಾ ಘೋಷ್, ಹರ್ಲೀನ್ ಡಿಯೋಲ್, ಸ್ನೇಹ್ ರಾಣಾ, ತಾನಿಯಾ ಭಾಟಿಯಾ, ಇಂದ್ರಾಣಿ ರಾಯ್, ಶಿಖಾ ಪಾಂಡೆ, ಪೂಜಾ ವಸಾಕರ್, ಅರುಂಧತಿ ರೆಡ್ಡಿ, ಪೂನಂ ಯಾದವ್, ಏಕ್ತಾ ಬಿಷ್ಟ್, ರಾಧಾ ಯಾದವ್, ಸಿಮ್ರಾನ್ ದಿಲ್ ಬಹದೂರ್.