ರಾಜಾಹುಲಿ B S Yediyurappa ಬೆನ್ನಿಗೆ ನಿಂತ ಅಖಿಲ ಭಾರತ ವೀರಶೈವ ಮಹಾಸಭೆ
ದಾವಣಗೆರೆ: ಸಿಎಂ ಬಿ.ಎಸ್. ಯಡಿಯೂರಪ್ಪಗೆ ಅಖಿಲ ಭಾರತ ವೀರಶೈವ ಮಹಾಸಭೆಯ ಬೆಂಬಲ ಇದೆ ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ.
ರಾಜ್ಯ ಬಿಜೆಪಿಯಲ್ಲಿ ಈ ವಿಚಾರವಾಗಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು, ಮಠಾಧೀಶರು ಬಿ.ಎಸ್.ಯಡಿಯೂರಪ್ಪ ಅವರ ಪರ ಬ್ಯಾಟ್ ಬೀಸುತ್ತಿದ್ದಾರೆ.
ಇದೀಗ ಬಿಎಸ್ ವೈ ಪರ ಅಖಿಲ ಭಾರತ ವೀರಶೈವ ಮಹಾಸಭೆ ನಿಂತಿದೆ.
ಈ ಕುರಿತು ಮಾತನಾಡಿರುವ ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ, ಈಗ ಕೊರೊನಾ ಇದೆ.
ಯಡಿಯೂರಪ್ಪನವರನ್ನು ಬದಲಾಯಿಸುವ ಪರಿಸ್ಥಿತಿ ಇಲ್ಲ. ಈಗಾಗಲೇ ಸ್ವಾಮೀಜಿಗಳು ಸಹ ಈ ಬಗ್ಗೆ ಮಾತಾಡಿದ್ದು, ಜೊತೆಗೆ ವೀರಶೈವ ಮಹಾಸಭೆ ಸಹ ಯಡಿಯೂರಪ್ಪ ಅವರ ಜೊತೆಗಿದೆ, ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳಿದ್ದಾರೆ.









