ಮಾನವ ಅಂಗಗಳ ಕಳ್ಳಸಾಗಣೆ – ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳ ವಿರುದ್ಧ ತನಿಖೆಗೆ ಆದೇಶಿಸಿದ ಯೋಗಿ ಆದಿತ್ಯನಾಥ್ Alleged organ racket
ಲಕ್ನೋ, ನವೆಂಬರ್27: ಉತ್ತರ ಭಾರತದಲ್ಲಿ ನಿರ್ಲಕ್ಷ್ಯ ಮತ್ತು ಮಾನವ ಅಂಗಗಳ ಕಳ್ಳಸಾಗಣೆ ದೂರುಗಳ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆಮುಖ್ಯಮಂತ್ರಿ ಕಚೇರಿಯಲ್ಲಿ ದೂರು ದಾಖಲಾಗಿದ್ದು, ನಂತರ ತನಿಖೆಗೆ ಆದೇಶಿಸಲಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ವೈದ್ಯಕೀಯ ಆರೋಗ್ಯ, ಈ ಬಗ್ಗೆ ತನಿಖೆ ನಡೆಸಲಿದ್ದಾರೆ.
Alleged organ racket

ದೂರುದಾರ ಯುಕ್ತಾ ಪಾಂಡೆ ಪ್ರಕಾರ, ಆಕೆಯ ಸಹೋದರ ಆದರ್ಶ್ ಕಮಲ್ ಪಾಂಡೆ (28) ಅವರಿಗೆ ಸೆಪ್ಟೆಂಬರ್ 11 ರಂದು ಕೋವಿಡ್-19 ಸೋಂಕು ಧೃಡ ಪಟ್ಟಿತ್ತು. ನಂತರ ಅವರನ್ನು ಇಂಟಿಗ್ರಾಲ್ ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಲಾಯಿತು. ಬಳಿಕ ಅವರನ್ನು ಚಿಕಿತ್ಸೆಗಾಗಿ ಎರಾ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು.
ಆದರ್ಶ್ ತನ್ನ ಸಹೋದರಿಗೆ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿ ರೋಗಿಗಳ ಅಂಗಗಳನ್ನು ತೆಗೆದುಹಾಕುವ ಸಾಧ್ಯತೆಯ ಬಗ್ಗೆ ತಿಳಿಸಿದ್ದರು. ದೂರಿನಲ್ಲಿ, ಆದರ್ಶ್ ಈ ಪ್ರಕರಣದಲ್ಲಿ ಸರ್ಕಾರಿ ಸಾಕ್ಷಿಯಾಗಲು ಬಯಸಿದ್ದರು. ಅವರ ಸಂಭಾಷಣೆಯ ಬಗ್ಗೆ ತಿಳಿದ ಆಸ್ಪತ್ರೆಯು, ಅವರನ್ನು ಸಾಮಾನ್ಯ ವಾರ್ಡ್‌ನಿಂದ ಐಸಿಯುಗೆ ಸ್ಥಳಾಂತರಿಸಿತು.
ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್ ನೊಂದಿಗೆ ಲಕ್ಷ್ಮಿ ವಿಲಾಸ್ ಬ್ಯಾಂಕ್ ವಿಲೀನ
ಸೆಪ್ಟೆಂಬರ್ 22 ರಂದು, ಭಯಭೀತರಾದ ಆದರ್ಶ್ ನನ್ನ ಜೀವವು ಅಪಾಯದಲ್ಲಿದೆ, ತನ್ನನ್ನು ಕೂಡಲೇ ಆಸ್ಪತ್ರೆಯಿಂದ ಬಿಡುಗಡೆಗೊಳಿಸುವಂತೆ ತನ್ನ ಸಹೋದರಿಯನ್ನು ವಿನಂತಿಸಿದರು. ಈ ಮಧ್ಯೆ ಆದರ್ಶ್ ಸೆಪ್ಟೆಂಬರ್ 26 ರಂದು ಆಸ್ಪತ್ರೆಯಲ್ಲಿ ನಿಧನರಾದರು ಎಂದು ಉಲ್ಲೇಖಿಸಲಾಗಿದೆ.

ಎರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಫರೀಡಿ, ಕಾಲೇಜು ರೋಗಿಗಳಿಗೆ ಉತ್ತಮ ಸೇವೆಗಳನ್ನು ನೀಡುತ್ತಿದೆ. ಈ ಸಂದರ್ಭದಲ್ಲಿ, ರೋಗಿಗೆ ನೀಡಿದ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಮ್ಒ) ಗೆ ನೀಡಲಾಗಿದೆ. ಮತ್ತೊಂದು ತನಿಖೆ ಇದ್ದರೆ, ನಾವು ಸಂಪೂರ್ಣವಾಗಿ ಸಹಕರಿಸುತ್ತೇವೆ ಎಂದು ಹೇಳಿದ್ದಾರೆ.
ಆಸ್ಪತ್ರೆಯು ತನ್ನ ಸಹೋದರನ ಎರಡು ಸೆಲ್ ಫೋನ್ಗಳನ್ನು ಸಹ ಹಿಂದಿರುಗಿಸಿಲ್ಲ, ಅದು ಕೆಲವು ನಿರ್ಣಾಯಕ ಪುರಾವೆಗಳನ್ನು ಹೊಂದಿರಬಹುದು ಎಂದು ಆದರ್ಶ್ ಸಹೋದರಿ ಆರೋಪಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಚಳಿಗಾಲಕ್ಕೆ ಕರಿಮೆಣಸಿನ 5 ಸೂಪರ್ ಪವರ್‌ಫುಲ್ ಆರೋಗ್ಯ ಪ್ರಯೋಜನಗಳುhttps://t.co/FLJEctVJQv
— Saaksha TV (@SaakshaTv) November 26, 2020
ಆಯುಷ್ಮಾನ್ ಭವ – ಯೋಗ ಗುರು ಶ್ರೀ ನರೇಂದ್ರ ಕಾಮತ್ ಕೆ ಅವರಿಂದ ಸಾಕ್ಷಾಟಿವಿಯಲ್ಲಿ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಯೋಗಾಸನದ ಬಗ್ಗೆ ಮಾಹಿತಿ #yoga#Kannada#yogateacherhttps://t.co/pRB58lu6J7
— Saaksha TV (@SaakshaTv) November 25, 2020








