ನಟ ಅಲ್ಲು ಅರ್ಜುನ್ ನಟನೆಯ ಹೈವೋಲ್ಟೇಜ್ ಸಿನಿಮಾ `ಪುಷ್ಪಾ-2′ (Pushpa-2) ಡಿಜಿಟಲ್ ಮಾರುಕಟ್ಟೆಯಲ್ಲಿಯೂ ದಾಖಲೆ ಬರೆಯುತ್ತಿದೆ. ಸಿನಿಮಾದ ಡಿಜಿಟಲ್ ಹಕ್ಕು (Digital Rights) ಮಾರಾಟ ಭರ್ತಿ 270 ಕೋಟಿ ರೂ.ಗೆ ಮಾರಾಟವಾಗಿದ್ದು, ದಾಖಲೆ ಬರೆದಿದೆ.
ಸುಕುಮಾರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್, ಸುನೀಲ್ ಸೇರಿದಂತೆ ಅತೀ ದೊಡ್ಡ ತಾರಾಗಣವೇ ನಟಿಸಿದೆ. ಪಾರ್ಟ್-1 ಸಿನಿಮಾ ಭಾರೀ ಯಶಸ್ಸು ಕಂಡು ಬಂದ ಹಿನ್ನೆಲೆಯಲ್ಲಿ ಪಾರ್ಟ್-2 ಸಿನಿಮಾಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.
ಡಿಫರೆಂಟ್ ಮೇಕಿಂಗ್, ವಿಭಿನ್ನ ಸಾಂಗ್ ಹಾಗೂ ನಾಯಕನಟ ಅಲ್ಲು ಅರ್ಜುನ್ ಗಂಗಮ್ಮನ ಪಾತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಸ್ಯಾಂಪಲ್ಸ್ ಇಂದಲೇ ಫ್ಯಾನ್ಸ್ ಕ್ರೇಜ್ ಹೆಚ್ಚಿಸಿರುವ ಸಿನಿಮಾ ಮಾರ್ಕೆಟ್‌ನಲ್ಲೂ ಟ್ರೆಂಡ್ ಸೃಷ್ಟಿಸಿದೆ.
ಅಲ್ಲು ಅರ್ಜುನ್ ಕರಿಯರ್ ನಲ್ಲಿಯೇ ಈ ಚಿತ್ರ ತುಂಬಾ ವಿಶೇಷವಾಗಿದ್ದಾಗಿದೆ. ಈಗ ಡಿಜಿಟಲ್ ಮಾರುಕಟ್ಟೆಯಲ್ಲಿಯೂ ಸದ್ದು ಮಾಡುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಪುಷ್ಪ-2 ಸಿನಿಮಾ ಆಗಸ್ಟ್ 15ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಬಿಡುಗಡೆಯ ರಿಲೀಸ್ ಡೇಟ್ ಮುಂದೂಡಲಾಗಿದೆ. ಡಿಸೆಂಬರ್ 6ಕ್ಕೆ ಬೆಳ್ಳಿ ತೆರೆಗೆ ಅಪ್ಪಳಿಸಲು ಚಿತ್ರ ತಂಡ ಸಿದ್ಧತೆ ಮಾಡಿಕೊಂಡಿದೆ.
ಈಗಾಗಲೇ ಟೀಸರ್ ಹಾಗೂ ಹಾಡುಗಳಿಂದ ಗಮನ ಸೆಳೆದ ಪುಷ್ಪ, ಡಿಜಿಟಲ್ ಹಕ್ಕು ಮಾರಾಟದಿಂದ ಮತ್ತಷ್ಟು ಸದ್ದು ಮಾಡುತ್ತಿದೆ. ಈಗ ನೆಟ್‌ಫ್ಲಿಕ್ಸ್ ಸಂಸ್ಥೆ ಬರೋಬ್ಬರಿ 270 ಕೋಟಿ ರೂ.ಗೆ ಪುಷ್ಪ-2 ಸಿನಿಮಾದ ಡಿಜಿಟಲ್ ಹಕ್ಕು ಖರೀದಿಸಿದೆ ಎಂದು ತಿಳಿದು ಬಂದಿದೆ.








