ಪುಷ್ಪ : ಅಲ್ಲು ಅರ್ಜುನ್ ಗೆ ರಾಷ್ಟ್ರ ಪ್ರಶಸ್ತಿ…?
ಭಾರತದಲ್ಲಿ ಸದ್ಯ ಪುಷ್ಪ ಹವಾ ಜೋರಾಗಿದೆ.. ಸಿನಿಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಥಿಯೇಟರ್ ಗೆ ಬರಲು ದಿನಗಣನೆ ಶುರುವಾಗಿದೆ.. ಅಲ್ಲು ಅಭಿಮಾನಿಗಳ ನಡುವೆ ಜಾತ್ರೆ ಆರಂಭವಾಗಿದೆ.. ಸಿನಿಮಾದ ಟ್ರೇಲರ್ ಹಾಡುಗಳು ಐದೂ ಭಾಷೆಗಳಲ್ಲೂ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ..
ಸುಕುಮಾರ್ ನಿರ್ದೇಶಿಸಿ , ಮೈತ್ರಿ ಮೂವೀಸ್ ನಿರ್ಮಿಸಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ತೆಲುಗು , ಕನ್ನಡ , ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಲಿದೆ.. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಸಿಕ್ಕಾಪಟ್ಟೆ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅವರ ವಿಭಿನ್ನ ಮ್ಯಾನರಿಸಂ ಸಿನಿಮಾದ ಕಾತರತೆಯನ್ನ ಮತ್ತಷ್ಟು ಹೆಚ್ಚಿಸಿದೆ..
ಮುಖ್ಯವಾಗಿ ಈ ಸಿನಿಮಾದಲ್ಲಿ ದೇವಿ ಶ್ರೀ ಪ್ರಸಾದ್ ಅವರ ಮ್ಯೂಸಿಕ್ ಮ್ಯಾಜಿಕ್ ಮಾಡಿದೆ.. ಸದ್ಯ ದೇವಿ ಶ್ರೀ ಪ್ರಸಾದ್ ಅವರು ಅಲ್ಲು ಬಗ್ಗೆ ಒಂದು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.. ಹೌದು ಸಿನಿಮಾದಲ್ಲಿ ಅಲ್ಲು ನಟನೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕು ಎಂದಿದ್ದಾರೆ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರು..
ಅಲ್ಲದೇ ಸಿನಿಮಾ ಬಗ್ಗೆ ಮಾತನಾಡಿರುವ ದೇವಿ ಶ್ರೀ ಪ್ರಸಾದ್ , ಪುಷ್ಪ ಸಿನಿಮಾದಲ್ಲಿ ಒಂದು ಅದ್ಭುತ ಸಾಹಸ ದೃಶ್ಯ ಇದೆ. ಇದು ಇತ್ತೀಚಿನ ಚಿತ್ರಗಳಲ್ಲಿ ಹೊಸದು ಎಂದು ಹೇಳುವ ಮೂಲಕ ಮತ್ತಷ್ಟು ಕಾತರತೆ ಹೆಚ್ಚಿಸಿದ್ದಾರೆ.. ಇದೇ ವಾರ ಅಂದ್ರೆ ಡಿಸೆಂಬರ್ 17ಕ್ಕೆ ಸಿನಿಮಾ ರಿಲೀಸ್ ಆಗಲಿದೆ.. ಈ ಸಿನಿಮಾದಲ್ಲಿ ಅಲ್ಲು ಜೊತೆ ರಷ್ಮಿಕಾ ಮಂದಣ್ಣ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.. ಕನ್ನಡದ ಡಾಲಿ ಧನಂಜಯ್ ಕೂಡ ಈ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ..