ಪುಷ್ಪ ಸಿನಿಮಾದ ಟ್ರೇಲರ್ ರಿಲೀಸ್ ಡೇಟ್ ರಿವೀಲ್..!
ಹೈದ್ರಾಬಾದ್ : ಅಲ್ಲು ಅರ್ಜುನ್ ಸಖತ್ ವಿಭಿನ್ನವಾಗಿ ಕಾಣಿಸಿಕೊಳ್ತಾಯಿರುವ ಬಹುನಿರೀಕ್ಷೆ ಪ್ಯಾನ್ ಇಂಡಿಯಾ ಚಿತ್ರ ಪುಷ್ಪ ಈಗಾಗಲೇ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ.. ಬಾಹುಬಲಿ , ಕೆಜಿಎಫ್ ಹಾದಿಯಲ್ಲಿ ಸಾಗಿರುವ ಚಿತ್ರ 2 ಸರಣಿಗಳಲ್ಲಿ ತೆರೆಕಾಣಲಿದೆ.. ಈ ನಡುವೆ ಸಿನಿಮಾದ ಹಾಡುಗಳು ಸಖತ್ ಸೌಂಡ್ ಮಾಡ್ತಿವೆ.. ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿವೆ.. ಶ್ರೀವಲ್ಲಿ ಇರಬಹುದು, ಜೋಕೆ ಜೋಕೆ , ಸಾಮಿ ಸಾಮಿ, ಏ ಮಗಾ ನಾಲ್ಕೂ ಹಾಡುಗಳೂ ಕೂಡ ಐದೂ ಭಾಷೆಗಳಲ್ಲಿ ರಿಲೀಸ್ ಆಗಿ ಸಕ್ಸಸ್ ಕಂಡಿದೆ.
ಸಿನಿಮಾ ಡಿಸೆಂಬರ್ 17 ಕ್ಕೆ ಥಿಯೇಟರ್ ಗಳಲ್ಲಿ ಅದ್ಧೂರಿಯಾಗಿಯೇ ರಿಲೀಸ್ ಆಗಲಿದೆ.. ಈ ನಡುವೆ ಇಂದು ಅಭಿಮಾನಿಗಳಿಗೆ ಸಿನಿಮಾ ತಂಡವು ಗುಡ್ ನ್ಯೂಸ್ ಕೊಟ್ಟಿದೆ.. ಪುಷ್ಪ ಟ್ರೇಲರ್ ಅನ್ನ ಡಿಸೆಂಬರ್ 6 ರಂದು ರಲೀಸ್ ಮಾಡೋದಾಗಿ , ಸಿನಿಮಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್ ಅನೌನ್ಸ್ ಮಾಡಿದೆ.. ಸುಕುಮಾರ್ ನಿರ್ದೆಶನದ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ರೆ , ಜಗಪತಿ ಬಾಬು , ಪ್ರಕಾಶ್ , ರಾಜ್ , ಡಾಲಿ ಧನಂಜಯ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ..