ಪುಷ್ಪ ಸಿನಿಮಾದ ಟ್ರೇಲರ್ ರಿಲೀಸ್ ಡೇಟ್ ರಿವೀಲ್..!

1 min read

ಪುಷ್ಪ ಸಿನಿಮಾದ ಟ್ರೇಲರ್ ರಿಲೀಸ್ ಡೇಟ್ ರಿವೀಲ್..!

ಹೈದ್ರಾಬಾದ್ : ಅಲ್ಲು ಅರ್ಜುನ್ ಸಖತ್ ವಿಭಿನ್ನವಾಗಿ ಕಾಣಿಸಿಕೊಳ್ತಾಯಿರುವ ಬಹುನಿರೀಕ್ಷೆ ಪ್ಯಾನ್ ಇಂಡಿಯಾ ಚಿತ್ರ ಪುಷ್ಪ ಈಗಾಗಲೇ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ.. ಬಾಹುಬಲಿ , ಕೆಜಿಎಫ್ ಹಾದಿಯಲ್ಲಿ ಸಾಗಿರುವ ಚಿತ್ರ 2 ಸರಣಿಗಳಲ್ಲಿ ತೆರೆಕಾಣಲಿದೆ.. ಈ ನಡುವೆ ಸಿನಿಮಾದ ಹಾಡುಗಳು ಸಖತ್ ಸೌಂಡ್ ಮಾಡ್ತಿವೆ.. ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿವೆ.. ಶ್ರೀವಲ್ಲಿ ಇರಬಹುದು, ಜೋಕೆ ಜೋಕೆ , ಸಾಮಿ ಸಾಮಿ, ಏ ಮಗಾ ನಾಲ್ಕೂ  ಹಾಡುಗಳೂ ಕೂಡ ಐದೂ  ಭಾಷೆಗಳಲ್ಲಿ ರಿಲೀಸ್ ಆಗಿ ಸಕ್ಸಸ್ ಕಂಡಿದೆ.

ಸಿನಿಮಾ ಡಿಸೆಂಬರ್ 17 ಕ್ಕೆ ಥಿಯೇಟರ್ ಗಳಲ್ಲಿ ಅದ್ಧೂರಿಯಾಗಿಯೇ ರಿಲೀಸ್ ಆಗಲಿದೆ.. ಈ ನಡುವೆ ಇಂದು ಅಭಿಮಾನಿಗಳಿಗೆ ಸಿನಿಮಾ ತಂಡವು ಗುಡ್ ನ್ಯೂಸ್ ಕೊಟ್ಟಿದೆ.. ಪುಷ್ಪ ಟ್ರೇಲರ್ ಅನ್ನ ಡಿಸೆಂಬರ್ 6 ರಂದು ರಲೀಸ್ ಮಾಡೋದಾಗಿ , ಸಿನಿಮಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್ ಅನೌನ್ಸ್ ಮಾಡಿದೆ.. ಸುಕುಮಾರ್ ನಿರ್ದೆಶನದ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ರೆ , ಜಗಪತಿ ಬಾಬು , ಪ್ರಕಾಶ್ , ರಾಜ್ , ಡಾಲಿ ಧನಂಜಯ್  ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ..

ಸಸ್ಪೆನ್ಸ್ ಥ್ರಿಲ್ಲರ್ ಅಮೃತ ಅಪಾರ್ಟ್ ಮೆಂಟ್ಸ್ ನ ಮೇಕಿಂಗ್ ವಿಡಿಯೋ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd