altercation between resident and security guard-ನವದೆಹಲಿ: ಉತ್ತರ ಪ್ರದೇಶದ ಗಾಜಿಯಾಬಾದ್ನ ಹೌಸಿಂಗ್ ಸೊಸೈಟಿಯೊಂದರಲ್ಲಿ ನಿವಾಸಿ ಮತ್ತು ಭದ್ರತಾ ಸಿಬ್ಬಂದಿ ಪರಸ್ಪರ ಕಾಳಗಕ್ಕಿಳಿದ ಘಟನೆ ಬೆಳಕಿಗೆಬಂದಿದೆ .
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ವರದಿಯ ಪ್ರಕಾರ,ಸೆಕ್ಯುರಿಟಿ ಗಾರ್ಡ್ ನಿವಾಸಿಯೊಬ್ಬರಿಗೆ ತನ್ನ ಐಡಿ ಕಾರ್ಡ ತೋರಿಸಲು ಕೇಳಿದಾಗ ಸೆಕ್ಯುರಿಟಿ ಗಾರ್ಡ್ನ ಮೇಲೆ ದಾಳಿ ಮಾಡಿದ್ದಾನೆ.
ರಾಜನಗರದಲ್ಲಿನ ವಿಂಡ್ಸರ್ ಪ್ಯಾರಡೈಸ್ ಸೊಸೈಟಿಯಲ್ಲಿ ಕುಟುಂಬವೊಂದು ಇತ್ತೀಚೆಗೆ ತಮ್ಮ ಮನೆಯನ್ನು ಬದಲಾಯಿಸಿತ್ತು, ಹೊಒಸದಾಗಿ ಬಂದವರನ್ನ ಗುರುತಿಸದ ಕಾವಲುಗಾರರು ಅವರನ್ನು ನೀವು ಎಲ್ಲಿ ವಾಸವಾಗಿದ್ದಿರಿ ಎಂದು ಕೇಳಿ ಐಡಿ ಕಾರ್ಡ ಕೇಳಿದ್ದಾನೆ.
ಆ ವ್ಯಕ್ತಿ ಕೋಪಗೊಂಡು ಸಿಬ್ಬಂದಿಯನ್ನು ತೀವ್ರವಾಗಿ ಥಳಿಸಿದಾದನೆ. ನಂತರ ಭದ್ರತಾ ಸಿಬ್ಬಂದಿ ಸಹ ನಿವಾಸಿಯ ಮೇಲೆ ಹಲ್ಲೆಮಾಡಿದ್ದಾನೆ ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಬಂದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಘಾಜಿಯಾಬಾದ್ ಪೊಲೀಸರು ಕ್ರಮ ಕೈಗೊಂಡಿದ್ದರೆ