ಇಡೀ ವಿಶ್ವಕ್ಕಿಂತ ವಿಭಿನ್ನ ಹಾಗೂ ಬೆಸ್ಟ್ ನಮ್ಮ ಭಾರತ – ಭಾರತದಲ್ಲಿ ಮಾತ್ರವೇ ಇರುವ ಕೆಲ ವಿಶೇಷತೆಗಳು..!
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ
2ನೇ ಅತಿ ದೊಡ್ಡ ಜನಸಂಖ್ಯಾ ರಾಷ್ಟ್ರ ಭಾರತ
ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನ
3ನೇ ಅತಿ ದೊಡ್ಡ ಎಕಾನಮಿ – ಆರ್ಥಿಕ ವ್ಯವಸ್ಥೆ
ಏಷ್ಯಾದ ಅತಿ ದೊಡ್ಡ ರೈಲ್ವೇ ನೆಟ್ ವರ್ಕ್ ಭಾರತದ್ದೇ – ಬಾರತೀಯ ರೈಲ್ವೇ ಪ್ರಯಾಣಿಕರ ಸಂಖ್ಯೆ ಕೆಲ ದೇಶಗಳ ಒಟ್ಟು ಜನಸಂಖ್ಯೆಗೂ ಅಧಿಕವಿದೆ. ಭಾರತೀಯ ರೈಲ್ವೇ ಇಲಾಖೆಯಲ್ಲಿ 16 ಲಕ್ಷಕ್ಕೂ ಅಧಿಕ ನೌಕರರಿದ್ದಾರೆ.
ಚಿನ್ನ ಖರೀದಿಯಲ್ಲೇ ಇಡೀ ವಿಶ್ವದಲ್ಲಿ ಎಲ್ಲದಕ್ಕಿಂತ ಮುಂಚೂಣಿಯಲ್ಲಿರುವುದು ನಮ್ಮ ಭಾರತ – ಮೂಲಗಳ ಪ್ರಕಾರ ಜಗತ್ತಿನ 11 % ರಷ್ಟು ಚಿನ್ನವಿರೋದು ನಮ್ಮ ಭಾರತದ ಮಹಿಳೆಯರ ಬಳಿ
ಇಡೀ ವಿಶ್ವದಲ್ಲೇ ಅತಿ ಹೆಚ್ಚು ಸಸ್ಯಹಾರಿಗಳಿರುವ ದೇಶ ಭಾರತ
ಭಾರತದಲ್ಲಿ ಯಾವುದೇ ರಾಷ್ಟ್ರೀಯ ಭಾಷೆಯಿಲ್ಲ – ಹೆಚ್ಚು ಜನರು ಮಾತನಾಡುವ ಭಾಷೆ ಹಿಂದಿ – ಒಟ್ಟು 780 ಕ್ಕೂ ಅಧಿಕ ಬಾಷೆಗಳನ್ನ ಗುರುತಿಸಲಾಗಿದೆ. 22 ಭಾಷೆಗಳನ್ನ ಅಧಿಕೃತವಾಗಿಸಲಾಗಿದೆ.
ಭಾರತದಲ್ಲಿ ಹಿಂದಿಯ ನಂತರ ಅತಿ ಹೆಚ್ಚಾಗಿ ಮಾತನಾಡುವ ಭಾಷೆ ಇಂಗ್ಲೀಷ್
ಪ್ರತಿ ವಸ್ತುವಿನ ಮೇಲೆ MRP ನಮೂದಿಸುವ ಏಕಮಾತ್ರ ದೇಶ
ಭಾರತದಲ್ಲಿ 12 ವರ್ಷಗಳಿಗೊಮ್ಮೆ ಆಯೋಜಿಸಲಾಗುವ ಭವ್ಯ ಕುಂಬಮೇಳದಲ್ಲಿ ಕೋಟ್ಯಾಂತರ ಜನರು ಸೇರುತ್ತಾರೆ – ಹೀಗೆ ಯಾವ ದೇಶಗಳಲ್ಲೂ ಯಾವುದೇ ಪವಿತ್ರ / ಧಾರ್ಮಿಕ ಕಾರ್ಯಗಳಲ್ಲಿ ಜನರು ಸೇರುವುದಿಲ್ಲ.
6 ಕಬಡ್ಡಿ ವರ್ಲ್ಡ್ ಕಪ್ ಗೆದ್ದಿರುವುದು ನಮ್ಮ ಭಾರತೀಯರು
ಇಡೀ ವಿಶ್ವಾದ್ಯಂತ ಆಡುವ ಚದುರಂಗ / ಚೆಸ್ ನ ಆವಿಷ್ಕಾರ ಮಾಡಿದ್ದು ಬಾರತ, ಹಾವು ಏಣಿಯಂತಹ ಆಟವೂ ಕೂಡ ಆರಂಭವಾಗಿದ್ದು, ನಮ್ಮದೇ ದೇಶದಿಂದ
ಮಂಗಳನ ಕಕ್ಷೆಗೆ ಮೊದಲನೇ ಪ್ರಯತ್ನದಲ್ಲೇ ಯಶಸ್ವಿಯಾಗಿ ತಲುಪಿದ ಏಕ ಮಾತ್ರ ದೇಶ ನಮ್ಮ ಭಾರತ
ಒಂದೇ ರಾಕೆಟ್ ನಲ್ಲಿ 104 ಉಪಗ್ರಹಗಳ ಉಡಾವಣೆ ಮಾಡಿದ ಕೀರ್ತಿ ಭಾರತದ್ದು ( ISRO )