ಇಡೀ ವಿಶ್ವಕ್ಕೆ ಚೀನಾದಿಂದ ಕೊರೊನಾ ವ್ಯಾಪಿಸಿದ್ದು ಎಂದು ಇತ್ತೀಚೆಗಷ್ಟೇ ಅಮೆರಿಕಾದ ಅಧ್ಯಕ್ಷರಾದ ಡೊನಾಲ್ಡ್ ಅವರು ಕಿಡಿಕಾರಿದ್ದರು. ಇದೀಗ ಮತ್ತೆ ಚೀನಾ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಚೀನಾ ಸರ್ಕಾರ ಜೊತೆಗೆ ಕೆಲಸ ಮಾಡುತ್ತಿರುವ ಹ್ಯಾಕರ್ ಗಳು ಜಗತ್ತಿನ ವಿವಿಧ ಕಂಪಗಳಿಂದ ಕ್ಯೋಟ್ಯಾಂಟರ ರೂಪಾಯಿ ಮೌಲ್ಯದ ಡೇಟಾಗಳನ್ನು ಕದಿಯುತ್ತಿದ್ದಾರೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಆರೋಪಿಸಿದೆ.
ಇತ್ತೀಚೆಗಷ್ಟೇ ಚೀನಾ ಮೂಲದ ಇಬ್ಬರು ಹ್ಯಾಕರ್ಗಳು ಔಷಧ ಸಂಸ್ಥೆಯೊಂದರಿಂದ ಮಾಹಿತಿ ಕಳ್ಳತನಕ್ಕೆ ಪ್ರಯತ್ನಿಸಿದ್ದ ಘಟನೆ ಬೆಳಕಿಗೆ ಬಂದಿತ್ತು . ಇದರ ಬೆನ್ನಲ್ಲೇ ಚೀನಾ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದ್ದು, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಮಾಡಿರುವ ಈ ಇಬ್ಬರು ಸಹಪಾಠಿಗಳು ಒಂದು ದಶಕಕ್ಕೂ ಕೆಚ್ಚು ಕಾಲದಿಂದ ಹತ್ತಕ್ಕೂ ಹೆಚ್ಚು ದೇಶಗಳ ಮುಂಚೂಣಿಯ ಸಂಸ್ಥೆಗಳಿಂದ ಮಾಹಿತಿ ಕಳ್ಳತನ ನಡೆಸಲಾಗಿದೆ ಎನ್ನಲಾಗಿದೆ.
ಚೀನಾದ ಇಬ್ಬರು ಆರೋಪಿಗಳು ಅಮೆರಿಕದ ಕಂಪನಿಗಳಿಂದ ಕೊರೊನಾವೈರಸ್ ಲಸಿಕೆ ಸಂಶೋಧನೆ ಕುರಿತ ಮಾಹಿತಿ ಕದ್ದಿರುವ ಆರೋಪವೂ ಇದ್ದು, ಲಸಿಕೆ ಮತ್ತು ಪರೀಕ್ಷಾ ಕಿಟ್ಗಳನ್ನು ಅಭಿವೃದ್ಧಿಪಡಿಸುವ ಮತ್ತು ಔಷಧ ಸಂಶೋಧನೆಯಲ್ಲಿ ತೊಡಗಿರುವ ಬಯೋಟೆಕ್ ಸಂಸ್ಥೆಗಳು ಮತ್ತು ರೋಗನಿರ್ಣಯ ಕಂಪನಿಗಳ ಕಂಪ್ಯೂಟರ್ ನೆಟ್ವರ್ಕ್ಗಳಲ್ಲಿನ ನ್ಯೂನತೆಯ ಲಾಭವನ್ನು ಹ್ಯಾಕರ್ಗಳು ಬಳಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಅಮೆರಿಕಾದ ನ್ಯಾಯಾಂಗ ಇಲಾಖೆ ಮಾಹಿತಿ ಹೊರಹಾಕಿದೆ.