18,000 ಕ್ಕೂ ಅಧಿಕ ಉದ್ಯೋಗಿಗಳ ವಜಾಗೆ ಮುಂದಾದ ಅಮೆಜಾನ್…
ಕೋವಿಡ್ ಸಾಂಕ್ರಾಮಿಕತೆಯ ಕಾಲದಲ್ಲಿ ಆನ್ ಲೈನ್ ಚಿಲ್ಲರೇ ಮಾರುಕಟ್ಟೆ ಕುಸಿದಿದೆ ಮತ್ತು ಅನಿಶ್ಚಿತೆಯ ಆರ್ಥಿಕತೆ ಕಾರಣ ನೀಡಿ ಅಮೆಜಾನ್ 18 ಸಾವಿರ ಉದ್ಯೋಗಿಗಳನ್ನ ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ.
ನವೆಂಬರ್ ನಲ್ಲಿ 10000 ಮತ್ತು ಇಂದು ನಾವು 18000 ಉದ್ಯೋಗಿಗಳನ್ನ ತೆಗೆದು ಹಾಕಲು ಯೋಜಿಸುತ್ತಿದ್ದೇವೆ ಎಂದು ಸಿಇಒ ಆಂಡಿ ಜಾಸ್ಸಿ ತಮ್ಮ ಸಿಬ್ಬಂದಿಗಳಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾವು ಕೆಲಸದಿಂದ ಹೊರಗುಳಿಯವ ಉದ್ಯೋಗಿಗಳ ಜೊತೆ ನೇರವಾಗಿ ಮಾತನಾಡಿ ವಿಷಯ ತಿಳಿಸಬೇಕಿತ್ತು. ಆದರೇ ಕಂಪನಿಯ ಒಳಗಿನ ಉದ್ಯೋಗಿ ಈ ವಿಷಯವನ್ನ ಲೀಕ್ ಮಾಡಿದ್ದರಿಂದ ನಾವು ಈ ರೀತಿ ಹಠಾತ್ ಘೋಷಣೆ ಮಾಡುತ್ತಿದ್ದೇವೆ ಎಂದು ಆಂಡಿ ಜೆಸ್ಸಿ ತಿಳಿಸಿದ್ದಾರೆ.
“ಅಮೆಜಾನ್ ಈ ಹಿಂದೆ ಅನಿಶ್ಚಿತ ಮತ್ತು ಕಷ್ಟಕರವಾದ ಆರ್ಥಿಕತೆಗಳನ್ನು ಎದುರಿಸಿದೆ ಮತ್ತು ನಾವು ಎದುರಿಸುವುದನ್ನ ಮುಂದುವರೆಸಿ ಯಶಸ್ವಿಯಾಗಲಿದ್ದೇವೆ ಎಂದು ತಿಳಿಸಿದ್ದಾರೆ.
ಫೇಸ್ ಬುಕ್ ಕಂಪನಿ ಮೆಟಾ ಸೇರಿದಂತೆ ಟ್ವೀಟರ್ ಅಮೇಜಾನ್ ಸೇರಿದಂತೆ ಹಲವು ಕಂಪನಿಗಳೂ ಕೆಲಸಗಾರರನ್ನ ವಜಾ ಮಾಡಿವೆ…
Amazon: Amazon plans to lay off more than 18,000 employees…