ಅಮೆಜಾನ್ ಕಾಡಿನಲ್ಲಿ ವಿಮಾನ ಪತನ ಅಪಘಾತದಲ್ಲಿ 6 ಸಾವು
ಬೊಲಿವಿಯಾದ ವಾಯುಪಡೆಯ ವಿಮಾನ LA PAZ, ಬೊಲಿವಿಯಾ (AP) ಪತನ
ಇಬ್ಬರು ಮಿಲಿಟರಿ ಪೈಲಟ್ಗಳು, ನಾಲ್ವರು ನಾಗರಿಕ ಪ್ರಯಾಣಿಕರು ಸಾವು
ಬೊಲಿವಿಯಾದ ವಾಯುಪಡೆಯ ವಿಮಾನವೊಂದು ಶನಿವಾರ ಈಶಾನ್ಯ ಬೊಲಿವಿಯಾದ ಅಮೆಜಾನ್ ಕಾಡಿನಲ್ಲಿ ಪತನಗೊಂಡಿದ್ದು, ಅದರಲ್ಲಿದ್ದ ಸುಮಾರು 6 ಮಂದಿ ಮೃತಪಟ್ಟಿದ್ದಾರೆ. LA PAZ, ಬೊಲಿವಿಯಾ (AP) – ಬೊಲಿವಿಯಾದ ವಾಯುಪಡೆಯ ವಿಮಾನವು ಈಶಾನ್ಯ ಬೊಲಿವಿಯಾದ ಅಮೆಜಾನ್ ಕಾಡಿನಲ್ಲಿ ಶನಿವಾರ ಪತನಗೊಂಡಿದೆ. 6 ಮಂದಿ ಮೃತಪಟ್ಟಿರೋದಾಗಿ ಪೊಲೀಸರು ಖಚಿತಪಡಿಸಿದ್ದಾರೆ.
ಬೆನಿ ಪ್ರದೇಶದ ಪೋಲಿಸ್ ವರದಿಯ ಪ್ರಕಾರ ಇಬ್ಬರು ಮಿಲಿಟರಿ ಪೈಲಟ್ಗಳು ಮತ್ತು ನಾಲ್ವರು ನಾಗರಿಕ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ದಟ್ಟವಾದ ಸಸ್ಯವರ್ಗದಲ್ಲಿ ಅಪಘಾತಕ್ಕೀಡಾದ ನಂತರ ವಿಮಾನವು ಬೆಂಕಿಗೆ ಆಹುತಿಯಾಗಿದೆ. ಈ ವೇಳೆ ಸಮೀಪದ ಅಗುವಾ ಡಲ್ಸೆ ಸಮುದಾಯದ ನಿವಾಸಿಗಳು ಬೆಂಕಿಯನ್ನು ನಂದಿಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.