ಅಮೆಜಾನ್ ಕಾಡಿನಲ್ಲಿ  ವಿಮಾನ ಪತನ ಅಪಘಾತದಲ್ಲಿ 6 ಸಾವು

1 min read

ಅಮೆಜಾನ್ ಕಾಡಿನಲ್ಲಿ  ವಿಮಾನ ಪತನ ಅಪಘಾತದಲ್ಲಿ 6 ಸಾವು

ಬೊಲಿವಿಯಾದ ವಾಯುಪಡೆಯ ವಿಮಾನ  LA PAZ, ಬೊಲಿವಿಯಾ (AP)  ಪತನ

ಇಬ್ಬರು ಮಿಲಿಟರಿ ಪೈಲಟ್‌ಗಳು, ನಾಲ್ವರು ನಾಗರಿಕ ಪ್ರಯಾಣಿಕರು ಸಾವು

ಬೊಲಿವಿಯಾದ ವಾಯುಪಡೆಯ ವಿಮಾನವೊಂದು ಶನಿವಾರ ಈಶಾನ್ಯ ಬೊಲಿವಿಯಾದ ಅಮೆಜಾನ್ ಕಾಡಿನಲ್ಲಿ ಪತನಗೊಂಡಿದ್ದು, ಅದರಲ್ಲಿದ್ದ ಸುಮಾರು 6 ಮಂದಿ ಮೃತಪಟ್ಟಿದ್ದಾರೆ.   LA PAZ, ಬೊಲಿವಿಯಾ (AP) – ಬೊಲಿವಿಯಾದ ವಾಯುಪಡೆಯ ವಿಮಾನವು ಈಶಾನ್ಯ ಬೊಲಿವಿಯಾದ ಅಮೆಜಾನ್ ಕಾಡಿನಲ್ಲಿ ಶನಿವಾರ ಪತನಗೊಂಡಿದೆ. 6 ಮಂದಿ ಮೃತಪಟ್ಟಿರೋದಾಗಿ ಪೊಲೀಸರು ಖಚಿತಪಡಿಸಿದ್ದಾರೆ.

ಬೆನಿ ಪ್ರದೇಶದ ಪೋಲಿಸ್ ವರದಿಯ ಪ್ರಕಾರ ಇಬ್ಬರು ಮಿಲಿಟರಿ ಪೈಲಟ್‌ಗಳು ಮತ್ತು ನಾಲ್ವರು ನಾಗರಿಕ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ದಟ್ಟವಾದ ಸಸ್ಯವರ್ಗದಲ್ಲಿ ಅಪಘಾತಕ್ಕೀಡಾದ ನಂತರ ವಿಮಾನವು ಬೆಂಕಿಗೆ ಆಹುತಿಯಾಗಿದೆ. ಈ ವೇಳೆ ಸಮೀಪದ ಅಗುವಾ ಡಲ್ಸೆ ಸಮುದಾಯದ ನಿವಾಸಿಗಳು ಬೆಂಕಿಯನ್ನು ನಂದಿಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಪಾಕ್ ಕ್ರಿಕೆಟ್ ಕಥೆ ಮುಗಿಸುವ ಶಕ್ತಿ ‘ಮೋದಿ’ಗಿದೆ, ಪಾಕ್‌ನಲ್ಲಿ ಭಾರತ ಕ್ರಿಕೆಟ್ ನಡೆಸುತ್ತಿದೆ – ರಮೀಝ್ ರಾಜಾ  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd