ವಿಶ್ವದ ನಂ.1 ಶ್ರೀಮಂತ ಜೆಫ್ ಬೆಜೋಸ್..! ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ..?
ಇ – ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಯ CEO ಸ್ಥಾನಕ್ಕೆ ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ ಎಕ್ಸಿಕ್ಯುಟಿವ್ ಛೇರ್‌ಮನ್ ಜೆಫ್ ಬೆಜೋಸ್ ಮತ್ತೊಮ್ಮೆ ವಿಶ್ವದ ಶ್ರೀನಂತರಾಗಿ ಹೊರಹೊಮ್ಮಿದ್ದಾರೆ.
ಹೌದು.. ಜೆಫ್ ಅವರ ಒಟ್ಟು ಆಸ್ತಿ ಮೌಲ್ಯ $211 ಬಿಲಿಯನ್. ಈ ಹಿಂದೆ ಜನವರಿಯಲ್ಲಿ ಬ್ಲೂಮ್ ಬರ್ಗ್ ಪ್ರಕಟಿಸಿದ ವರದಿಯ ಪ್ರಕರ ಎಲೋನ್ ಮಸ್ಕ್ $210 ಬಿಲಿಯನ್ ಸಂಪತ್ತನ್ನು ಹೊಂದಿದ್ದರು. ಈ ಮೂಲಕ ಅವರು ವಿಶ್ವದ ನಂಬರ್ 1 ಶ್ರೀಮಂತರಾಗಿದ್ದರು.. ಅಲ್ಲದೇ ಈ ಹಿಂದೆ ಜನವರಿಯಲ್ಲಿ ಟೆಸ್ಲಾ ಕಂಪನಿಯ ಮಾಲೀಕರಾದ ಎಲೋನ್ ಮಸ್ಕ್ $210 ಬಿಲಿಯನ್ ಮೌಲ್ಯದೊಂದಿಗೆ ಬ್ಲೂಮ್‌ಬರ್ಗ್ ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದರು.
ಇದೀಗ ಜೆಫ್ ಬೆಜೋಸ್ $211 ಮೌಲ್ಯದ ಸಂಪತ್ತನ್ನು ಹೊಂದುವ ಮೂಲಕ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥನವನ್ನು ಪಡೆದುಕೊಂಡಿದ್ದಾರೆ. ಸಂಪತ್ತಿನ ಕ್ರೋಢೀಕರಣ ವಿಚಾರದಲ್ಲಿ, ಜೆಫ್ ಬೆಜೋಸ್ ಇತರರನ್ನು ಹಿಂದಿಕ್ಕಿದ್ದಾರೆ. ಅಮೆಜಾನ್ ಪ್ರತಿಸ್ಪರ್ಧಿ ಮೈಕ್ರೋಸಾಫ್ಟ್ ಕಂಪನಿಯೊಂದಿಗೆ ಕ್ಲೌಡ್-ಕಂಪ್ಯೂಟಿಂಗ್ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಪೆಂಟಗನ್ ಘೋಷಿಸಿದ ನಂತರ ಅಮೆಜಾನ್ ಕಂಪನಿಯ ಷೇರುಗಳು 4.7% ರಷ್ಟು ಏರಿಕೆಯಾದ ಕಾರಣ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಅವರ ಸಂಪತ್ತು $211 ಬಿಲಿಯಾನ್ ಮೌಲ್ಯವನ್ನು ತಲುಪಿದೆ. ಜೆಫ್ ಬೆಜೋಸ್ ಇದೀಗ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಬ್ಲೂಮ್ ಬರ್ಗ್ ಪ್ರಕಟಿಸಿದೆ.
ಮಾರ್ಚ್ ಮಧ್ಯದಲ್ಲಿ ಅಮೆಜಾನ್ ಷೇರುಗಳು ಸುಮಾರು 20% ಏರಿಕೆಯಾದ ಕಾರಣ ಜೆಫ್ ಬೆಜೋಸ್ ನಂ 1 ಸ್ಥಾನವನ್ನು ಪಡೆದುಕೊಂಡಿದ್ದು, ಮತ್ತೆ ಅಮೆಜಾನ್ ಶೇರುಗಳು 7% ಏರಿಯಾಗಿವೆ.








