ಈಗ ಏಷ್ಯಾದ ನಂ. 1 ಶ್ರೀಮಂತ ಅಂಬಾನಿಯಲ್ಲ, ಝಾಂಗ್ ಶಾನ್ಷನ್
ನವದೆಹಲಿ: ಏಷ್ಯಾದ ನಂ.1 ಶ್ರೀಮಂತ ಎಂಬ ಪಟ್ಟ ಹೊತ್ತಿದ್ದ ಭಾರತದ ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಇದೀಗ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅಂಬಾನಿಯನ್ನ ಏಷ್ಯಾದ ಬಹುದೊಡ್ಡ ಉದ್ಯಮಿಗಳಾದ ಜಾಕ್ ಮಾ, ಹಿಂದಿಕ್ಕಿ ಅಗ್ರ ಸ್ತಾನ ಪಡೆದಿದ್ದಾರೆ. “ಲೋನ್ ವುಲ್ಫ್” ಖ್ಯಾತಿಯ ಝಾಂಗ್ ಶಾನ್ಷನ್ ಅಗ್ರಸ್ಥಾನ ಪಡೆದಿದ್ದಾರೆ.
ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಸೂಚ್ಯಂಕದ ಪ್ರಕಾರ ಚೀನಾದ 66 ವರ್ಷದ ಝಾಂಗ್ ಏಷ್ಯಾದ ಖ್ಯಾತ ಉದ್ಯಮಿಗಳನ್ನು ಹಿಂದಿಕ್ಕಿ ಏಷ್ಯಾದ ನಂಬರ್ ಒನ್ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನೂ ವಿಶ್ವದ 11ನೇ ಅತಿದೊಡ್ಡ ಶ್ರೀಮಂತ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಪತ್ರಿಕೋದ್ಯಮ, ಅಣಬೆ ಕೃಷಿ ಮತ್ತು ಹೆಲ್ತ್ ಕೇರ್ ಉದ್ಯಮಗಳಲ್ಲಿ ತನ್ನ ವ್ಯಾಪ್ತಿಯನ್ನು ಹೊಂದಿರುವ ಝಾಂಗ್ ಸಂಪತ್ತಿನ ನಿವ್ವಳ ಮೌಲ್ಯವು ಈ ವರ್ಷ ಬರೋಬ್ಬರಿ 70.9 ಬಿಲಿಯನ್ ಡಾಲರ್ ಏರಿಕೆಗೊಂಡು 77.8 ಬಿಲಿಯನ್ ಡಾಲರ್‌ಗೆ ತಲುಪಿದೆ.
ಭಾರತದಲ್ಲಿ ರೂಪಾಂತರಿ ಕೊರೊನಾ ವೈರಸ್ ಹಾವಳಿ : ಸೋಂಕಿತರ ಸಂಖ್ಯೆ 25 ಕ್ಕೆ ಏರಿಕೆ..!
ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಇತಿಹಾಸದಲ್ಲಿ ಯಾರೊಬ್ಬರೂ ಇಷ್ಟು ವೇಗವಾಗಿ ಒಂದೇ ವರ್ಷದಲ್ಲಿ ಸಂಪತ್ತನ್ನು ಇಷ್ಟರ ಮಟ್ಟಿಗೆ ಹೆಚ್ಚಿಸಿಲ್ಲ. ಈ ವರ್ಷ ಅಮೆಜಾನ್ ಜೆಫ್ ಬೇಜೋಸ್ ಮತ್ತು ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಹೊರತುಪಡಿಸಿ ಅತಿ ಹೆಚ್ಚು ಸಂಪಾದನೆ ಮಾಡಿದ ವ್ಯಕ್ತಿಯೂ ಇವರೇ ಆಗಿದ್ದಾರೆ. ಇನ್ನೂ ಝಾಂಗ್ ಯಾವುದೇ ರಾಜಕೀಯದಲ್ಲಿ ಭಾಗಿಯಾಗಿಲ್ಲ ಮತ್ತು ಅವರ ವ್ಯಾಪಾರ ಹಿತಾಸಕ್ತಿಗಳು ಆಸ್ತಿ ಉದ್ಯಮವು ಇತರ ಯಾವುದೇ ಶ್ರೀಮಂತ ಕುಟುಂಬಗಳೊಂದಿಗೆ ಸಂಪರ್ಕ ಹೊಂದಿಲ್ಲ. ಅದಕ್ಕಾಗಿಯೇ ಅವರನ್ನು ಸ್ಥಳೀಯವಾಗಿ “ಲೋನ್ ವುಲ್ಫ್” ಎಂದು ಕರೆಯಲಾಗುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel