ಭಾರತದಲ್ಲಿ ರೂಪಾಂತರಿ ಕೊರೊನಾ ವೈರಸ್ ಹಾವಳಿ : ಸೋಂಕಿತರ ಸಂಖ್ಯೆ 25 ಕ್ಕೆ ಏರಿಕೆ..!
ನವದೆಹಲಿ : ಭಾರತದಲ್ಲಿ ಬ್ರಿಟನ್ ಕೊರೊನಾ ವೈರಸ್ ಆತಂಕ ಶುರುವಾಗಿದೆ. ಇದೀಗ ಮತ್ತೆ ಹೊಸದಾಗಿ 5 ಜನರಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ. ಈ ಮೂಲಕ ಭಾರತದಲ್ಲಿ ಹೊಸ ಕೊರೊನಾ ಸೋಂಕಿತರ ಸಂಖ್ಯೆ 25ಕ್ಕೇರಿದೆ. ಇನ್ನೂ ಬೆಂಗಳೂರು ದೆಹಲಿಯಲ್ಲಿ ಸೋಂಕು ಪತ್ತೆಯಾದ ಬಳಿಕ ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿ ಸೋಂಕು ಪ್ರಕರಣ ವರದಿಯಾಗಿದೆ. ಇನ್ನೂ ಕೊರೊನಾ 2ನೇ ಅಲೆ ಶುರುವಾಗುತ್ತಿದ್ದು, ಬ್ರಿಟನ್ ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮುಖಂಡನ ಹತ್ಯೆ
ಇತ್ತ ಯುಕೆ ಮತ್ತು ಭಾರತದ ನಡುವಿನ ಪ್ರಯಾಣಿಕರ ವಿಮಾನಗಳ ತಾತ್ಕಾಲಿಕ ಹಾರಾಟವನ್ನು ಜನವರಿ 7ರ ವರೆಗೆ ಒಂದು ಮುಂಜಾಗ್ರತಾ ಕ್ರಮವಾಗಿ ವಿಸ್ತರಣೆ ಮಾಡಲಾಗಿದೆ. ಈಗಾಗಲೇ ಯುಕೆಯಿಂದ ಭಾರತಕ್ಕೆ ಬಂದು ನಾಪತ್ತೆಯಾಗಿರುವ ಪ್ರಯಾಣಿಕರನ್ನ ಪತ್ತೆ ಹಚ್ಚಿ ಅವರನ್ನೂ ಸಹ ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗ್ತಿದ್ದು, ಅವರಲ್ಲಿ ಎಷ್ಟು ಮಂದಿಗೆ ಪಾಸಿಟಿವ್ ಇರಬಹುದು ಎಂಬ ಆತಂಕ ಜೊತೆಗೆ ಅವರು ಯಾರ ಯಾರ ಜೊತೆಗೆ ಅವರ ಸಂಪರ್ಕಕ್ಕೆ ಎಷ್ಟು ಜನರು ಬಂದಿರಬಹುದು ಅವರ ಟ್ರಾವಲ್ ಹಿಸ್ಟರಿ ಎದೆಲ್ಲಾ ಯೋಚಿಸಿದ್ರೆ ಈ ಹೊಸ ಸೋಂಕು ವೇಗವಾಗಿ ಹೆಚ್ಚು ಜನರಿಗೆ ಹಬ್ಬಲಿದೆ ಎಂಬ ಆತಂಕ ಶುರುವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








