Ambareesh
ಪ್ರೀತಿ ಒಂದೇ ಅಂಬರೀಶ್ ಸಂಪಾದಿಸಿರುವ ಆಸ್ತಿ : ಸುಮಲತಾ ಅಂಬರೀಶ್..!
ಬೆಂಗಳೂರು: ಇಂದು ಅಂಬಿ ಅವರ 2ನೇ ವರ್ಷದ ಪುಣ್ಯ ತಿಥಿ. ಹೀಗಾಗಿ ಇಂದು ಚಂದನವನದ ದಿಗ್ಗಜನನ್ನ ಅಭಿಮಾನಿಗಳು , ಚಿತ್ರರಂಗದವರು ಸ್ಮರಿಸುತ್ತಿದ್ದಾರೆ. ಇಂದು ಅಂಬಿ ಸ್ಮಾರಕಕ್ಕೆ ತೆರಳಿ ಪತ್ನಿ ಸುಮಲತಾ ಅಂಬರೀಷ್ , ಪುತ್ರ ಅಭಿಶೇಕ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿ ಅನೇಕರು ಪೂಜೆ ಸಲ್ಲಿಸಿದ್ದಾರೆ. ಅಂಬಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಸುಮಲತಾ ಅವರು, ಮಂಡ್ಯದ ಜನ ಅಂಬರೀಶ್ ಅವರನ್ನು ವಿಶೇಷವಾಗಿ ದೇವರಂತೆ ಪೂಜಿಸುತ್ತಿದ್ದರು. ಪ್ರೀತಿ ಒಂದೇ ಅವರು ಸಂಪಾದಿಸಿರೋ ಆಸ್ತಿ. ಜನರ ಅವರನ್ನ ಹೃದಯಲ್ಲಿ ಇಟ್ಟುಕೊಂಡು ಪೂಜಿಸ್ತಾ ಇದ್ದಾರೆ ಎಂದು ಹೇಳಿದ್ದಾರೆ.
ರೆಬೆಲ್ ಸ್ಟಾರ್ ಸ್ಟಾರ್ ನಮ್ಮನ್ನ ಅಗಲಿ ಇಂದಿಗೆ 2 ವರ್ಷ : ಅಂಬಿ ನೆನೆದ ಸುಮಲತಾ, ದರ್ಶನ್
ಇದೇ ವೇಳೆ ಅಂಬರೀಶ್ ಅವರು ಎಲ್ಲರನ್ನೂ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದರು. ಎಲ್ಲರ ಪ್ರೀತಿ ಗಳಿಸಿ ಆ ಪ್ರೀತಿಯನ್ನ ಶಾಶ್ವತವಾಗಿ ಉಳಿಸಿಕೊಂಡಿದ್ದಾರೆ. ಇದಕ್ಕಿಂತ ಹೆಮ್ಮೆ ಯಾವುದೂ ಇಲ್ಲ. ಮಂಡ್ಯದಲ್ಲಿ ನಿಜಕ್ಕೂ ಅಂಬಿ ಗುಡಿ ಕಟ್ಟಿರೋದು ಅದ್ಭುತ. ಆ ಊರಿನವರು ನನ್ನಿಂದ ಯಾವುದೇ ಸಹಾಯ ತಗೊಂಡಿಲ್ಲ. ನನಗೆ ಇದು ಸರ್ಪ್ರೈಸ್, ಜೊತೆಗೆ ಅಂಬಿ ಪ್ರೀತಿಗೆ ಕಂಚಿನ ಪುತ್ಥಳಿ ಸಂಕೇತ. ಅವರು ಬದುಕಿದ್ದಾಗ ಪ್ರತಿದಿನ ಜನರ ಮಧ್ಯೆ ಇರುತ್ತಿದ್ದರು ಎಂದು ತಿಳಿಸಿದ್ದಾರೆ. ಅಲ್ಲದೇ ವಿಶೇಷವಾಗಿ ಮಂಡ್ಯ ಜನ ಅವರನ್ನ ದೇವರಂತೆ ಪೂಜಿಸ್ತಾ ಇದ್ದರು. ಪ್ರೀತಿ ಒಂದೇ ಅವರು ಸಂಪಾದಿಸಿರುವ ಆಸ್ತಿ. ಜನರ ಅವರನ್ನ ಹೃದಯಲ್ಲಿ ಇಟ್ಕೊಂಡು ಪೂಜಿಸ್ತಾ ಇದ್ದಾರೆ. ಅಂಬರೀಶ್ ಅವರಿಗೆ ಮನಸ್ಸಿನಲ್ಲೇ ಗುಡಿ ಕಟ್ಕೊಂಡಿದ್ದಾರೆ. ಸ್ಮಾರಕಕ್ಕೆ ಈಗಷ್ಟೇ ಟ್ರಸ್ಟ್ ರಿಜಿಸ್ಟಾರ್ ಆಗಿದೆ. ಇನ್ನಷ್ಟು ಮಿಟೀಂಗ್ ಮಾಡಿ ಯಾವ ರೀತಿ ಡಿಸೈನ್ ಮಾಡ್ಬೇಕು ಅನ್ನೋದನ್ನ ಚರ್ಚೆ ಮಾಡ್ತೀವಿ ಎಂದು ಹೇಳಿದರು. ನವೆಂಬರ್ 24, 2018ರಲ್ಲಿ ಅಂಬರೀಶ್ ಅವರು ನಮ್ಮನ್ನೆಲ್ಲ ಅಗಲಿದ್ದರು. ಅಂಬಿ ಅಗಲಿಕೆಯಿಂದ ಸ್ಯಾಂಡಲ್ ವುಡ್ ಗೆ ತುಂಬಲಾರದ ನಷ್ಟ ಉಂಟಾಗಿತ್ತು.
Ambareesh
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel