Ambareesh : ಅಂಬರೀಶ್ ಸಮಾಧಿ ಎದುರು 14 ಅಡಿ ಕಂಚಿನ ಪ್ರತಿಮೆ ನಿರ್ಮಾಣ..!!
ಇತ್ತೀಚೆಗಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಅವರು 12 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ರೆಬೆಲ್ ಸ್ಟಾರ್ ಅಂಬರೀಷ್ ಅವರ ಸ್ಮಾರಕಕ್ಕೆ ಚಾಲನೆ ಶಂಕುಸ್ಥಾಪನೆ ಮಾಡಿ ಚಾಲನೆ ನೀಡಿದ್ದಾರೆ.. ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಂಬಿ ಸ್ಮಾರಕದ ಎದುರಿಗೆ ಇದೀಗ 14 ಅಡಿ ಕಂಚಿನ ಪ್ರತಿಮೆ ತಲೆ ಎತ್ತಲಿದೆ..
ಅಂದ್ಹಾಗೆ ಅಲ್ಲೇ ಪಕ್ಕದಲ್ಲಿಯೇ ನಿರ್ಮಾಣವಾಗಿರುವ ವರನಟ ಡಾಕ್ಟರ್ ರಾಜ್ ಕುಮಾರ್ ಅವರ ಸ್ಮಾರಕದ ಮಾದರಿಯನ್ನ ಅನುಸರಿಸಿ , ಜೊತೆಗೆ ಒಂದಿಷ್ಟು ವಿಭಿನ್ನವಾಗಿ ಸ್ಮಾರಕ ನಿರ್ಮಾಣ ಮಾಡುವ ಪ್ಲಾನ್ ಮಾಡಿದೆ ಸರ್ಕಾರ.
ಅಲ್ಲದೇ ಡಾ.ಅಂಬರೀಶ್ ಪ್ರತಿಷ್ಠಾನ ಹಾಗೂ ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ , ಕಂಚಿನ ಪ್ರತಿಮೆಗೆ ಹೊಂದಿಕೊಂಡಂತೆ ಕಾರಂಜಿ, ವಸ್ತು ಸಂಗ್ರಹಾಲಯ, ಬಯಲು ರಂಗಮಂದಿರ, ಅಂಬರೀಶ್ ಅವರ ಸಿನಿಮಾಗಳ ಭಿತ್ತಿಚಿತ್ರಗಳು, ಆಡಿಯೋ, ವಿಡಿಯೋ ಪ್ರಸಾರ ಸೇರಿದಂತೆ ಅಂಬರೀಶ್ ಅವರ ಹೆಸರಿನಲ್ಲಿ ಹತ್ತು ಹಲವು ಯೋಜನೆಗಳನ್ನು ತರಲಾಗುತ್ತದೆ ಎಂದು ಹೇಳಲಾಗ್ತಿದೆ..