Rayudu Retirement : ಚೆನ್ನೈಗೆ ಶಾಕ್.. ಅಂಬಾಟಿ ರಾಯುಡು ವಿದಾಯ..?

1 min read

Rayudu Retirement : ಚೆನ್ನೈಗೆ ಶಾಕ್.. ಅಂಬಾಟಿ ರಾಯುಡು ವಿದಾಯ..?

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಯಾವುದೂ ಕೂಡಿ ಬಂದಿಲ್ಲ.

ಸತತ ಗಾಯಗಳು, ಸೋಲುಗಳು, ನಾಯಕತ್ವ ಬದಲಾವಣೆ, ಹಿರಿಯ ಆಟಗಾರರ ಕಳಪೆ ಪ್ರದರ್ಶನ, ಅಂಪೈರಿಂಗ್ ತಪ್ಪುಗಳು.. ಹೀಗೆ ಪ್ರತಿಯೊಂದು ಸಂದರ್ಭದಲ್ಲೂ ತಂಡಕ್ಕೆ ದುರದೃಷ್ಟವೇ ಎದುರಾಗಿದೆ.

ನಾಯಕತ್ವದ ಬಳಿಕ ಬಂದ ಗೆಲುವುಗಳು ಕೂಡ  ಪ್ಲೇ ಆಫ್ಸ್ ತಲುಪಿಸಲು ಸಾಧ್ಯವಾಗಿಲ್ಲ. ಮತ್ತೆರೆಡು ಪಂದ್ಯಗಳನ್ನಾಡಿದರೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಯಾನ ಕೊನೆಯಾಗಲಿದೆ.

ಹೀಗಾಗಿ ಚೆನ್ನೈ ಫ್ರಾಂಚೈಸಿ ಮುಂದಿನ ಸೀಸನ್ ನತ್ತ ಮುಖ ಮಾಡಿದೆ. ಆದ್ರೆ ಫ್ರಾಂಚೈಸಿಗೆ ತಂಡದ ಸ್ಟಾರ್ ಆಟಗಾರ ಶಾಕ್ ನೀಡಿದ್ದಾರೆ.

ಚೆನ್ನೈ ತಂಡದ ಸ್ಟಾರ್ ಆಟಗಾರ ಅಂಬಟಿ ರಾಯುಡು  ಐಪಿಎಲ್‌ ಗೆ ವಿದಾಯ ಹೇಳುತ್ತಿರುವುದಾಗಿ ಟ್ವಿಟರ್‌ನಲ್ಲಿ ಆಘಾತಕಾರಿ ಘೋಷಣೆ ಮಾಡಿದ್ದಾರೆ.

ರಾಯುಡು ಅವರ ಹಠಾತ್ ಘೋಷಣೆ CSK ಮಾಲೀಕತ್ವದ ಫ್ಯೂಸ್‌ ಗಳು ಹೋದಂತೆ ಆಗಿದೆ.

Ambati Rayudu IPL 2022 Retirement saaksha tv
Ambati Rayudu IPL 2022 Retirement saaksha tv

ಧೋನಿ ಮತ್ತು ರಾಯುಡು ಅವರಂತಹ ಹಿರಿಯರು ಮುಂದಿನ ಋತುವಿನಲ್ಲಿ ಲಭ್ಯವಿಲ್ಲದಿದ್ದರೆ ತಮ್ಮ ಪರಿಸ್ಥಿತಿ ಏನಾಗಬಹುದು ಎಂಬ ಚಿಂತೆಯಲ್ಲಿದೆ ಫ್ರಾಂಚೈಸಿ.

ಮತ್ತೊಂದೆಡೆ, ರಾಬಿನ್ ಉತ್ತಪ್ಪ ಮತ್ತು ಡ್ವೇನ್ ಬ್ರಾವೊ ಅವರಂತಹ ಅನುಭವಿಗಳೂ ನಿವೃತ್ತಿಯ ಹಂತದಲ್ಲಿದ್ದಾರೆ.

ನಾಯಕತ್ವ ವಿವಾದದಿಂದ ಜಡೇಜಾ ಕೂಡ ಸಿಎಸ್‌ಕೆ ಜತೆಗಿನ ಸಂಬಂಧವನ್ನು ಕಡಿದುಕೊಂಡರೆ ತಂಡದ ಭವಿಷ್ಯವೇ ಪ್ರಶ್ನೆಯಾಗಲಿದೆ.

ಸದ್ಯ ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ ಮತ್ತು ಮುಖೇಶ್ ಚೌಧರಿ ಮೇಲೆ ಫ್ರಾಂಚೈಸಿ ಭರವಸೆ ಇಟ್ಟಿದೆ.

ಇನ್ನು ರಾಯುಡು ಅವರು ತಮ್ಮ 13 ವರ್ಷಗಳ ಐಪಿಎಲ್ ಲೀಗ್ ವೃತ್ತಿಜೀವನದಲ್ಲಿ ಮುಂಬೈ ಇಂಡಿಯನ್ಸ್ ನಂತರ ಹೆಚ್ಚಿನ  ಪಂದ್ಯಗಳನ್ನಾಡಿದ್ದು, ಚೆನ್ನೈ ಪರ.  

ರಾಯುಡು ಐಪಿಎಲ್‌ನಲ್ಲಿ ಒಟ್ಟು 187 ಪಂದ್ಯಗಳನ್ನು ಆಡಿದ್ದು, 29.28 ಸರಾಸರಿಯಲ್ಲಿ 4187 ರನ್ ಗಳಿಸಿದ್ದಾರೆ. ಇದರಲ್ಲಿ ಶತಕ, 22 ಅರ್ಧ ಶತಕಗಳು ಸೇರಿವೆ. Ambati Rayudu IPL 2022 Retirement

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd