‘ಕೊರೊನಾ ವೈರಸ್ ವುಹಾನ್ ಲ್ಯಾಬ್ ನಿಂದಲೇ ಹರಡಿರುವ ಸಾಧ್ಯತೆ ‘ – ಅಮೆರಿಕ ಅಧ್ಯಯನ
ಅಮೆರಿಕಾ : ಇಡೀ ವಿಶ್ವಕ್ಕೆ ಚೀನಾ ಕೋವಿಡ್ ಅನ್ನ ಹಂಚಿದ್ದು, ಕೋಟ್ಯಾಂತರ ಜನರ ಸಾವಿಗೆ ಕಾರಣಗವಾಗಿದೆ… ಈವರೆಗೂ ಭಾರತ ಸೇರಿದಂತೆ ಅನೇಕ ದೇಶಗಳು ಈ ಮಹಾಮಾರಿಗೆ ತತ್ತರಿಸಿಹೋಗಿವೆ. ಆದ್ರೆ ಕೊರೊನಾ ಮಹಾಮಾರಿ ಹುಟ್ಟಿಕೊಂಡಾಗಿನಿಂದಲೂ ಚೀನಾದ ಬಯೋಲಾಜಿಕಲ್ ಲ್ಯಾಬ್ ನಿಂದ ಇಡೀ ವಿಶ್ವಕ್ಕೆ ಜೆನೆಟಿಕ್ ಅಸ್ತ್ರದ ರೂಪದಲ್ಲಿ ಹಬ್ಬಿಸಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇದ್ದರು ಇದನ್ನ ಚೀನಾ ಒಪ್ಪಿಕೊಂಡಿರಲಿಲ್ಲ..
ಇತೀಚೆಗೆ ಚೀನಾದ ಅಸಲಿಯತ್ತು ಜಗತ್ತಿನ ಎದುರು ಬಟಾಬಯಲಾಗಿತ್ತು. ಚೀನಾದ ಮಾನ ಹರಾಜಾಗಿತ್ತು.. ಹೌದು.. 2015 ರಲ್ಲಿ ಚೀನಾ ವಿಜ್ಞಾನಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಬರೆದಿರುವ ಒಂದು ಪತ್ರ ಇತ್ತೀಚೆಗೆ ಬಹಿರಂಗವಾಗಿತ್ತು. ಇದೀಗ ಚೀನಾದ ವುಹಾನ್ ಲ್ಯಾಬ್ನಿಂದ ಕೊರೊನಾ ವೈರಸ್ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿರುವ ಊಹೆಯು ಸಮರ್ಥನೀಯ ಮತ್ತು ತನಿಖೆಗೆ ಅರ್ಹವಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಪ್ರಯೋಗಾಲಯದ ಅಧ್ಯಯನ ಹೇಳಿರುವುದಾಗಿ ‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಪ್ರಕಟಿಸಿದೆ.
ಕ್ಯಾಲಿಫೋರ್ನಿಯಾದ ‘ಲಾರೆನ್ಸ್ ಲಿವರ್ಮೋರ್ ರಾಷ್ಟ್ರೀಯ ಪ್ರಯೋಗಾಲಯ’ವು ಈ ಅಧ್ಯಯನವನ್ನು ಮೇ 2020 ರಲ್ಲಿ ಸಿದ್ಧಪಡಿಸಿತ್ತು. ‘ಲಾರೆನ್ಸ್ ಲಿವರ್ಮೋರ್’ನ ಅಧ್ಯಯನವು ಕೊರೊನಾ ವೈರಸ್ನ ವಂಶವಾಹಿ ವಿಶ್ಲೇಷಣೆಯ ಬಗ್ಗೆ ಗಮನ ಸೆಳೆದಿತ್ತು ಎಂದು ವಾಲ್ಸ್ಟ್ರೀಟ್ ಜರ್ನಲ್ ಹೇಳಿದೆ. ಆದರೆ, ‘ವಾಲ್ಸ್ಟ್ರೀಟ್ ಜರ್ನಲ್‘ನ ವರದಿಯ ಕುರಿತು ಪ್ರತಿಕ್ರಿಯಿಸಲು ‘ಲಾರೆನ್ಸ್ ಲಿವರ್ಮೋರ್‘ ನಿರಾಕರಿಸಿದೆ.
ಅಂದ್ಹಾಗೆ ಚೀನಾ ಕರೋನಾ ವೈರಸ್ ನ್ನು ಬಳಸಿ ಅದನ್ನು ಜೆನೆಟಿಕ್ ಅಸ್ತ್ರದ ರೂಪದಲ್ಲಿ ಬಳಸುವ ಬಗ್ಗೆ ಆ ಪತ್ರದಲ್ಲಿ ಚರ್ಚಿಸಲಾಗಿತ್ತು. 2015ರಲ್ಲೇ ಚೀನಾದಲ್ಲಿ ಕರೋನಾ ಜೆನೆಟಿಕ್ ಅಸ್ತ್ರದ ಬಗ್ಗೆ ಚರ್ಚೆ ನಡೆಸಿರುವುದು ವಿಶ್ವಾದ್ಯಂತ ಸಂಚಲನ ಸೃಷ್ಟಿಸಿತ್ತು. ಕಳೆದ 5 ವರ್ಷಗಳಿಂದ ಚೀನಾ ಕರೋನಾ ಜೆನೆಟಿಕ್ ಅಸ್ತ್ರ ತಯಾರಿಸುತ್ತಿದೆ. ಚೀನಾ ಅಧಿಕಾರಿಗಳ ಈ ಪತ್ರ ಈಗ ಅಮೆರಿಕದ ಕೈಗೂ ಸಿಕ್ಕಾಗಿದೆ.
ಅಲ್ಲದೇ ಚೀನಾ ಮೂರನೇ ವಿಶ್ವ ಯುದ್ಧಕ್ಕೆ ತಯಾರಿ ನಡೆಸುತ್ತಿತ್ತು. ಅದರಲ್ಲಿ ಕರೋನಾ ವೈರಸ್ ಜೈವಿಕ ಮತ್ತು ಜೆನೆಟಿಕ್ ಅಸ್ತ್ರ ತಯಾರಿಸಿ ಪ್ರಯೋಗಿಸುವ ಸಿದ್ದತೆ ನಡೆಸುತ್ತಿತ್ತು ಎಂದು ಪತ್ರದ ಆಧಾರ ಮೇಲೆ ಅಮೆರಿಕ ಹೇಳಿದೆ. ಸಿಕ್ರೇಟ್ ಕೋವಿಡ್ ಡಾಕ್ಯುಮೆಂಟ್ ಎಂದು ಹೇಳಲಾಗಿರುವ ಈ ಪತ್ರದಲ್ಲಿ ‘ಇದು ನಮ್ಮ ಗೆಲುವಿನ ಪ್ರಮುಖ ಅಸ್ತ್ರವಾಗಿದೆ’ ಎಂದು ಹೇಳಲಾಗಿತ್ತು.
ಚೀನಾ 2015 ರಿಂದಲೇ ಕರೋನಾ ಜೈವಿಕಾಸ್ತ್ರ ಸೇನಾ ಮಟ್ಟದಲ್ಲಿ ಬಳಸುವ ತಯಾರಿ ನಡೆಸುತ್ತಿತ್ತು ಎಂದು ಅಸ್ಟ್ರೇಲಿಯಾದ Weekend Australian ಎಂಬ ಪತ್ರಿಕೆ ವರದಿ ಮಾಡಿತ್ತು. ಮೂರನೇ ವಿಶ್ವ ಯುದ್ದ ಜೈವಿಕ ಅಸ್ತ್ರದ ಮೂಲಕ ನಡೆಯಲಿದೆ ಎಂದು ಚೀನಾ ಡ್ಯಾಕುಮೆಂಟ್ ತಿಳಿಸಿತ್ತು.