ಅತಿ ಹೆಚ್ಚು ಸೋಂಕು ಪ್ರಕರಣಗಳಿರುವ ದೇಶ ಅಮೆರಿಕಾ
ಇಡೀ ವಿಶ್ವಾದ್ಯಂತ ಇಂದು ಒಂದೇ ದಿನ ಒಟ್ಟು 10,478 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 15.4 ಕೋಟಿಗೆ (15,41,75,226) ಏರಿಕೆಯಾಗಿದ್ದು, ಸಾವಿನ ಸಂಖ್ಯೆ 32.26 (3,226,743) ಲಕ್ಷಕ್ಕೆ ತಲುಪಿದೆ. ಅಮೆರಿಕಾದಲ್ಲಿ ಈವರೆಗೂ ಅತಿ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ಇಂದು ಒಂದೇ ದಿನ ಅಮೆರಿಕಾದಲ್ಲಿ ಒಟ್ಟು 39,767 ಹೊಸ ಪ್ರಕರಣಗಳು ಪತ್ತೆಯಾಗಿವೆ. 445 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಅಮೆರಿಕಾದಲ್ಲಿ ಈ ವರೆಗೂ ಪತ್ತೆಯಾದ ಒಟ್ಟು ಸೋಂಕಿತರ ಸಂಖ್ಯೆ 3.32 ಕೋಟಿಗೆ (3,32,30,561) ಏರಿಕೆಯಾಗಿದೆ. ಸಾವಿನ ಸಂಖ್ಯೆ 5.91 ಲಕ್ಷಕ್ಕೆ (5,91,514) ತಲುಪಿದೆ.