ಕೊರೊನಾ ಹಾವಳಿ : ಭಾರತದ ನೆರವಿಗೆ ಧಾವಿಸಿದ ‘ವಿಶ್ವದ ದೊಡ್ಡಣ್ಣ’
ಭಾರತದಲ್ಲಿ ಕೊರೊನಾ ಹಾವಳಿ ಋವದ್ರಾವತಾರ ತಾಳಿದ್ದು, ಆಕ್ಸಿಜನ್ ಕೊರತೆ , ಬೆಡ್ ಕೊರತೆ ಇನ್ನಿತರೇ ಸಮಸ್ಯೆಗಳು ಎದುರಾಗಿವೆ. ಈ ನಡುವೆ ಅನೇಕ ಮಿತ್ರ ರಾಷ್ಟ್ರಗಳು ಭಾರತದ ನೆರವಿಗೆ ದಾವಿಸಿವೆ. ಇದೀಗ ಅಮೆರಿಕಾ ಸಹ ಭಾರತಕ್ಕೆ ಸಹಾಯಾಸ್ತ ಚಾಚಿದೆ. ಕೋವಿಡ್19 ಪಿಡುಗಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ತ್ವರಿತವಾಗಿ ನೆರವು ನೀಡಲಾಗುವುದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಥೋನಿ ಬ್ಲಿಂಕೆನ್‌ಹೇಳಿದ್ದಾರೆ.
ತನ್ನಲ್ಲಿರುವ ಹೆಚ್ಚುವರಿ ಲಸಿಕೆ ನೀಡುವುದು ಸೇರಿದಂತೆ, ಕೋವಿಡ್‌ಪಿಡುಗಿನಿಂದ ತತ್ತರಿಸಿರುವ ಭಾರತಕ್ಕೆ ಎಲ್ಲ ನೆರವು ನೀಡಲು ಅಮೆರಿಕ ಮುಂದಾಗಬೇಕು ಎಂದು ಅಧ್ಯಕ್ಷ ಜೋ ಬೈಡನ್‌ಅವರ ಮೇಲೆ ಒತ್ತಡ ಹೆಚ್ಚಿದ ಬೆನ್ನಲ್ಲೇ ಬ್ಲಿಂಕೆನ್‌ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
‘ಭಾರತ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಭಾರತೀಯರಿಗೆ ಹಾಗೂ ಮುಂಚೂಣಿಯಲ್ಲಿದ್ದು ಕೋವಿಡ್ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿಗೆ ಶೀಘ್ರದಲ್ಲಿಯೇ ನೆರವು ನೀಡಲಾಗುವುದು’ ಎಂದು ಬ್ಲಿಂಕೆನ್‌ಟ್ವೀಟ್‌ಮಾಡಿದ್ದಾರೆ.








