ADVERTISEMENT
Saturday, June 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ಪಾಕ್‍ಗೆ ಅಮೆರಿಕಾ ದೊಡ್ಡಣ್ಣ.. ಚೀನಾ ಚಿಕ್ಕಣ್ಣ ಆಗಿರಬಹುದು.. ಆದ್ರೆ ಐಸಿಸಿಗೆ ಭಾರತದ ಬಿಸಿಸಿಐ ದೊಡ್ಡಣ್ಣನೂ ಹೌದು..ಒಡೆಯನೂ ಹೌದು..!

admin by admin
February 6, 2026
in Sports, Newsbeat, ಕ್ರಿಕೆಟ್
America may be the big brother to Pakistan, China may be the little brother, but India's BCCI is also the big brother to the ICC, and even its own brother!

America may be the big brother to Pakistan, China may be the little brother, but India's BCCI is also the big brother to the ICC, and even its own brother!

Share on FacebookShare on TwitterShare on WhatsappShare on Telegram

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಈಗ ಬ್ರದರ್ಸ್ ಅಂತೆ. ಹೋ.. ಹೋ..ಎಷ್ಟೊಂದು ಪ್ರೀತಿ, ಎಷ್ಟೊಂದು ಅಗಾಧವಾದ ಸ್ನೇಹ.. ಅಬ್ಬಾಬ್ಬಾ…ಯಾರನ್ನು ನಂಬಬೇಕು..? ಬೆನ್ನಿಗೆ ಚೂರಿ ಹಾಕುವುದು ಅಂದ್ರೆ ಇದೆ ಅಲ್ವಾ.. ?

ಅವತ್ತು ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅಂತಹುದ್ದೊಂದು ದಿಟ್ಟ ನಿರ್ಧಾರ ತೆಗೆದುಕೊಳ್ಳದೇ ಇರುತ್ತಿದ್ರೆ ಇವತ್ತು ಬಾಂಗ್ಲಾದೇಶ ಎಂಬ ದೇಶವೇ ವಿಶ್ವ ಭೂಪಟದಲ್ಲಿ ಇರುತ್ತಿರಲಿಲ್ಲ. ಪಾಕಿಸ್ತಾನದ ಕೈಗೊಂಬೆಯಾಗಿ ನರರಾಕ್ಷಸರು ಎಂಬ ಕುಖ್ಯಾತಿಯನ್ನು ಪಡೆದುಕೊಳ್ಳುತ್ತಿತ್ತು. ಆದ್ರೆ,
ಯುದ್ಧ ಮಾಡಿ ಬಾಂಗ್ಲಾದೇಶಕ್ಕೆ ಪಾಕಿಸ್ತಾನದಿಂದ ಮುಕ್ತಿಕೊಟ್ಟಿರುವ ಭಾರತಕ್ಕೆ ಸಿಕ್ಕಿರುವುದಾದ್ರೂ ಏನು..? ಹಾಗೇ ನೋಡಿದ್ರೆ ಸ್ವತಂತ್ರ ಬಾಂಗ್ಲಾದೇಶಕ್ಕೆ ಭಾರತದ ಕೊಡುಗೆ ಸಾಕಷ್ಟಿದೆ. ಆರ್ಥಿಕವಾಗಿ ನೆರವು ನೀಡಿದ್ದ ಭಾರತಕ್ಕೆ ಈಗ ಬಾಂಗ್ಲಾ ದೇಶ ಮಹಾದ್ರೋಹ ಬಗೆಯುತ್ತಿದೆ.

Related posts

CM Yogi Adityanath

ಸನಾತನ ಧರ್ಮದ ಜೊತೆ ಆಟವಾಡಿದರೆ ಸುಮ್ಮನಿರಲ್ಲ: ಅಯೋಧ್ಯೆ ದೇಣಿಗೆ ಹಗರಣದ ಬೆನ್ನಲ್ಲೇ ಗುಡುಗಿದ ಸಿಎಂ ಯೋಗಿ

June 27, 2026
ಅಡ್ಡ ಮತದಾನಕ್ಕೆ ನಾನೇ ಕಾರಣ ಎಂಬ ಆರೋಪ ಸುಳ್ಳು : ನನ್ನ ಟೈಮ್ ಚೆನ್ನಾಗಿದೆ, ಪಕ್ಷ ವಿರೋಧಿಗಳಿಗೆ ಹೆದರಲ್ಲ- ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿರೋಧಿಗಳಿಗೆ ವಿಜಯೇಂದ್ರ ಖಡಕ್ ಉತ್ತರ

ಅಡ್ಡ ಮತದಾನಕ್ಕೆ ನಾನೇ ಕಾರಣ ಎಂಬ ಆರೋಪ ಸುಳ್ಳು : ನನ್ನ ಟೈಮ್ ಚೆನ್ನಾಗಿದೆ, ಪಕ್ಷ ವಿರೋಧಿಗಳಿಗೆ ಹೆದರಲ್ಲ- ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿರೋಧಿಗಳಿಗೆ ವಿಜಯೇಂದ್ರ ಖಡಕ್ ಉತ್ತರ

June 27, 2026

ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಪಾಕ್‍ನಂತೆ ಬಾಂಗ್ಲಾದೇಶ ಕೂಡ ಭಾರತದ ಮೇಲೆ ಮುಗಿಬೀಳುತ್ತಿದೆ. ಪಾಕ್ ಕುಮ್ಮಕ್ಕಿನಿಂದ ಬಾಂಗ್ಲಾದೇಶದಲ್ಲಿ ಅಂತರಿಕ ಕಲಹ ಸೃಷ್ಟಿಸಿ ಪ್ರಧಾನಿ ಶೇಕ್ ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಯ್ತು. ಅಲ್ಲದೇ ಜೀವ ಭಯದಿಂದ ಓಡಿ ಬಂದ ಶೇಖ್ ಹಸೀನಾ ಅವರಿಗೆ ರಕ್ಷಣೆ ನೀಡಿದ್ದು ಭಾರತ ಸರ್ಕಾರ. ನಂತರ ಬಾಂಗ್ಲಾ ಮತ್ತು ಭಾರತದ ನಡುವಿನ ಸಂಬಂದ ಹದಗೆಟ್ಟಿತ್ತು. 2009ರಿಂದ 2024ರವರೆಗೆ ಶೇಖ್ ಹಸೀನಾ ಅವರು ಬಾಂಗ್ಲಾ ಪ್ರಧಾನಿಯಾಗಿದ್ದಾಗ ಭಾರತದ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಆದ್ರೆ ಈ ಸಂಬಂಧಕ್ಕೆ ಹುಳಿ ಹಿಂಡಿದ್ದು ಪಾಕಿಸ್ತಾನ ಎಂದು ಗುಟ್ಟಾಗಿರುವ ವಿಚಾರವೇನೂ ಅಲ್ಲ.

ಈಗಾಗಲೇ ಬಾಂಗ್ಲಾದೇಶವನ್ನು ರಾಜಕೀಯವಾಗಿ ಪಾಕ್ ಅತಂತ್ರಗೊಳಿಸಿದೆ. ಇದೀಗ ಕ್ರಿಕೆಟ್ ಆಟಕ್ಕೂ ಕಲ್ಲು ಹಾಕಿದೆ. ಪಾಕ್ ಮಾತನ್ನು ನಂಬಿ ಹಿಟ್‍ವಿಕೆಟ್ ಆದ ಬಾಂಗ್ಲಾದೇಶ 2026 ಟಿ-20 ವಿಶ್ವಕಪ್ ಟೂರ್ನಿಯಿಂದಲೇ ಗೆಟ್ ಔಟ್ ಆಗಿದೆ.

ಇತ್ತ ಪಾಕಿಸ್ತಾನ ಭಾರತ ವಿರುದ್ಧದ ಪಂದ್ಯವನ್ನು ಬಾಯ್ಕಟ್ ಮಾಡುವುದಾಗಿ ಬೆದರಿಕೆ ಹಾಕಿದೆ. ಹೀಗಾಗಿ ಪಾಕ್ ಥರ್ಡ್ ಅಂಪೈರ್ ರಿವ್ಯೂನಲ್ಲಿದೆ. ಇನ್ & ಔಟ್ ಬಟನ್ ಮೇಲೆ ಕೈಬೆರಳಿಟ್ಟಿರುವ ಐಸಿಸಿ ಯಾವ ಬಟನ್ ಪ್ರೆಸ್ ಮಾಡುತ್ತೆ ಅನ್ನೋದು ಸದ್ಯಕ್ಕಿರುವ ಕುತೂಹಲ.

ಅಂದ ಹಾಗೇ, ಪಾಕಿಸ್ತಾನ ಭಾರತದಲ್ಲಿ ಅಥವಾ ಭಾರತದ ವಿರುದ್ಧ ಆಡಲ್ಲ ಎಂದು ಹೇಳುವುದಕ್ಕೆ ಹಲವಾರು ಕಾರಣಗಳಿವೆ. ಅದನ್ನು ಒಪ್ಪಿಕೊಳ್ಳೋಣ. ಯಾಕಂದ್ರೆ ಭಾರತ ಪಾಕ್ ನೆಲದಲ್ಲಿ ಆಡಲ್ಲ ಎಂದು ಹೇಳಿದಾಗ ಪಾಕಿಸ್ತಾನ ಕೂಡ ಅದೇ ಮಾತು ಹೇಳುವುದು ತಪ್ಪೇನೂ ಅಲ್ಲ. ಅದಕ್ಕೆ ಐಸಿಸಿ ಕೂಡ ಉಭಯ ದೇಶಗಳ ನಡುವಿನ ಕ್ರಿಕೆಟ್ ಆಟವನ್ನು ತಟಸ್ಥ ತಾಣದಲ್ಲಿ ಆಡಿಸುವ ತೀರ್ಮಾನವನ್ನು ಕೂಡ ತೆಗೆದುಕೊಂಡಿದೆ.

ಐಸಿಸಿಯ ಈ ನಿರ್ಧಾರದಿಂದಲೇ ಪಾಕ್ ವಿಶ್ವ ಕ್ರಿಕೆಟ್ ನಲ್ಲಿ ಆಡುತ್ತಿದೆ. ಒಂದು ವೇಳೆ ಬಿಸಿಸಿಐ ಮನಸ್ಸು ಮಾಡಿದ್ರೆ ಯಾವತ್ತೋ ಪಾಕ್ ಕ್ರಿಕೆಟ್ ತಂಡಕ್ಕೆ ವಿಶ್ವ ಕ್ರಿಕೆಟ್‍ನಿಂದಲೇ ಗೇಟ್ ಪಾಸ್ ನೀಡಬಹುದಿತ್ತು. ಆದ್ರೆ ಪ್ರತಿಭಾವಂತ ಆಟಗಾರರನ್ನು ಹೊಂದಿರುವ ಪಾಕ್ ಕ್ರಿಕೆಟ್‍ಗೆ ಇನ್ನೂ ಸ್ಥಾನಮಾನ ಸಿಗುತ್ತಿರುವುದು ಬಿಸಿಸಿಐ ಕೃಪೆಯಿಂದಲೇ ಎಂಬುದನ್ನು ಮರೆಯುವ ಹಾಗಿಲ್ಲ. ಯಾಕಂದ್ರೆ ಐಸಿಸಿ ಖಜಾನೆಯ ಶೇ.80ರಷ್ಟು ಹಣವನ್ನು ತುಂಬಿಸುವುದು ಬಿಸಿಸಿಐ. ಹೌದು, ವಿಶ್ವ ಕ್ರಿಕೆಟ್‍ಗೆ ಐಸಿಸಿ ಬಾಸ್ ಆಗಿರಬಹುದು.. ಆದ್ರೆ ಐಸಿಸಿಗೆ ಬಿಸಿಸಿಐನೇ ಕುಬೇರ.

ಸದ್ಯ ಬಾಂಗ್ಲಾ – ಪಾಕ್‍ನ ಪರಿಸ್ಥಿತಿಯನ್ನು ನೋಡಿದಾಗ, ಕೋ…. ತಾನು ಕೆಡುವುದಲ್ಲದೆ ವನವನ್ನೆಲ್ಲಾ ಕೆಡಿಸಿದ್ದಂತೆ ಎಂಬ ಗಾದೆ ಮಾತು ನೆನಪಿಗೆ ಬರುತ್ತೆ. ಭಾರತದ ವಿರುದ್ದ ಸೇಡು ತೀರಿಸಿಕೊಳ್ಳಲು ಬಾಂಗ್ಲಾದೇಶಕ್ಕೆ ಪ್ರಚೋಚನೆ ನೀಡಿದ ಪಾಕ್‍ನ ಪರಿಸ್ಥಿತಿ ಈಗ ಅಯೋಮಯವಾಗಿದೆ.

ಮೇಲ್ನೋಟಕ್ಕೆ ಭಾರತದ ವಿರುದ್ಧ ಆಡಲ್ಲ ಎಂದು ಪಾಕ್ ಡಂಗುರ ಸಾರಿದೆ. ಆದ್ರೆ ಅದರ ಮುಂದಿನ ಪರಿಣಾಮ ಏನಾಗುತ್ತೆ ಎಂದು ಗೊತ್ತಿದ್ರೂ ಪಾಕಿಸ್ತಾನ ಮಾತ್ರ ತನ್ನ ಭಂಡತನವನ್ನು ಬಿಟ್ಟಿಲ್ಲ. ಆರ್ಥಿಕವಾಗಿ ಹೀನಾಯ ಸ್ಥಿತಿಯಲ್ಲಿರುವ ಪಿಸಿಬಿಯ ಬೊಕ್ಕಸಕ್ಕೆ ಈ ಪಂದ್ಯದಿಂದ ಕೋಟ್ಯಂತರ ರೂಪಾಯಿ ಹರಿದುಬರುತ್ತಿತ್ತು. ಅಷ್ಟೇ ಅಲ್ಲ, ಭಾರತದ ವಿರುದ್ದದ ಪಂದ್ಯದಿಂದ ಪಿಸಿಬಿಗೆ ಒಂದು ವರ್ಷಕ್ಕಾಗುವಷ್ಟು ಆದಾಯವೂ ಸಿಗುತ್ತಿತ್ತು. ಆದ್ರೆ ದ್ವೇಷ, ಅಸೂಯೆ, ಪ್ರತಿಕಾರ, ಸೇಡು ತೀರಿಸಿಕೊಳ್ಳಲು ಮುಂದಾಗಿರುವ ಪಿಸಿಬಿ ಈಗ ದುಡ್ಡು, ಸ್ಥಾನಮಾನ ಎಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ.

ನಿಜ, ಭಾರತದಲ್ಲಿ ಪಾಕ್ ಆಡಲ್ಲ ಎಂದು ಹೇಳುವುದು ಓಕೆ.. ಆದ್ರೆ ಭಾರತದ ವಿರುದ್ದ ಪಂದ್ಯವನ್ನು ಬಾಯ್ಕಾಟ್ ಮಾಡುವುದು ಯಾಕೆ..? ಈ ಪ್ರಶ್ನೆಗೆ ಉತ್ತರ ಸಿಂಪಲ್. ಬಾಂಗ್ಲಾದೇಶದ ಒಲೈಕೆ ಮಾಡೋದು. ಯಾಕಂದ್ರೆ ಭಾರತದಲ್ಲಿ ನಾವು ಆಡಲ್ಲ.. ನೀವೂ ಆಡೋದು ಬೇಡ.. ತಟಸ್ಥ ತಾಣದಲ್ಲಿ ಆಡುವಂತೆ ಐಸಿಸಿಗೆ ಒತ್ತಡ ಹೇರುವಂತೆ ಬಾಂಗ್ಲಾದೇಶಕ್ಕೆ ಕಿವಿಹಿಂಡಿದ್ದು ಇದೇ ಪಾಕಿಸ್ತಾನ.

ಆದ್ರೆ ಪಾಕ್ ಮಾತನ್ನು ನಂಬಿದ್ದ ಬಾಂಗ್ಲಾದೇಶ ಐಸಿಸಿಗೆ ಮನವಿಯನ್ನು ಸಲ್ಲಿಸಿತ್ತು. ಬಾಂಗ್ಲಾ ಮನವಿಯನ್ನು ತಿರಸ್ಕರಿಸಿದ್ದ ಐಸಿಸಿ, ಆಡುವುದಾದ್ರೆ ಆಡಿ ಇಲ್ಲ ಅಂದ್ರೆ ಬೇಡ ಎಂದು ಟೂರ್ನಿಯಿಂದಲೇ ಹೊರದಬ್ಬಿದೆ. ಈ ಅವಮಾನಕ್ಕೆ ಪ್ರತಿಕಾರವಾಗಿ ಪಾಕ್ ಸರ್ಕಾರ ಹೊಸ ವರಸೆ ಶುರು ಮಾಡಿದೆ. ಭಾರತದ ವಿರುದ್ದ ಆಡಲ್ಲ ಎಂದು ಬೆದರಿಕೆ ಹಾಕಿರುವ ಪಾಕಿಸ್ತಾನದ ಪರಿಸ್ಥಿತಿ ಈಗ ಅತ್ತ ದರಿ.. ಇತ್ತ ಪುಲಿ ಎಂಬ ಗಾದೆ ಮಾತಿನಂತಿದೆ.

ಒಂದಂತೂ ಸತ್ಯ.. ಭಾರತಕ್ಕೂ ಪಾಕ್ ವಿರುದ್ದ ಕ್ರಿಕೆಟ್ ಆಡಲೇಬೇಕು ಎಂಬ ಅನಿವಾರ್ಯತೆ ಇಲ್ಲ. ಪಿಸಿಬಿ ಬೊಕ್ಕಸಕ್ಕೆ ದುಡ್ಡು ತುಂಬಿಸುವ ಅಗತ್ಯವೂ ಭಾರತಕ್ಕಿಲ್ಲ. ಯಾಕಂದ್ರೆ ಪಿಸಿಬಿಯ ಹಣ ಕ್ರಿಕೆಟ್ ಆಟಗಾರರಿಗಿಂತ ಜಾಸ್ತಿ ರಕ್ಕಸರ ಜೇಬಿಗೆ ಸೇರುತ್ತೆ ಎಂಬ ವಿಚಾರವೂ ಗೊತ್ತಿದೆ. ಭಾರತ – ಪಾಕ್ ನಡುವಿನ ದ್ವಿಪಕ್ಷೀಯ ಸರಣಿ ರದ್ದುಗೊಂಡಿರುವುದಕ್ಕೆ ಇದು ಕೂಡ ಒಂದು ಕಾರಣವಾಗಿದೆ. ಅದಕ್ಕಾಗಿಯೇ ಬಿಸಿಸಿಐ ಪಾಕ್ ನಿಲುವಿನ ಬಗ್ಗೆ ಮೌನವಾಗಿದೆ. ಕಾದು ನೋಡುವ ತಂತ್ರದ ಜೊತೆಗೆ ಐಸಿಸಿ ನಿರ್ಧಾರವನ್ನು ಎದುರು ನೋಡುತ್ತಿದೆ.

ಇಲ್ಲಿ ಪಾಕಿಸ್ತಾನ ನೆನಪಿಟ್ಟುಕೊಳ್ಳಬೇಕಾದ ವಿಚಾರ ಏನು ಅಂದ್ರೆ, ರಾಜತಾಂತ್ರಿಕವಾಗಿ, ಆರ್ಥಿಕವಾಗಿ ಪಾಕಿಸ್ತಾನಕ್ಕೆ ಬೆಂಬಲ ನೀಡಲು ಅಮೆರಿಕಾ, ಚೀನಾ, ಯುಎಇನ ಕೆಲವು ರಾಷ್ಟ್ರಗಳು ಮುಂದೆ ಬರಬಹುದು. ಆದ್ರೆ ಕ್ರಿಕೆಟ್ ಜಗತ್ತಿನಲ್ಲಿ ಪಾಕ್ ಅನ್ನು ಬೆಂಬಲಿಸುವ ರಾಷ್ಟ್ರಗಳು ತೀರಾ ಕಡಿಮೆ. ಮೊದಲೇ ಪಾಕ್ ನೆಲದಲ್ಲಿ ಆಡಲು ಬಹುತೇಕ ರಾಷ್ಟ್ರಗಳು ಹಿಂದೆ ಮುಂದೆ ಯೋಚನೆ ಮಾಡುತ್ತಿವೆ.

ಒಟ್ಟಿನಲ್ಲಿ ಪಾಕಿಸ್ತಾನದ ಕ್ರಿಕೆಟ್ ಭವಿಷ್ಯ ಈಗ ಐಸಿಸಿ ಕೈಯಲ್ಲಿದೆ. ಪಾಕ್ ಸರ್ಕಾರದ ಹಸ್ತಕ್ಷೇಪದ ಕಾರಣವನ್ನು ಮುಂದಿಟ್ಟುಕೊಂಡು ಪಾಕ್ ಕ್ರಿಕೆಟ್ ತಂಡದ ಐಸಿಸಿ ಸದಸ್ಯತ್ವವನ್ನೇ ರದ್ದುಗೊಳಿಸಬಹುದು. ಈ ಹಿಂದೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ತಂಡಗಳಿಗೆ ಐಸಿಸಿ ನಿಷೇಧ ಹೇರಿತ್ತು. ಇದೀಗ ಪಾಕ್‍ಗೂ ಅದೇ ಗತಿ ಬಂದ್ರೂ ಬರಬಹುದು. ಯಾಕಂದ್ರೆ ಪಾಕ್‍ಗೆ ಅಮೆರಿಕಾ, ಚೀನಾ ದೊಡ್ಡಣ್ಣ, ಚಿಕ್ಕಣ್ಣ ಆಗಿರಬಹುದು. ಆದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಭಾರತದ ಬಿಸಿಸಿಐನೇ ದೊಡ್ಡಣ್ಣನೂ ಹೌದು…ಒಡೆಯನೂ ಹೌದು.

ಸನತ್ ರೈ

Source: America may be the big brother to Pakistan, China may be the little brother, but India's BCCI is also the big brother to the ICC, and even its own brother!
Via: America may be the big brother to Pakistan, China may be the little brother, but India's BCCI is also the big brother to the ICC, and even its own brother!
Tags: #crikcketnews#icct-20worldcup#indiagovt#pakistangovt#saakshatv#saakshatv.combcciICCPCBteamindia
ShareTweetSendShare
Join us on:

Related Posts

CM Yogi Adityanath

ಸನಾತನ ಧರ್ಮದ ಜೊತೆ ಆಟವಾಡಿದರೆ ಸುಮ್ಮನಿರಲ್ಲ: ಅಯೋಧ್ಯೆ ದೇಣಿಗೆ ಹಗರಣದ ಬೆನ್ನಲ್ಲೇ ಗುಡುಗಿದ ಸಿಎಂ ಯೋಗಿ

by Shwetha
June 27, 2026
0

ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ವಿಶ್ವದಾದ್ಯಂತ ಇರುವ ಕೋಟ್ಯಂತರ ಭಕ್ತರು ಶ್ರದ್ಧಾಭಕ್ತಿಯಿಂದ ಸಮರ್ಪಿಸಿದ ದೇಣಿಗೆ ಮತ್ತು ಕಾಣಿಕೆಯನ್ನು ದುರುಪಯೋಗಪಡಿಸಿಕೊಂಡ ಘಟನೆ ಈಗ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಕ್ರಮದ...

ಅಡ್ಡ ಮತದಾನಕ್ಕೆ ನಾನೇ ಕಾರಣ ಎಂಬ ಆರೋಪ ಸುಳ್ಳು : ನನ್ನ ಟೈಮ್ ಚೆನ್ನಾಗಿದೆ, ಪಕ್ಷ ವಿರೋಧಿಗಳಿಗೆ ಹೆದರಲ್ಲ- ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿರೋಧಿಗಳಿಗೆ ವಿಜಯೇಂದ್ರ ಖಡಕ್ ಉತ್ತರ

ಅಡ್ಡ ಮತದಾನಕ್ಕೆ ನಾನೇ ಕಾರಣ ಎಂಬ ಆರೋಪ ಸುಳ್ಳು : ನನ್ನ ಟೈಮ್ ಚೆನ್ನಾಗಿದೆ, ಪಕ್ಷ ವಿರೋಧಿಗಳಿಗೆ ಹೆದರಲ್ಲ- ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿರೋಧಿಗಳಿಗೆ ವಿಜಯೇಂದ್ರ ಖಡಕ್ ಉತ್ತರ

by Shwetha
June 27, 2026
0

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಬೆಳವಣಿಗೆಯಿಂದ ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲಗಳಿಗೆ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಈಗ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ...

ಇಡಿ ಸಿಬಿಐ ಭಯಕ್ಕೆ ತಾಯಿಯಂತಾ ಪಕ್ಷವನ್ನೇ ಮಾರಿಕೊಂಡ್ರು: ಹೆತ್ತ ತಾಯಿಗೆ ದ್ರೋಹ ಬಗೆದಂತೆ ಪಕ್ಷಾಂತರ- ದ್ರೋಹಿಗಳಿಗೆ ಜನರೇ ಪಾಠ ಕಲಿಸ್ತಾರೆ ಎಂದು ಗುಡುಗಿದ ಮಮತಾ ಬ್ಯಾನರ್ಜಿ

ಇಡಿ ಸಿಬಿಐ ಭಯಕ್ಕೆ ತಾಯಿಯಂತಾ ಪಕ್ಷವನ್ನೇ ಮಾರಿಕೊಂಡ್ರು: ಹೆತ್ತ ತಾಯಿಗೆ ದ್ರೋಹ ಬಗೆದಂತೆ ಪಕ್ಷಾಂತರ- ದ್ರೋಹಿಗಳಿಗೆ ಜನರೇ ಪಾಠ ಕಲಿಸ್ತಾರೆ ಎಂದು ಗುಡುಗಿದ ಮಮತಾ ಬ್ಯಾನರ್ಜಿ

by Shwetha
June 27, 2026
0

ಪಕ್ಷದ ಸಂಕಷ್ಟದ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿರುವ ಶಾಸಕರು ಮತ್ತು ಸಂಸದರ ವಿರುದ್ಧ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ...

ಭೂತಾಯಿ ಬಾಯಿಬಿಡಲಿದ್ದಾಳೆ ಅಗ್ನಿ ಅವಘಡ ಹೆಚ್ಚಲಿದೆ : ನಡುಕ ಹುಟ್ಟಿಸುತ್ತಿದೆ ಕೋಡಿಶ್ರೀಗಳ ಭೀಕರ ಭವಿಷ್ಯ

ಭೂತಾಯಿ ಬಾಯಿಬಿಡಲಿದ್ದಾಳೆ ಅಗ್ನಿ ಅವಘಡ ಹೆಚ್ಚಲಿದೆ : ನಡುಕ ಹುಟ್ಟಿಸುತ್ತಿದೆ ಕೋಡಿಶ್ರೀಗಳ ಭೀಕರ ಭವಿಷ್ಯ

by Shwetha
June 27, 2026
0

ಜಗತ್ತಿನಾದ್ಯಂತ ಸಂಭವಿಸುತ್ತಿರುವ ಸರಣಿ ನೈಸರ್ಗಿಕ ವಿಕೋಪಗಳು ಮತ್ತು ಮಳೆಯಿಲ್ಲದೆ ಕಂಗಾಲಾಗಿರುವ ರೈತ ಸಮುದಾಯದ ಪರಿಸ್ಥಿತಿಯನ್ನು ಗಮನಿಸಿದರೆ, ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದ ಭವಿಷ್ಯವಾಣಿ...

ತಾಕತ್ತಿದ್ದರೆ ನನ್ನ ಮೇಲೆ ಐಟಿ ಇಡಿ ದಾಳಿ ಮಾಡಿಸಿ : ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಪ್ರದೀಪ್ ಈಶ್ವರ್ ಓಪನ್ ಚಾಲೆಂಜ್

ತಾಕತ್ತಿದ್ದರೆ ನನ್ನ ಮೇಲೆ ಐಟಿ ಇಡಿ ದಾಳಿ ಮಾಡಿಸಿ : ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಪ್ರದೀಪ್ ಈಶ್ವರ್ ಓಪನ್ ಚಾಲೆಂಜ್

by Shwetha
June 27, 2026
0

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವಿನ ವಾಕ್ಸಮರ ಈಗ ತಾರಕಕ್ಕೇರಿದೆ. ತಮ್ಮ ಶಿಕ್ಷಣ ಸಂಸ್ಥೆಯ ಬಗ್ಗೆ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram