America
ಅಮೆರಿಕ: ಟ್ರಂಪ್ ವಿರುದ್ಧ ಅಮೋಘ ಜಯಸಾಧಿಸಿರುವ ಬಿಡೆನ್ ಸದ್ಯ ಜನವರಿ 21ರಂದು ಅಧಿಕೃತವಾಗಿ ಅಧಿಕಾರದ ಚುಕ್ಕಾಣಿಯನ್ನ ಹಿಡಿಯಲಿದ್ದಾರೆ. ಇದರ ನಡಡುವೆಯೇ ಬಿಡೆನ್ ಅಧ್ಯಕ್ಷತೆಯಲ್ಲಿ ಭಾರತ ಮೂಲದ ಸುಮಾರು 20ಕ್ಕೂ ಹೆಚ್ಚು ಮಂದಿಗೆ ಪ್ರಮುಖ ಸ್ಥಾನಗಳು ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆರೋಗ್ಯ, ಪ್ರವಾಸ ಸೇರಿದಂತೆ ವಿವಿಧ ಮಂಡಳಿಗಳಲ್ಲಿ ಪ್ರಮುಖ ಸ್ಥಾನಗಳಿಗೆ ನಿಯುಕ್ತಿಗೊಳಿಸಲು ತಯಾರಿ ನಡೆಸಲಾಗಿದೆ. ಇದರಲ್ಲಿ ಅರ್ಧದಷ್ಟು ಮಹಿಳೆಯರಿರುತ್ತಾರೆ ಎಂದು ಸಹ ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಇದೇ ಮೊದಲಬಾರಿಗೆ ಮಹಿಳಾ ಉಪಾಧ್ಯಕ್ಷರಾಗಿ ಅಮೆರಿಕಾದ ಇತಿಹಾಸದಲ್ಲಿ ಹೊಸ ಅಧ್ಯಯನ ಬರೆದಿರುವ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಮಹಿಳೆಯರಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪ್ರತಿಜ್ಞಾವಿಧಿ ಸಂದರ್ಭದಲ್ಲಿ ಎಲ್ಲ ವಿಧಿ-ವಿಧಾನಗಳು ಸುಗಮವಾಗಿ ನಡೆಯಲು ಮತ್ತು ಅಧಿಕಾರ ಹಸ್ತಾಂತರವೂ ಕೂಡ ಸುಲಭವಾಗಿ ನಡೆಯಲು ಭಾರತೀಯ ಮೂಲದವರು ಸೇರಿದಂತೆ ಹಲವರಿಗೆ ಈ ಜವಾಬ್ದಾರಿ ವಹಿಸಲಾಗುತ್ತಿದೆ ಎಂದು ಹೇಳಲಾಗ್ತಿದೆ. ಪ್ರತಿಷ್ಠಿತ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರುಣ್ ಮಜುಂದಾರ್ ಅವರು ಇಂಧನ ಎಆರ್ಟಿ ವಿಭಾಗದ ತಂಡದ ಪ್ರಮುಖರಾಗಿದ್ದಾರೆ. ರಾಹುಲ್ ಗುಪ್ತಾ ಅವರು ರಾಷ್ಟ್ರೀಯ ಔಷಧ ನಿಯಂತ್ರಣ ನೀತಿ ಕಚೇರಿಯ ತಂಡದ ಪ್ರಮುಖರಾಗಿದ್ದಾರೆ. ಕಿರಣ್ ಅಹುಜಾ ಅವರನ್ನು ಸಿಬ್ಬಂದಿ ನಿರ್ವಹಣಾ ಕಚೇರಿಗೆ ಟೀಮ್ ಲೀಡರ್ ಎಂದು ಹೆಸರಿಸಲಾಗಿದೆ.
ಈ ಲಿಸ್ಟ್ ನಲ್ಲಿ ಪ್ರವೀಣ ರಾಘವನ್, ಶಿಟಲ್ ಶಾ, ರಮೇಶ್, ರಾಮ ಜಕಾರಿಯಾ, ಆತ್ಮ ತ್ರಿವೇದಿ, ಸುಭಾಸ್ರಿ ರಾಮನಾಥನ್,ರಾಜ್ ದೇ, ಸೀಮಾ ನಂದಾ, ರಾಜ್ ನಾಯಕ್ ಅವರ ಹೆಸೂ ಇದ್ದು, ಅವರಿಗೆ ಹಲವು ಜವಾಬ್ದಾರಿಗಳನ್ನ ನೀಡಲಾಗ್ತಿದೆ. ಇನ್ನೂ ಪುನೀತ್ ತಲ್ವಾರ್ ಅವರನ್ನು ರಾಜ್ಯ ಎಆರ್ಟಿ ಇಲಾಖೆಗೆ ನೇಮಿಸಲಾಗಿದೆ. ಪವನ್ ಸಿಂಗ್ ಅವರನ್ನು ರಾಷ್ಟ್ರೀಯ ಭದ್ರತಾ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಕಚೇರಿಗೆ ಅಂತೆಯೇ, ಅರುಣ್ ವೆಂಕಟರಮಣ ಅವರನ್ನು ವಾಣಿಜ್ಯ ಇಲಾಖೆಗೆ ನೇಮಿಸಲಾಗಿದೆ. ರೀನಾ ಅಗರ್ವಾಲ್ ಮತ್ತು ಸತ್ಯಂ ಖನ್ನಾ ಅವರ ಹೆಸರುಗಳು ಮಹತ್ವದ ಫೆಡರಲ್ ರಿಸರ್ವ್ ಬ್ಯಾಂಕಿಂಗ್ ಮತ್ತು ಸೆಕ್ಯುರಿಟೀಸ್ ರೆಗ್ಯುಲೇಟರ್ಸ್ಗಳಲ್ಲಿ ಕೇಳಿಬಂದಿದೆ. ಭಾವ್ಯಾ ಲಾಲ್ ನಾಸಾಗೆ, ರಾಷ್ಟ್ರೀಯ ಭದ್ರತಾ ಮಂಡಳಿಗೆ ದಿಲ್ಪ್ರೀತ್ ಸಿಧು, ನಿರ್ವಹಣೆ ಮತ್ತು ಬಜೆಟ್ ಕಚೇರಿಗಾಗಿ ದಿವ್ಯಾ ಕುಮಾರಯ್ಯ, ಕೃಷಿ ಇಲಾಖೆಗೆ ಕುಮಾರ್ ಚಂದ್ರನ್, ಮತ್ತು ಅನೀಶ್ ಚೋಪ್ರಾ ಯುಎಸ್ ಅಂಚೆ ಸೇವೆಗೆ ಇವರೆಲ್ಲರೂ ಬಹುತೇಕ ಸ್ವಯಂ ಸೇವಕರಾಗಿರುತ್ತಾರೆ.
ಸಾಲು ಸಾಲು ಸೋಲುಗಳಿಂದ ಬೇಸತ್ತ ‘ರಾಗಾ’ ಮರಳು ದಿಬ್ಬಕ್ಕೆ ಪಯಣ..!
America
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel