ಭಾರತದ ಗಡಿಯಲ್ಲಿ ಚೀನಾದ ಮಿಲಿಟರಿ ಆಕ್ರಮಣ ವಿರೋಧಿ ಕಾಯ್ದೆಗೆ ಅಮೆರಿಕಾ ಸಂಸತ್ತಿನಲ್ಲಿ ಗ್ರೀನ್ ಸಿಗ್ನಲ್..!
ಅಮೆರಿಕಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧದ ನಡುವೆಯೂ, ಭಾರತದ ಗಡಿಯಲ್ಲಿ ಚೀನಾದ ಮಿಲಿಟರಿ ಆಕ್ರಮಣವನ್ನು ವಿರೋಧಿಸುವ ಮಸೂದೆಯನ್ನು ಅಮೆರಿಕದ ಸಂಸತ್ತು ಕಾಯ್ದೆಯನ್ನಾಗಿ ರೂಪಿಸಿದೆ. ಸೆನೆಟ್ ನಲ್ಲಿ ಅನುಮೋದನೆ ಗೊಂಡಿದ್ದ NDDA 2021 ಮಸೂದೆಯನ್ನು ಅಮೆರಿಕದ ಉಭಯ ಪಕ್ಷೀಯ ಸಂಸತ್ತು ಕಾಯ್ದೆಯಾಗಿ ಅನುಷ್ಠಾನಗೊಳಿಸಿದೆ.
ಕದ್ದ ಕಾರು ಸಿಕ್ಕಿದ್ದು 2 ವರ್ಷ ಆದ್ಮೇಲೆ : ಇದ್ದದ್ದು ಯಾರ ಬಳಿ ಗೊತ್ತಾ..!
ಇನ್ನೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಕಾಯ್ದೆಗೆ ಮುಂಚೆಯಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು. ಇದರಿಂದ ದೇಶದ ಭದ್ರತೆಗೆ ಅಪಾಯವಾಗುತ್ತದೆ ಎಂದು ಹೇಳುತ್ತಲೇ ಬಂದಿದ್ದರು. ಆದರೆ ಅವರ ವಿರೋಧದ ನಡುವೆಯೂ ಈ ಮಸೂದೆ ಅಂಗೀಕಾರವಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಟ್ರಂಪ್ ವಿರೋಧವನ್ನು ಉಭಯ ಪಕ್ಷದ ಸಂಸದರು ತಳ್ಳಿ ಹಾಕಿದ್ದಾರೆ. ರಕ್ಷಣಾ ಮಸೂದೆಯನ್ನು ಕಾನೂನಾಗಿಸುವ ಪರ ಮತಚಲಾಯಿಸಿದರು.
ಭಾರತೀಯ-ಅಮೆರಿಕನ್ ಸಂಸತ್ ಸದಸ್ಯ ರಾಜ ಕೃಷ್ಣಮೂರ್ತಿ ಹೊಸ ವರ್ಷದ ದಿನದಂದು ಸೆನೆಟ್ ನಲ್ಲಿ ಮತದಾನದ ಮೂಲಕ ಸಂಸತ್ತು ಚೀನಾದ ಮಿಲಿಟರಿ ಆಕ್ರಮಣ ಕೊನೆಗೊಳಿಸಲು ಚೀನಾಕ್ಕೆ ಕರೆ ನೀಡುವುದು ಸೇರಿದಂತೆ ನಾನು ನೀಡಿದ್ದ ಹಲವು ರಕ್ಷಣಾ ಅಂಶಗಳನ್ನು ಒಳಗೊಂಡ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆಯನ್ನು ಕಾನೂನನ್ನಾಗಿ ಮಾಡಿದೆ ಎಂದು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








