ಕದ್ದ ಕಾರು ಸಿಕ್ಕಿದ್ದು 2 ವರ್ಷ ಆದ್ಮೇಲೆ : ಇದ್ದದ್ದು ಯಾರ ಬಳಿ ಗೊತ್ತಾ..!
ಎರಡು ವರ್ಷಗಳ ಹಿಂದೆ ಅಂದ್ರೆ 2018ರ ಡಿಸೆಂಬರ್ 31 ರಂದು ಕಳವಾಗಿದ್ದ ಕಾರು ಇದೀಗ ಮಾಲೀಕರಿಗೆ ವಾಪಸ್ ಸಿಕ್ಕಿದೆ. ಸಿಕ್ಕಿದ್ದು, ಹೇಗೆ ಯಾರ ಬಳಿ ಇತ್ತು ಅನ್ನೋದೇ ಆಶ್ಚರ್ಯ ಮೂಡಿಸುತ್ತೆ. ಯಾಕಂದ್ರೆ ಈ ಕಳುವಾಗಿದ್ದ ಕಾರು ಇದ್ದದ್ದು ಓರ್ವ ಪೊಲೀಸ್ ಅಧಿಕಾರಿ ಬಳಿ. ಈ ಕಾರನ್ನು 2 ವರ್ಷಗಳಿಂದ ಅವರೇ ಬಳಸುತ್ತಿದ್ದರು.
ಅಂದ್ಹಾಗೆ ಕಾರನ್ನ ಸರ್ವೀಸ್ ಗೆ ಬಿಟ್ಟ ವೇಳೆ ಅಸಲಿ ಮಾಲೀಕರಿಗೆ ಈ ವಿಚಾರಗೊತ್ತಾಗಿದೆ. ಹೌದು ವಾಹನವನ್ನ ಸರ್ವೀಸ್ ಸೆಂಟರ್ ಒಂದರಲ್ಲಿ ರಿಪೇರಿ ಮಾಡಿಸಿಕೊಂಡಿದ್ದಾಗ, ಈ ಸಂಬಂಧ ಫೀಡ್ ಬ್ಯಾಕ್ ಕೇಳಿ ತಮ್ಮ ದೂರವಾಣಿ ಸಂಖ್ಯೆಗೆ ಕರೆ ಬಂದಾಗ ವಿಚಾರ ಗೊತ್ತಾಗಿದೆ.
ನೇಣ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯ್ತು ಮಹಿಳಾ ಸಬ್ ಇನ್ ಸ್ಪೆಕ್ಟರ್ ಮೃತದೇಹ..!
ಆ ಕಾರನ್ನು ಬಿತೂರ್ ಪೊಲೀಸ್ ಠಾಣೆಯ ಅಧಿಕಾರಿ ಕುಶಲೇಂದ್ರ ಪ್ರತಾಪ್ ಸಿಂಗ್ ಎಂಬುವವರು ಬಳಸುತ್ತಿದ್ದ ವಿಚಾರ ಗೊತ್ತಾಗಿದೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ತಿಳಿಸಿ ಅಸಲಿ ಮಾಲೀಕರಾದ ಒಮೇಂದ್ರ ಸೋನಿ ಕಾರನ್ನ ಹಿಂಪಡೆದಿದ್ದಾರೆ.
ಸ್ನೇಹ ನಿರಾಕರಿಸಿದ ಮಹಳಿಗೆ ಎಂಥಾ ಗತಿ ತಂದ ನೋಡಿ ಈ ಕಿರಾತಕ..!
ಅಸಲಿಗೆ 2 ವರ್ಷಗಳ ಹಿಂದೆ ಕಾರ್ ವಾಷಿಂಗ್ ಗಾಗಿ ಕೊಟ್ಟ ವೇಳೆ ಕಾರ್ ಕಳವಾಗಿದ್ದ ಬಗ್ಗೆ ಸೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು. ಆದ್ರೆ ಕಾರು ಸಿಕ್ಕಿರಲಿಲ್ಲ. ಇದೀಗ 2 ವರ್ಷಗಳ ನಂತರ ವಾಪಸ್ ಸಿಕ್ಕಿದೆ. ಇತ್ತ ಕಾರಿನ ಬಗ್ಗೆ ವಿಚಾರಿಸಿದಾಗ ಅಸ್ಪಷ್ಟವಾದ ಉತ್ತರ ನೀಡಿರುವ ಪೊಲೀಸ್ ಅಧಿಕಾರಿ ಆ ಕಾರನ್ನು ಯಾರೂ ಬಂದು ತೆಗೆದುಕೊಂಡು ಹೋಗದ ಕಾರಣ ತಾವೇ ಬಳಸುತ್ತಿದ್ದದ್ದಾಗಿ ತಿಳಿಸಿದ್ದಾರೆ. ಘಟನೆ ಸಂಬಂಧ ಕಾನ್ಪುರ ಪೊಲೀಸರು ಆಂತರಿಕ ತನಿಖೆಗೆ ಆದೇಶ ನೀಡಿದ್ದಾರೆ. ಒಟ್ಟಾರೆ 2 ವರ್ಷಗಳ ಬಳಿಕ ಕಾರು ವಾಪಸ್ ಸಿಕ್ಕ ಖುಷಿಯಲ್ಲಿ ಮಾಲೀಕರಿದ್ದಾರೆ.
ಅವಳಿ ಹೆಣ್ಣುಮಕ್ಕಳನ್ನು ನೀರಿನ ಟ್ಯಾಂಕ್ ನಲ್ಲಿ ಮುಳುಗಿಸಿ ಕೊಂದ ತಾಯಿ: ಕಾರಣ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








