ADVERTISEMENT
Wednesday, March 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಮೇರಿಕನ್ ಯಾತ್ರೆ: ನೇಟಿವ್ ಅಮೇರಿಕನ್ನರ ತವರು ಓಕ್ಲಹೋಮಾ ಎಂಬ ಕಟ್ಟರ್ ಸಂಪ್ರದಾಯಸ್ಥ ಕ್ರೈಸ್ತರ ನೆಲೆವೀಡಿನ ಕುರಿತು:

Shwetha by Shwetha
October 22, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Saakshatv yatrika episode 1
Share on FacebookShare on TwitterShare on WhatsappShare on Telegram

ಅಮೇರಿಕನ್ ಯಾತ್ರೆ: ನೇಟಿವ್ ಅಮೇರಿಕನ್ನರ ತವರು ಓಕ್ಲಹೋಮಾ ಎಂಬ ಕಟ್ಟರ್ ಸಂಪ್ರದಾಯಸ್ಥ ಕ್ರೈಸ್ತರ ನೆಲೆವೀಡಿನ ಕುರಿತು:- Saakshatv yatrika episode 1

ನಮ್ಮಲ್ಲನೇಕರಿಗೆ ‘ನೇಟಿವ್’ ಅಥವಾ ‘ಸ್ಥಳೀಯ ಅಮೆರಿಕನ್ನರು’ ಅನ್ನುವ ಪದ ಅಷ್ಟು ಪರಿಚಿತವಲ್ಲ. ಆದರೆ ರೆಡ್ ಇಂಡಿಯನ್ನರೆಂದರೆ ಕೂಡಲೇ ಅರ್ಥವಾಗುತ್ತದೆ. Saakshatv yatrika episode 1

Related posts

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

March 4, 2026
ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

March 4, 2026

ಆದರೆ ರೆಡ್ ಇಂಡಿಯನ್ ಅನ್ನುವುದು ಬಳಸಲು ಉಚಿತವಲ್ಲದ ಮತ್ತು ನಿಷೇಧಿಲ್ಪಟ್ಟ ಪದ (ಈಗಿನ‌ ಪಠ್ಯ ಪುಸ್ತಕಗಳಲ್ಲಿ ಆ ಶಬ್ದ ತೆಗೆದಿರಬಹುದು). ಆದರೆ ಟೆಕ್ಸಸ್ಸಿನ ಮೇಲಿರುವ ಅಮೆರಿಕಾದ ‘ಓಕ್ಲಹೋಮಾ’ ಅನ್ನುವ ಈ ರಾಜ್ಯದ ಹೆಸರಿನ ಅರ್ಥ ‘ಕೆಂಪು ಜನರು’ ಎಂದೇ. ಇವತ್ತಿಗೂ ದೊಡ್ಡ ಪ್ರಮಾಣದಲ್ಲಿ ನೇಟಿವ್ ಅಮೆರಿಕನ್ನರನ್ನ ಹೊಂದಿದೆ, ಅದಕ್ಕೇ ಈ ರಾಜ್ಯಕ್ಕೆ ನೇಟಿವ್ ಅಮೆರಿಕಾ ಅನ್ನುವ ಅಡ್ಡಹೆಸರೂ ಇದೆ.

Saakshatv yatrika episode 1

ಅಂತೆಯೇ ಅವರ ನಾಡಬಾವುಟದಲ್ಲಿ ಸ್ಥಳೀಯ ಅಮೆರಿಕನ್ನರು ಮತ್ತು ಯುರೋಪಿನ ವಲಸಿಗ ಅಮೆರಿಕನ್ನರಿಬ್ಬರ ಸೌಹಾರ್ದತೆ ಸೂಚಕ ಚಿಹ್ನೆಗಳಿಗೆ. ಓಕ್ಲಹೋಮಾದ ಸ್ಥಳೀಯ ಅಮೆರಿಕನ್ನರ ಬಗ್ಗೆ, ಅವರ ಜನಜೀವನ, ಹೋರಾಟದ ಬಗ್ಗೆ, ಇಂದಿನ ದಿನಗಳ ತಲ್ಲಣಗಳ ಬಗ್ಗೆ ಅನೇಕ ಕತೆಗಳನ್ನು ಕೇಳಿದ್ದರೂ ನನಗೆ ಈ ವಿಷಯದಲ್ಲಿ ಇನ್ನೂ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇರುವುದರಿಂದ ಪ್ರಸ್ತುತ ಇದನ್ನು ಹೇಳುವ ಸ್ಥಿತಿಯಲ್ಲಿ ಇಲ್ಲ. ಈ ರಾಜ್ಯ ‘ಬೈಬಲ್ ಬೆಲ್ಟ್’ ಎಂದು ಅನಧಿಕೃವಾಗಿ ಕರೆಯಲ್ಪಡುವ ವಲಯದಲ್ಲಿ ಬರುತ್ತದೆ. ಹೆಚ್ಚಾಗಿ ಸಂಪ್ರದಾಯಸ್ತ ಇವಾಂಜುವೆಲಿಸ್ಟ್ ಕ್ರೈಸ್ತರು ವಾಸಿಸುವ ಪ್ರದೇಶ. ಈ ವಲಯದಲ್ಲಿ ಇನ್ನೂ ಹತ್ತಾರು ರಾಜ್ಯಗಳಿವೆ ಅಲಬಾಮಾ, ಟೆಕ್ಸಸ್, ಅರ್ಕನ್ಸಾ ಇತ್ಯಾದಿಗಳ ಸೇರಿಸಿ. ಇರಲಿ ಜಾಸ್ತಿ ವಿಷಯಾಂತರ ಬೇಡ. ಹಿಂದೆ ಹೇಳಿದ ಅರ್ಕನ್ಸಾದಂತೆ ಈ ರಾಜ್ಯ ಕೂಡ ಬೇಕಾದ ವಿಷಯಗಳಲ್ಲಿ ಕೆಳಗಿನ ಸ್ಥಾನಗಳಲ್ಲೇ ಬರುತ್ತದೆ. ಅಂದರೆ ಶಿಕ್ಷಣ, ಆರೋಗ್ಯ, ಅಪರಾಧ ಪ್ರಕರಣಗಳು, ಮಾನವ ಅಭಿವೃದ್ಧಿ ಸೂಚ್ಯಂಕ ಎಲ್ಲದರಲ್ಲೂ ಕೆಳಗೇ.

ಅನೇಕ ಭಾರತೀಯರು 90ರ ದಶಕದಲ್ಲಿ ಓಕ್ಲಹೋಮಾ ಬಾಂಬ್ ಸ್ಫೋಟದ ಸಂದರ್ಭದಲ್ಲಿ ಈ ರಾಜ್ಯದ ಬಗ್ಗೆ ಕೇಳಿದ್ದರೂ ಉಳಿದಂತೆ ಕೇಳಿರುವುದು ಬಹಳ ಕಡಿಮೆ. ನನಗೆ ಚಿಕ್ಕವನಾಗಿದ್ದಾಗಿಂದಲೂ ಗಂಟೆಗಟ್ಟಲೆ ಅಟ್ಲಾಸು ನೋಡುತ್ತಾ ಕನಸು ಕಾಣುವ ಚಟವಿದ್ದರೂ ಈ ರಾಜ್ಯದ ಹೆಸರನ್ನು ಸರಿಯಾಗಿ ಕೇಳಿದ್ದು ಪಕ್ಕದ ಟೆಕ್ಸಸ್ಸಿಗೆ ಬಂದಾಗಲೇ. ಹಾಂ, ಇತ್ತೀಚೆಗೆ ತೈಲ ಬೆಲೆಯ ವಿಷಯದ ಚರ್ಚೆ ಮುನ್ನೆಲೆಗೆ ಬಂದ ಸಂದರ್ಭದಲ್ಲಿ ಇಲ್ಲಿರುವ ಪೆಟ್ರೋಲಿಯಂ ಸಂಗ್ರಹಾಲಯಗಳ ಬಗ್ಗೆ ನಿಮ್ಮಲ್ಲನೇಕರು ಓದಿರಬಹುದು (ಓಕ್ಲಹೋಮಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಬಹುದೊಡ್ಡ ಉತ್ಪಾದಕ ರಾಜ್ಯ).

ಈ ರಾಜ್ಯದ ಬಗ್ಗೆ ಬಹಳ ಹೇಳುವಂತದ್ದೇನೂ ಇಲ್ಲ. ಕಲಾಸಕ್ತರು, ಬುಡಕಟ್ಟು ಜನಾಂಗಗಳ ಬಗ್ಗೆ ಅಧ್ಯಯನ ಮಾಡುವವರಿಗೆ ಒಳ್ಳೆಯ ವಸ್ತುಗಳು ಸಿಗುತ್ತವೆ. ಬಿಟ್ಟರೆ ಕ್ರೈಸ್ತ ಧಾರ್ಮಿಕ ಅಧ್ಯಯನಕ್ಕೆ ಕೆಲ ಜನ ಬರ್ತಾರೆ. ಮತ್ತೊಂದು ವಿಷಯಕ್ಕೆ ಬರ್ತಾರೆ. ಡಾಲಸ್ ಫೋರ್ಟ್ವರ್ತ್ ಮಹಾನಗರಿಯಿಂದ ಓಕ್ಲಹೋಮಾದ ಗಡಿ ಸುಮಾರು ಒಂದು ಒಂದೂಕಾಲು ಗಂಟೆಯ ಹಾದಿ. ಟೆಕ್ಸಸ್ ರಾಜ್ಯದಲ್ಲಿ ಜೂಜಿಗೆ ನಿಷೇಧವಿದೆ. ಆದರೆ ಪಕ್ಕದ ಈ ರಾಜ್ಯದಲ್ಲಿ ಇಲ್ಲ. ಅದಕ್ಕೆ ವಾರಾಂತ್ಯ ಬರ್ತಾ ಇದ್ದಂತೆ ಸಹಸ್ರ ಸಂಖ್ಯೆಯಲ್ಲಿ ಜೂಜು ಪ್ರಿಯರು ಈ ರಾಜ್ಯದೆಡೆಗೆ ಲಗ್ಗೆ ಇಡ್ತಾರೆ. ಅದಕ್ಕೆ ಸರಿಯಾಗಿ ರಾಜ್ಯದ ಗಡಿ ದಾಟಿದಾಕ್ಷಣವೇ ಜೂಜಿನ ಅಡ್ಡೆಗಳಿವೆ.

ಈ ರಾಜ್ಯದ ಬಗ್ಗೆ ಓದುತ್ತಿರಬೇಕಾದರೆ ಒಂದು ಅಂಶ ನನ್ನ ಗಮನ ಸೆಳೆದಿತ್ತು. ಈ ರಾಜ್ಯದ ವಿಚಿತ್ರವಾದ ನಕ್ಷೆ. ಅಂದರೆ ರಾಜ್ಯದ ಮುಖ್ಯ ಭಾಗಕ್ಕೆ ತಾಗಿಕೊಂಡೇ ಇರುವ ಚಿಕ್ಕ ಪಟ್ಟಿಯಂತಹಾ ಭಾಗ. ಅದು ರಾಜ್ಯಕ್ಕೆ ಒಂಥರಾ ಹಿಡಿಕೆಯಿರುವ ಪಾತ್ರೆಯ ಆಕಾರ ಕೊಡುತ್ತದೆ. ಅದಕ್ಕೇ ಆ ಭಾಗವನ್ನ ಕಾವಲಿ ಹಿಡಿಕೆ ಅಥವಾ ಪ್ಯಾನ್ ಹ್ಯಾಂಡಲ್ ಅಂತ ಕರೀತಾರೆ. ಹೆಚ್ಚುಕಮ್ಮಿ ಇದೇ ತರಹದ ರಚನೆಯನ್ನ ನೀವು ಅಫ್ಘಾನಿಸ್ತಾನದ ನಕ್ಷೆಯಲ್ಲೂ ನೋಡಬಹುದು. ಎರಡರ ಬಗ್ಗೆಯೂ ಸ್ವಲ್ಪ ಹುಡುಕಿ ನೋಡಿ. ಬಹಳ ಆಸಕ್ತಿಕರವಾದ ಕೆಲ ಅಂಶಗಳು ಸಿಗುತ್ತವೆ. ಮತ್ತು ಈ ಎರಡೂ ಪಟ್ಟಿಗಳ ಹಿಂದಿನ ಕಾರಣಗಳ ನಡುವೆ ಕೆಲ ಸಾಮ್ಯತೆಗಳಿವೆ. ಅದೇ ರೀತಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಚಿಕ್ಕ ಭಾಗ ಕೊಲ್ಲಾಪುರ ಮತ್ತು ಸತಾರಾ ಜಿಲ್ಲೆಗಳ ಬೇರ್ಪಡಿಸುತ್ತದೆ. ಅದಕ್ಕೇನಾದರೂ ಕಾರಣಗಳಿವೆಯಾ ಅಂತ ಹುಡುಕಿದೆ, ಇನ್ನೂ ಸಿಕ್ಕಿಲ್ಲ.

ಇಲ್ಲಿರುವ ಭಾರತೀಯರ ಪ್ರಮಾಣವೂ ಕಮ್ಮಿಯೇ. ಎಲ್ಲೋ ಕೆಲ ವೈದ್ಯರು, ವ್ಯಾಪಾರಿಗಳು ಮತ್ತು ಗ್ಯಾಸ್ ಸ್ಟೇಶನ್ (ಪೆಟ್ರೋಲ್ ಬಂಕ್) ಇಟ್ಟ ಕೆಲ ಭಾರತೀಯರ ಕಾಣಬಹುದು.

Saakshatv yatrika episode 1

ಚಿಕ್ಕಪುಟ್ಟ ಗುಡ್ಡ ಬೆಟ್ಟಗಳಿಂದ ಕೂಡಿದ, ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತ ಸ್ವಲ್ಪವೇ ಚಿಕ್ಕದಾದ ಈ ರಾಜ್ಯದಲ್ಲಿ (ಜನಸಂಖ್ಯೆ ಮಾತ್ರ ಬರಿ 40 ಲಕ್ಷ) ಪ್ರವಾಸಿ ತಾಣಗಳು ಅಷ್ಟೇನೂ ಇಲ್ಲ. ಟೆಕ್ಸಸ್ಸಿನ ಗಡಿಯಲ್ಲಿರುವ 70-80 ಅಡಿ ಎತ್ತರದ ಜಲಪಾತವೊಂದು ಹಾಳೂರಿನಲ್ಲಿ ಉಳಿದವನೇ ಗೌಡ ಅನ್ನುವಂತೆ ಪ್ರವಾಸಿಗರ ಆಕರ್ಷಿಸುತ್ತದೆ. ನಾನು ಕೂಡ ಗೆಳೆಯರೊಟ್ಟಿಗೆ ಈ ರಾಜ್ಯಕ್ಕೆ ಭೇಟಿ ಕೊಟ್ಟಿದ್ದು ಅದಕ್ಕಾಗಿಯೇ. ಕೇವಲ ಒಂದೇ ದಿನದ ಭೇಟಿ (ಒಂದು ದಿನದ ಭೇಟಿ ಕೊಟ್ಟರೂ ಅಲ್ಲಿನ ಬಗೆಗಿನ ವಿವರ ಕೆದಕುವುದು ನನ್ನ ಆದ್ಯ ಕರ್ತವ್ಯವೆಂದು ನಾನು ಭಾವಿಸುತ್ತೇನೆ). ಮಲೆನಾಡಿಗನಾದ ನನಗೆ ಇದೊಂದು ಸಾಮಾನ್ಯ ಗುಂಡಿಯಂತೆ ಕಂಡರೂ, ಬಯಲು ಸೀಮೆ ಡಾಲ್ಲಸ್ಸಿನ ಜನರಿಗೆ ಮಾತ್ರ ಇದೊಂದು ದೊಡ್ಡ ಆಕರ್ಷಣೆಯಾಗಿದೆ. ಅಷ್ಟೇ !

ವಿ.ಸೂ:- ಚಿತ್ರದಲ್ಲಿ ಕಾಣ್ತಾ ಇರೋದು ಟರ್ನರ್ ಜಲಪಾತ. ನಗಬೇಡಿ, ಇದನ್ನೇ ನೋಡೋಕೆ ಸಾವಿರಾರು ಜನ ಬರೋದು. ಈ ಪಟವನ್ನು ತೆಗೆದಿದ್ದು ನನ್ನ ಗೆಳೆಯ ಪೃಥ್ವಿರಾಜ ಹೊಡಮನಿ.

ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ

–ಗಿರಿಧರ್ ಭಟ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಹಾಗೂ ಹವ್ಯಾಸಿ ಬರಹಗಾರ
ಸಿದ್ಧಾಪುರ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: #saakshatvAmerica TourSaakshatv yatrika episode 1
ShareTweetSendShare
Join us on:

Related Posts

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

by Shwetha
March 4, 2026
0

ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ (KPCC) ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರು ಆ ಹುದ್ದೆಯಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ...

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

by Shwetha
March 4, 2026
0

ಇರಾನ್–ಇಸ್ರೇಲ್ ನಡುವಿನ ಸಂಘರ್ಷ ಜಾಗತಿಕ ವ್ಯಾಪಾರಕ್ಕೆ ಧಕ್ಕೆಯೊಡ್ಡುತ್ತಿರುವ ಹಿನ್ನೆಲೆ, ಅದರ ಪರಿಣಾಮ ಬೆಂಗಳೂರಿನ ಮಾರುಕಟ್ಟೆಯ ಮೇಲೂ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯ ವ್ಯಾಪಾರಿಗಳು ಹೇಳುತ್ತಿದ್ದಾರೆ. ವಿಶೇಷವಾಗಿ...

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

by Shwetha
March 4, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ರಣರೋಚಕ ಚರ್ಚೆ ಶುರುವಾಗಿದೆ. ರಾಜ್ಯ ಬಜೆಟ್ ಮಂಡನೆ ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿರುವ ಪತ್ರಿಕಾ ಪ್ರಕಟಣೆ...

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

by Shwetha
March 4, 2026
0

ರಾಜ್ಯವನ್ನೇ ಬೆಚ್ಚಿಬೀಳಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. ಇದೀಗ ಹೈ ಪ್ರೊಫೈಲ್ ಆರೋಪಿ ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ವಿರುದ್ಧದ ತನಿಖೆಯಲ್ಲಿ ಪೊಲೀಸರು...

ಮಧ್ಯಪ್ರಾಚ್ಯ ಸಂಘರ್ಷ: ಭಾರತ ನೈತಿಕವಾಗಿ ಸ್ಪಷ್ಟ ನಿಲುವು ತಾಳಬೇಕು – ರಾಹುಲ್ ಗಾಂಧಿ

ಮಧ್ಯಪ್ರಾಚ್ಯ ಸಂಘರ್ಷ: ಭಾರತ ನೈತಿಕವಾಗಿ ಸ್ಪಷ್ಟ ನಿಲುವು ತಾಳಬೇಕು – ರಾಹುಲ್ ಗಾಂಧಿ

by Shwetha
March 4, 2026
0

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ಭಾರತವು ಈ ವಿಚಾರದಲ್ಲಿ ನೈತಿಕವಾಗಿ ಸ್ಪಷ್ಟ ನಿಲುವು ತಾಳಬೇಕು ಎಂದು ಹೇಳಿದ್ದಾರೆ. ಇರಾನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram