ಅಮೆರಿಕಾ ವಿರುದ್ಧ ಬೇಹುಗಾರಿಕೆಯ ಅಪಪ್ರಚಾರ : ಚೀನಾಗೆ ತಕ್ಕ ಪಾಠ ಕಲಿಸಿದ ವಿಶ್ವದ ದೊಡ್ಡಣ್ಣ..!
ಅಮೆರಿಕಾ: ಅಮೆರಿಕಾ ತನ್ನ ಆರ್ಥಿಕ ಹಾಗೂ ಕೈಗಾರಿಕೆ ಕ್ಷೇತ್ರಗಳಿಗೆ ಸಂಬಂಧಿಸಿ ಬೇಹುಗಾರಿಕೆ ಮಾಡುತ್ತಿದೆ ಎಂದು ಚೀನಾ ಆರೋಪ ಮಾಡಿ ಅಪಪ್ರಚಾರ ಮಾಡ್ತಿದೆ. ಇದೀಗ ಚೀನಾ ಆರೋಪದ ವಿರುದ್ಧ ಸಿಡಿದೆದ್ದಿರುವ ವಿಶ್ವದ ದೊಡ್ಡಣ್ಣ ಚೀನಾಗೆ ದೊಡ್ಡ ಪೆಟ್ಟು ನೀಡಿದೆ. ಚೀನಾ ನಾಗರಿಕರಿಗೆ 10 ವರ್ಷಗಳ ಕಾಲ ಮಾನ್ಯತೆ ಹೊಂದಿರುವ ವೀಸಾ ನೀಡುವುದನ್ನು ನಿಷೇಧಿಸುವ ಮಸೂದೆ ಸೆನೆಟ್ ನಲ್ಲಿ ಮಂಡನೆಯಾಗಿದೆ. ಈ ಮೂಲಕ ಚೀನಾಗೆ ತಕ್ಕ ಉತ್ತರವನ್ನೇ ನೀಡಿದೆ ಅಮೆರಿಕಾ.
ಪ್ಯಾರೇ ದೇಶ ವಾಸಿಯೋ…! ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ..!
ಇನ್ನೂ ಅಮೆರಿಕ ಬೇಹುಗಾರಿಕೆ ನಡೆಸುತ್ತಿದೆ ಎಂದು ಚೀನಾ ಮಾಡುತ್ತಿರುವ ಅಪಪ್ರಚಾರವನ್ನು ನಿಲ್ಲಿಸಬೇಕು. ಅಷ್ಟೇ ಅಲ್ಲ ತೈವಾನ್ ಕುರಿತಂತೆ ತನ್ನ ಚೀನಾ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕಿದೆ. ಬಳಿಕ ಅದನ್ನ ವಿದೇಶಾಂಗ ಸಚಿವಾಲಯವು ದೃಢೀಕರಿಸಬೇಕು. ಅಲ್ಲಿಯವರೆಗೂ ವೀಸಾದ ಮೇಲಿನ ಈ ನಿಷೇಧ ಜಾರಿತಯಲ್ಲಿರಲಿದೆ ಎಂದು ತಿಳಿದುಬಂದಿದೆ.