ರಾಮ್ ಚರಣ್ – ಶಂಕರ್ ಸಿನಿಮಾದಲ್ಲಿ ನಾಯಕಿ ಈ ಕೊರಿಯಾದ ಕ್ಯೂಟ್ ಬ್ಯೂಟಿ..!

1 min read

ರಾಮ್ ಚರಣ್ – ಶಂಕರ್ ಸಿನಿಮಾದಲ್ಲಿ ನಾಯಕಿ ಈ ಕೊರಿಯಾದ ಕ್ಯೂಟ್ ಬ್ಯೂಟಿ..!

ಭಾರತ ಸಿನಿಮಾರಂಗದ ಖ್ಯಾತ  ನಿರ್ದೇಶಕ ಶಂಕರ್ ಅವರ ಹೊಸ ಸಿನಿಮಾದಲ್ಲಿ ರಾಮ್ ಚರಣ್ ನಾಯಕನಾಗಿ ನಟಿಸುತ್ತಿದ್ದು, ಅಧಿಕೃತವಾಗಿ ಅನೌನ್ಸ್ ಆಗಿದೆ. ಈ ಸಿನಿಮಾದಲ್ಲಿ ಭಾರತದ ಮತ್ತೊಬ್ಬ ಬಿಗ್ ಸ್ಟಾರ್ ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ತಿದ್ದಾರೆ.

ಈ ಸಿನಿಮಾ ಅದ್ಧೂರಿಯಾಗಿ ನಿರ್ಮಾಣಗೊಳ್ತಿದ್ದು, ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡ್ತಿದೆ. ಇದರ ಬೆನ್ನಲ್ಲೇ ಮತ್ತೊಂದು ಕುತೂಹಲಕಾರಿ ವಿಚಾರ ಬಹಿರಂಗವಾಗಿದೆ. ಅದೇನೆಂದ್ರೆ ಈ ಸಿನಿಮಾದಲ್ಲಿ ದಕ್ಷಿಣ ಕೊರೊಯಾದ ಕ್ಯೂಟ್ ಬೆಡಗಿ ನಾಯಕಿಯಾಗಲಿದ್ದಾರಂತೆ.

ತೆಲುಗು ರಾಜ್ಯಗಳಲ್ಲಿ ಯಶ್ ಅಬ್ಬರ : 7 ವರ್ಷಗಳ ಹಳೆಯ ಸಿನಿಮಾ ತೆಲುಗಿನಲ್ಲಿ ರಿಲೀಸ್..!

ಹೌದು.. ದಕ್ಷಿಣ ಕೊರಿಯಾದ ನಟಿ ಸುಜಿ ಬೀ ರಾಮ್ ಚರಣ್ ತೇಜ ಜೊತೆ ಈ ಸಿನಿಮಾದಲ್ಲಿ ರೊಮ್ಯಾನ್ಸ್ ಮಾಡಲಿದ್ದು, ಇದು ಆಕೆಗೆ ಮೊದಲ ವಿದೇಶಿ ಸಿನಿಮಾವಾಗಿದೆ. ನೋಡೋಕೆ ಸಿಕ್ಕಾಪಟ್ಟೆ ಕ್ಯೂಟ್ ಆಗಿರುವ ಕೊರಿಯಾದ ಈ ಸುಂದರಿ ಸಿನಿಪ್ರೇಕ್ಷಕರ ಹೃದಯಕದಿಯಲಿದ್ದಾರೆ. ಅಂದ್ಹಾಗೆ ಸುಜಿ ಈಗಾಗಲೇ ಕೊರಿಯಾದಲ್ಲಿ 4 ಕ್ಕೂ ಹೆಚ್ಚು ಸಿನಿಮಾಗಳು ಡ್ರಾಮಾಗಳು ಹಾಗೂ ಸಾಕಷ್ಟು ಟಿವಿ ಶೋಗಳಲ್ಲಿ ಭಾಗಿಯಾಗಿ ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.

ರೇಸ್.. ಅಡ್ವೆಂಚರ್.. ಆಕ್ಷನ್.. ಥ್ರಿಲ್ಲರ್ `ಮಡ್ಡಿ’ ಟೀಸರ್ ಸೂಪರ್..!

ಸದ್ಯ ರಾಮ್ ಚರಣ್ ರಾಜಮೌಳಿ ಸಾರಥ್ಯದ RRR ಸಿನಿಮಾ ಹಾಗೂ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಬೆನ್ನಲ್ಲೇ ಅವರ 15ನೇ ಸಿನಿಮಾ ಘೋಷಣೆಯಾಗಿದ್ದು, ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇನ್ನೂ ಇಂಡಿಯನ್, ರೋಬೋ, ಐ, ಅನ್ನಿಯನ್, ನನ್ಬನ್ ಹೀಗೆ ಹಿಟ್ ಸಿನಿಮಾಗಳನ್ನ ನೀಡಿರುವ ಶಂಕರ್ ನಿರ್ದೇಶನದ 50 ನೇ ಸಿನಿಮಾ ಇದಾಗಿದೆ.

ಮುಂಬೈನಲ್ಲಿ ಲಕ್ಷ್ಯೂರಿಯಸ್ ಫ್ಲಾಟ್ ಖರೀದಿಸಿದ್ದಾರಂತೆ ‘ಕಿರಿಕ್ ರಾಣಿ’…!

`ಪೊಗರು’ ಸಿನಿಮಾ ನೋಡಿ `ಇದೊಂದು ಮೈಲಿಗಲ್ಲು’ ಎಂದ ಪ್ರಶಾಂತ್ ನೀಲ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd