ತೆಲುಗು ರಾಜ್ಯಗಳಲ್ಲಿ ಯಶ್ ಅಬ್ಬರ : 7 ವರ್ಷಗಳ ಹಳೆಯ ಸಿನಿಮಾ ತೆಲುಗಿನಲ್ಲಿ ರಿಲೀಸ್..!
KGF ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಅವರ ಖದರ್ ಎಕ್ಸ್ಟ್ರೀಮ್ ಲೆವೆಲ್ ಹೋಗಿದೆ. ಯಶ್ ಸದ್ಯ ಭಾರತದ ಬಿಗ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಯಶ್ ಕ್ರೇಜ್ ಪರ ಭಾಷಿಗರನ್ನೂ ಮೋಡಿ ಮಾಡಿದೆ. ಇನ್ನೂ KGF 2 ಗಾಗಿ ಭಾರತ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಕಾಯುತ್ತಿದೆ. ಯಶ್ ಗೆ ತಮಿಳು, ತೆಲುಗು, ಹಿಂದಿ, ಮಳಯಾಳಂನಲ್ಲೂ ಅಭಿಮಾನಿಗಳ ಬಳವಗಿದೆ. ಈ ನಡುವೆ 7ವರ್ಷಗಳ ಹಿಂದೆ ಕನ್ನಡದಲ್ಲಿ ರಿಲೀಸ್ ಆಗಿದ್ದ ಸಿನಿಮಾವೊಂದು ಇದೀಗ ತೆಲುಗಿನಲ್ಲಿ ಡಬ್ ಆಗಿ ರಿಲೀಸ್ ಗೆ ರೆಡಿಯಾಗಿದೆ.
ಹೌದು ಅಂದ್ಹಾಗೆ ಕನ್ನಡ ಅಥವ ತೆಲುಗು , ತಮಿಳಿನ ಅಭಿಮಾನಿಗಳು ಅತಿ ಹೆಚ್ಚು ಇಷ್ಟಪಡುವುದು ಮಾಸ್ ಸಿನಿಮಾಗಳನ್ನೇ. ಹೀಗಾಗಿ ಮಾಸ್ ನಟ ಯಶ್ ಸಿನಿಮಾಗಳಿಗೆ ಇದೀಗ ಆಂಧ್ರೆ ತೆಲಂಗಾಣದಲ್ಲಿ ಭಾರೀ ಡಿಮ್ಯಾಂಡ್ ಬಂದಿದೆ. ಇದೇ ಕಾರಣಕ್ಕೆ ಈಗ ಯಶ್ ಹಳೆಯ ಸಿನಿಮಾಗಳನ್ನು ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.
ರೇಸ್.. ಅಡ್ವೆಂಚರ್.. ಆಕ್ಷನ್.. ಥ್ರಿಲ್ಲರ್ `ಮಡ್ಡಿ’ ಟೀಸರ್ ಸೂಪರ್..!
ಅಂದ್ಹಾಗೆ ಆ ಸಿನಿಮಾ ಯಾವುದು..?
ಗಜಕೇಸರಿ… ಹೌದು 2014 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಗಜಕೇಸರಿ ಸಿನಿಮಾ ಇದೀಗ ತೆಲುಗಿಗೆ ಡಬ್ ಆಗಿ ಬಿಡುಗಡೆಯಾಗುತ್ತಿದ್ದು, ತೆಲುಗು ಅಭಿಮಾನಿಗಳನ್ನ ಭರಪೂರ ರಂಜಿಸಲಿದೆ. ಇನ್ನೂ ಈಗಾಗಲೇ ಗಜಕೇಸರಿ ಸಿನಿಮಾದ ತೆಲುಗು ಟೀಸರ್ ಕೂಡ ರಿಲೀಸ್ ಆಗಿ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಅಷ್ಟೇ ಅಲ್ಲ ವಿಶೇಷ ಅಂದ್ರೆ ಟೀಸರ್‌ನಲ್ಲಿ ‘ಆಫ್ಟರ್ ಕೆಜಿಎಫ್’ ಎಂದು ಸೇರಿಸಲಾಗಿದೆ. ಇನ್ನೂ ಇದೇ ಮಾರ್ಚ್ 5 ರಂದು ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಗಜಕೇಸರಿ ಕಾಸ್ಟ್ ಅಂಡ್ ಕ್ರೀವ್ ಬಗ್ಗೆ ಮಾತನಾಡೋದಾದ್ರೆ ಯಶ್ ಗೆ ಅಮೂಲ್ಯ ನಾಯಕಿಯಾಗಿದ್ದರು. ಸಿನಿಮಾಗೆ ಎಸ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದರೆ, ಜಯಣ್ಣ-ಬೋಗೇಂದ್ರ ಬಂಡವಾಳ ಹೂಡಿದ್ದರು.