ಮುಂಬೈನಲ್ಲಿ ಲಕ್ಷ್ಯೂರಿಯಸ್ ಫ್ಲಾಟ್ ಖರೀದಿಸಿದ್ದಾರಂತೆ ‘ಕಿರಿಕ್ ರಾಣಿ’…!

1 min read
Rashmika Mandanna

ಮುಂಬೈನಲ್ಲಿ ಲಕ್ಷ್ಯೂರಿಯಸ್ ಫ್ಲಾಟ್ ಖರೀದಿಸಿದ್ದಾರಂತೆ ‘ಕಿರಿಕ್ ರಾಣಿ’…!

ಟಾಲಿವುಡ್ ನಲ್ಲಿ ಬ್ಯುಸಿಯೆಸ್ಟ್ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣ ಸದ್ಯ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರೆ. ಇದೀಗ ಬಾಲಿವುಡ್ ನಲ್ಲಿ ತಮ್ಮ ಚೊಚ್ಚಲ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಈ ಬಾರಿ ಕಾಂಟ್ರವರ್ಸಿ ಬಿಟ್ಟು ಬೇರೆಯ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.

ಜೈಲಿಂದ ಬಂದ ಬಳಿಕ ಹೊಸ ಸಿನಿಮಾಗೆ ಒಪ್ಪಿದ ‘ತುಪ್ಪದ ಬೆಡಗಿ’ : ಯಾವುದು ಆ ಸಿನಿಮಾ..!  

ಹೌದು, ನಟಿ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಅದ್ದೂರಿಯಾಗಿರುವ ಫ್ಲಾಟ್ ಖರೀದಿಸಿದ್ದಾರೆ. ಈ ಫ್ಲಾಟ್ ಮುಂಬೈ ಉಪನಗರದಲ್ಲಿದೆ. ರಶ್ಮಿಕಾ ಅಭಿನಯಿಸುತ್ತಿರುವ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣ ಈಗಾಗಲೇ ಮುಂಬೈನಲ್ಲಿ ನಡೆಯುತ್ತಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸುಲಭವಾಗಲೆಂದು ರಶ್ಮಿಕಾ ಮುಂಬೈನಲ್ಲಿ ಫ್ಲಾಟ್ ಖರೀದಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತಂತೆ ರಶ್ಮಿಕಾ ಎಲ್ಲಿಯೂ ಇಲ್ಲಿಯವರೆಗೂ ಬಹಿರಂಗ ಪಡಿಸಿಲ್ಲ.
ಅಷ್ಟೇ ರಶ್ಮಿಕಾ ಈಗಾಗಲೇ ಮತ್ತೊಂದು ಬಾಲಿವುಡ್ ನ ಸಿನಿಮಾಗೂ ಸಹಿಹಾಕಿದ್ದಾರೆ ಎನ್ನಲಾಗ್ತಿದೆ. ಬಿಗ್ ಬಿ ಅಮಿತಾ ಬಚ್ಚನ್ ಜೊತೆ ಅಭಿನಯಿಸಲಿದ್ದಾರೆ. ಈ ಸಿನಿಮಾಕ್ಕೆ ಕ್ವೀನ್ ಸಿನಿಮಾದ ನಿರ್ದೇಶಕ ವಿಕಾಸ್ ಬಹ್ಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ತಂದೆ ಮಗಳ ಸಂಬಂಧವನ್ನು ಆಧಾರಿಸಿದ ಹಾಸ್ಯಮಯವಾದ ಕಥೆಯನ್ನು ಸಿನಿಮಾ ಹೊಂದಿದೆ ಎಂದು ಹೇಳಲಾಗುತ್ತಿದೆ.

ಪ್ರಿಯಾಂಕಾ ಫ್ಯಾಷನ್ ಶೈಲಿಗೆ ದಂಗಾದ ನೆಟ್ಟಿಗರು : ಟ್ರೋಲ್ ಗಳಲ್ಲಿ ‘ಪಿಂಕಿ’ ಮಿಂಚಿಂಗ್..!

ಇತ್ತೀಚೆಗಷ್ಟೇ ಕನ್ನಡದಲ್ಲಿ ನಟ ಧ್ರುವ ಸರ್ಜಾ ಜೊತೆ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದ ಪೊಗರು ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.ಟಾಲಿವುಡ್ನಲ್ಲಿ ರಶ್ಮಿಕಾ ಮಂದಣ್ಣ ನಟ ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾ ತೆಲಗು, ತಮಿಳು, ಮಲೆಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಗೊಳ್ಳಲಿದೆ.

‘ಕಿರಿಕ್ ರಾಣಿ’ ರಶ್ಮಿಕಾಗೆ ‘ಕನ್ನಡತಿ’ ಕೃತಿ ಶೆಟ್ಟಿ ಸವಾಲ್…!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd