‘ಕಿರಿಕ್ ರಾಣಿ’ ರಶ್ಮಿಕಾಗೆ ‘ಕನ್ನಡತಿ’ ಕೃತಿ ಶೆಟ್ಟಿ ಸವಾಲ್…!

1 min read

‘ಕಿರಿಕ್ ರಾಣಿ’ ರಶ್ಮಿಕಾಗೆ ‘ಕನ್ನಡತಿ’ ಕೃತಿ ಶೆಟ್ಟಿ ಸವಾಲ್…!

ಬಹುತೇಕ ಕನ್ನಡದ  ಬೆಡಗಿಯರು ಟಾಲಿವುಡ್, ಬಾಲಿವುಡ್, ಮಾಲಿವುಡ್ , ಕಾಲಿವುಡ್ ಹೀಗೆ ಎಲ್ಲಾ  ಭಾಷೆಗಳಲ್ಲಿ ಸೂಪರ್ ಹಿಟ್ ಆಗಿದ್ದಾರೆ. ಟಾಪ್ ನಟಿಯರಾಗಿ ಇಂಡಸ್ಟರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಆ ಸಾಲಿಗೆ ದೀಪಿಕಾ ಪಡುಕೋಣೆ, ಶಿಲ್ಪಾ ಶೆಟ್ಟಿ, ಐಶ್ವರ್ಯಾ , ಅನುಷ್ಕಾ ಶೆಟ್ಟಿ ಹೀಗೆ ಅನೇಕ ಟಾಪ್ ನಟಿಯರಿದ್ದಾರೆ. ಇನ್ನೂ ಇತ್ತೀಚೆಗೆ ಆ ಸಾಲಿಗೆ ಕನ್ನಡದ ಮತ್ತಷ್ಟು ನಟಿಯರು ಸೇರ್ಪಯಾಗ್ತಿದ್ದಾರೆ.

ಕನ್ನಡದ ಪೂಜಾ ಹೆಗ್ಡೆ, ಗೂಗ್ಲಿ ನಟಿ ಕೃತಿ ಕರಬಂಧಾ, ವಜ್ರಕಾಯ ಬೆಡಗಿ ನಭಾ ನಟೇಶ್, ಕಿರಿಕ್ ಪಾರ್ಟಿಯ ರಶ್ಮಿಕಾ ಸಹ ಟಾಲಿವುಡ್ ನಲ್ಲಿ ಕಮಾಲ್ ಮಾಡಿ ತಮಿಳು ಹಿಂದಿ ಭಾಷೆಗಳಲ್ಲಿಯೂ ಮಿಂಚಲು ರೆಡಿಯಾಗಿದ್ದಾರೆ.  ಈಗ 17 ವರ್ಷದ ಕ್ಯೂಟ್ ನಟಿ ನಮ್ಮ ಕನ್ನಡತಿ ಕೃತಿ ಶೆಟ್ಟಿ ಟಾಪ್ ನಟಿಯರಿಗೆ ಟಕ್ಕರ್ ಕೊಡೋಕೆ ಸಜ್ಜಾಗಿದ್ದಾರೆ.

ಹೌದು ಮೊದಲ ಸಿನಿಮಾದಲ್ಲಿ  ಟಾಲಿವುಡ್ ನಲ್ಲಿ ಮಿಂಚು ಹರಿಸಿರುವ ನಟಿ ಕೃತಿ ಉಪ್ಪೆನ ಸಿನಿಮಾ ಮೂಲಕ ಜನರಿಗೆ ಪರಿಚಯವಾಗಿದ್ದಾರೆ. ಕ್ಯೂಟ್ ಲುಕ್ಸ್ ಸ್ವೀಟ್ ಸ್ಮೈಲ್ ನಿಂದ ಯುವಕರ ಹಾರ್ಟ್ ಗೆ ಕೊಳ್ಳಿ ಇಟ್ಟಿದ್ದಾರೆ. ಇವರ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಯಾರು ಈಕೆ ಎಂದು ನೆಟ್ಟಿಗರು ಹುಡುಕಾಟ ನಡೆಸಿರೋದು ಒಂದ್ ಕಡೆಯಾದ್ರೆ, ಒಂದೇ ಸಿನಿಮಾದಿಂದ ಈಕೆ ಇದೀಗ ದೇಶಾದ್ಯಂತ ಫೇಮಸ್ ಆಗಿದ್ದು, ಪ್ರೇಕ್ಷರ ಗಮನ ಸೆಳೆಯುತ್ತಿದ್ದಾರೆ. ಅಷ್ಟೇ ಅಲ್ಲ ನ್ಯಾಷನಲ್ ಕ್ರಷ್ ಬಿರುದನ್ನ ರಶ್ಮಿಕಾ ಮಂದಣ್ಣ ಅವರಿಂದ ಕಸಿದಿರುವ ಉಪ್ಪೆನ ಸುಂದರಿ ಈಗ ಹೊಸ ನ್ಯಾಷನಲ್ ಕ್ರಷ್ ಆಗಿಬಿಟ್ಟಿದ್ದಾರೆ.  ಇನ್ನೂ ಉಪ್ಪೆನ ಸಿನಿಮಾ ಸೂಪರ್ ಹಿಟ್ ಆಗಿ ಹೌಸ್ ಫುಲ್ ಓಡುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದ್ದು, ಕೃತಿ ನಟನೆಗೆ ಚಿರಂಜೀವಿ, ರಾಮ್ ಚರಣ್ ಮಹೇಶ್ ಬಾಬು ಇನ್ನೂ ಹಲವರು ಮೆಚ್ಚುಗೆ ವ್ಯಕ್ತಪಡಿಡಸಿದ್ದಾರೆ.

ಇದೀಗ  ಈ ಬೆಡಗಿಗೆ ಸಾಲು ಸಾಲು ಆಫರ್ ಗಳು ಹುಡುಕಿಕೊಂಡು ಬರುತ್ತಿವೆಯಂತೆ.

ಜೈಲಿಂದ ಬಂದ ಬಳಿಕ ಹೊಸ ಸಿನಿಮಾಗೆ ಒಪ್ಪಿದ ‘ತುಪ್ಪದ ಬೆಡಗಿ’ : ಯಾವುದು ಆ ಸಿನಿಮಾ..!  

ಆದ್ರೆ ಕನ್ನಡದಲ್ಲಿ ಅದ್ರಲ್ಲೂ ತಮ್ಮ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಮೂಲಕ ನ್ಯಾಷನಲ್ ಕ್ರಷ್ ಎಂದು ಕರೆಸಿಕೊಂಡಿದ್ದ ರಶ್ಮಿಕಾ  ಸಾಲು ಸಾಲು ಸಿನಿಮಾಗಳನ್ನ ಮಾಡಿದ್ದಾರೆ. ಬಿಗ್ ಸ್ಟಾರ್ ಗಳ  ಜೊತೆ  ತೆರೆಹಂಚಿಕೊಂಡಿದ್ದು, ಇನ್ನೂ ಹಲವು ಪ್ರಾಜೆಕ್ಟ್ ಗಳು ಅವರ ಕೈಲಿವೆ. ಆದ್ರೆ ನೇಮ್ ಫೇಮ್ ಗಿಂತ ಹೆಚ್ಚು ಸದಾ ಟ್ರೋಲ್ ನಿಂದಲೇ, ಕಾಂಟ್ರವರ್ಸಿಗಳಿಂದಲೇ ಫೇಮಸ್ ಆದ ರಶ್ಮಿಕಾ ಕಂಡ್ರೆ ಕನ್ನಡಿಗರು ಉರಿದುರಿದು ಬೀಳ್ತಾರೆ. ಕಾರಣ ಈಕೆಗೆ ಕನ್ನಡದ ಮೇಲಿರುವ ತಾತ್ಸಾರ. ಬೇರೆ ಬಾಷೆಗಳ ಮೇಲೆ ಇರುವ ಪ್ರೀತಿಯನ್ನೂ ತಮ್ಮ ಭಾಷೆಯ ಮೇಲೆ ತೋರದೇ ಇರುವುದು. ಆದ್ರೂ ಬೇರೆ ಭಾಷೆಗಳು ಅದ್ರಲ್ಲೂ ತೆಲುಗಿನಲ್ಲಿ ರಶ್ಮಿಕಾ ಹವಾ ಸ್ವಲ್ಪ ಜೋರಾಗಿಯೇ ಇದೆ. ಆದ್ರೆ ಈಕೆಯ ಸಿನಿಮಾಗಳು ಹಿಟ್ ಆಗುವುದು ರಶ್ಮಿಕಾ ಇರುವ ಕಾರಣಕಲ್ಲ ಆಕೆ ಮಾಡುವ ಸಿನಿಮಾಗಳ ಹಿರೋ ಬಿಗ್ ಸ್ಟಾರ್ ಗಳು. ಅದರಿಂದ ಆಕೆಯ ಫೇಮ್ ಹೆಚ್ಚಾಗ್ತಿದೆ ಅಷ್ಟೇ ಅನ್ನೋದು  ನೆಟ್ಟಿಗರ ಲೆಕ್ಕಾಚಾರ.

ಆದ್ರೆ ಹೀಗೆ ಯಶಸ್ಸಿನ ಉತ್ತುಂಗದಲ್ಲಿ ಇರುವ ರಶ್ಮಿಕಾಗೆ ಟಕ್ಕರ್ ಕೊಡೋಕೆ ಕೃತಿ ಶೆಟ್ಟಿ ಸಜ್ಜಾಗ್ತಿದ್ದಾರೆ.

ಟಾಪ್ ನಟಿಯರ ಲಿಸ್ಟ್ ನಲ್ಲಿ ರಶ್ಮಿಕಾ ಮಂದಣ್ಣ , ಪೂಜಾ ಹೆಗ್ಡೆಯನ್ನ ಬದಿಗೊತ್ತಿ ಕೃತಿ ಅಗ್ರ ಸ್ಥಾನ ಪಡೆಯೋದ್ರಲ್ಲಿ ನೋ ಡೌಟ್. ಇದಕ್ಕೆ ಕಾರಣವೂ ಇದೆ. ಯಾವುದೇ ಸಿನಿ ಹಿನ್ನೆಲೆ ಇಲ್ಲದೇ ಮೊದಲ ಸಿನಿಮಾ ರಿಲೀಸ್ ಗೂ ಮುನ್ನ ಬೇರೆ ಬೇರೆ ಸಿನಿಮಾಗಳ ಸಾಲುಗಟ್ಟಲೇ ಆಫರ್ ಸಿಗೋದು ತುಂಬಾನೆ ರೇರ್ ಆದ್ರೆ ಕೃತಿಗೆ ಇಂತಹ ಅದೃಷ್ಟವಿದ್ದು, ಮೊದಲ ಸಿನಿಮಾ ರಿಲೀಸ್ ಗೂ ಮುನ್ನವೇ ಈಕೆಗೆ ಆಫರ್ ಗಳು ಹರಿದುಬಂದಿದೆಯಂತೆ. ಹೌದು  ಕೇವಲ 17 ವರ್ಷ ವಯಸ್ಸಿನ ಕೃತಿ ಶೆಟ್ಟಿಗೆ ಈಗ ಅವಕಾಶಗಳ ಮೇಲೆ ಅವಕಾಶಗಳು ಅರಸಿ ಬರುತ್ತಿವೆ. ಇದೀಗ ಶ್ಯಾಮ್ ಸಿಂಗ್ ರಾಯ್ ಸಿನಿಮಾದಲ್ಲಿ ಪಾತ್ರವೊಂದನ್ನು ಮಾಡುತ್ತಿದ್ದಾರೆ ಕೃತಿ. ಇದಾದ ಬಳಿಕ ಸುಧೀರ್ ಬಾಬು ನಾಯಕರಾಗಿರುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.     ಒಮ್ಮೆಲೆ ಸಂಭಾವನೆ ಏರಿಸಿಕೊಂಡಿರುವ ಕೃತಿ ಈಗ ಸಿನಿಮಾವೊಂದಕ್ಕೆ 85 ಲಕ್ಷ ಡಿಮಾಂಡ್ ಮಾಡುತ್ತಿದ್ದಾರಂತೆ. ಇದನ್ನೆಲ್ಲಾ ನೋಡ್ತಿದ್ರೆ ಮುಂದಿನ ದಿನಗಳಲ್ಲಿ ನ್ಯಾಷನಲ್ ಕ್ರಷ್ ರಶ್ಮಿಕಾ ಕೃತಿ ಶೆಟ್ಟಿ ಮುಂದೆ ಸೈಡ್ ಲೈನ್ ಆಗೋದ್ರಲ್ಲಿ ನೋ ಡೌಟ್. ನಮ್ಮ ಕರ್ನಾಟಕದ ಬೆಡಗಿ ತೆಲುಗಿನಲ್ಲಿ ಮಿಂಚು ಹರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕೃತಿ ಸಿಕ್ಕಾಪಟ್ಟೆ ಬ್ಯುಸಿಯಾಗಲಿದ್ದಾರೆ. ಮುಂದೆ ರಶ್ಮಿಕಾ, ಪೂಜಾ ಹೆಗ್ಡೆಗೆ ಕೃತಿ ಟಫ್ ಕಾಂಪಿನೇಷನ್ ನೀಡಲಿರೋದು 100% ಪಕ್ಕಾ.

ಅಭಿಮಾನಿಗಳ ಪರ ಕ್ಷಮೆಯಾಚಿಸಿದ ದರ್ಶನ್ : ಧನ್ಯವಾದ ಎಂದ ಜಗ್ಗೇಶ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd