ಟ್ರಂಪ್ ಸರ್ಕಾರದ ನೀತಿಗಳನ್ನ ರದ್ದುಪಡಿಸುತ್ತಿರುವ ಬೈಡೆನ್ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಅಮೆರಿಕ ಮರು ಸೇರ್ಪಡೆ..!
ಅಮೆರಿಕಾದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಟ್ರಂಪ್ ಸರ್ಕಾರದ ಹಲವು ನೀತಿಗಳನ್ನು ರದ್ದುಪಡಿಸಿದ್ದಾರೆ. ಹೌದು ಪ್ರಮುಖವಾಗಿ ಪ್ಯಾರಿಸ್ ಹವಾಮಾನ ಬದಲಾವಣೆಗೆ ಮರು ಸಹಿ ಹಾಕಿದ್ದು. ಈ ಕುರಿತು ಆಡಳಿತಾತ್ಮಕ ಆದೇಶವನ್ನು ಹೊರಡಿಸಿದ್ದಾರೆ. ನಿನ್ನೆ ಶ್ವೇತಭವನದಲ್ಲಿ ಈ ಕುರಿತು ಸಹಿ ಹಾಕಿದ ಜೊ ಬೈಡನ್, ಜಾಗತಿಕ ಹವಾಮಾನ ತಾಪಮಾನ ಏರಿಕೆಯನ್ನು ತಡೆಯಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಗಳು ನಡೆಸುತ್ತಿರುವ ಪ್ರಯತ್ನಗಳಿಗೆ ಅಮೆರಿಕದ ನೆರವು, ಸಹಕಾರವಿದೆ ಎಂದು ಘೋಷಿಸಿದರು. ಇನ್ನೂ ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನದ ಮಟ್ಟವನ್ನು 2 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಅಂದರೆ 1.5 ಡಿಗ್ರಿ ಸೆಲ್ಸಿಯಸ್ ವರೆಗೆ ಮಿತಿಗೊಳಿಸುವುದು, ಹಸಿರುಮನೆ ಅನಿಲ ಹೊರಹಾಕುವ ಗುರಿಯನ್ನು ತಲುಪುವುದು ಇದರ ಉದ್ದೇಶವಾಗಿದೆ.
ಮಾಜಿ ಸೈನಿಕರು ಸಾರ್ವಜನಿಕ ಸಮಾರಂಭಗಳಲ್ಲಿ ಬ್ಯಾಡ್ಜ್/ಪದಕಗಳನ್ನು ಧರಿಸುವಂತಿಲ್ಲ !
ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಜೊ ಬೈಡನ್ ನಂತರ ಟ್ವೀಟ್ ಮಾಡಿ, ಇಂದು ಮಧ್ಯಾಹ್ನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಕೋವಿಡ್-19 ಸಾಂಕ್ರಾಮಿಕವನ್ನು ನಿಯಂತ್ರಿಸುವುದು, ಆರ್ಥಿಕ ಪರಿಹಾರ ನೀಡುವುದು, ಹವಾಮಾನ ಬದಲಾವಣೆಯನ್ನು ನಿಭಾಯಿಸುವ, ಲಿಂಗ ಸಮಾನತೆ ತರುವ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ ಎಂದು ತಿಳಿಸಿದ್ದಾರೆ. ಕೀಸ್ಟೋನ್ ಎಕ್ಸ್ಎಲ್ ಪೈಪ್ಲೈನ್ ನಿರ್ಮಾಣವನ್ನು ನಿಲ್ಲಿಸುವ ಕಾರ್ಯಕಾರಿ ಆದೇಶಕ್ಕೆ ಸಹ ಅಧ್ಯಕ್ಷರು ಸಹಿ ಹಾಕಿದರು, ಇದು ಆಲ್ಬರ್ಟಾದಿಂದ ಟೆಕ್ಸಾಸ್ ಗಲ್ಫ್ ಕರಾವಳಿಗೆ ದಿನಕ್ಕೆ ಸುಮಾರು 800,000 ಬ್ಯಾರೆಲ್ ತೈಲವನ್ನು ಸಾಗಿಸುವ ಯೋಜನೆಯಾಗಿತ್ತು. ಇದು ಮೊಂಟಾನಾ, ದಕ್ಷಿಣ ಡಕೋಟಾ, ನೆಬ್ರಸ್ಕಾ, ಕಾನ್ಸಾಸ್ ಮತ್ತು ಒಕ್ಲಹೋಮ ಮೂಲಕ ಹಾದುಹೋಗುತ್ತದೆ.
ಅಷ್ಟೇ ಅಲ್ಲದೇ ಅಧಿಕಾರ ಸ್ವೀಕಾರ ಮಾಡಿದ ಕೆಲವೇ ಗಂಟೆಗಳಲ್ಲಿ ಬೈಡನ್ ಟ್ರಂಪ್ ಸರ್ಕಾರದ ಹಲವು ನೀತಿಗಳನ್ನ ರದ್ದು ಪಡಿಸಿದ್ದಾರೆ. ಅದ್ರಲ್ಲಿ ಮುಸ್ಲೀಮರ ಪ್ರಯಾಣ ನಿಷೇಧಗೊಳಿಸಿದ್ದ ಟ್ರಂಪ್ ಸರ್ಕಾರದ ನೀತಿಯೂ ಒಂದಾಗಿದೆ. ಈ ನೀತಿಯನ್ನೂ ಸಹ ತೆರವುಗೊಳಿಸಿದ್ದಾರೆ. ಜೊತೆಗೆ 17 ಪ್ರಮುಖ ಆದೇಶಗಳಿಗೆ ಬೈಡನ್ ಸಹಿ ಮಾಡಿದ್ದಾರೆ.
ಟ್ರಂಪ್ ಸರ್ಕಾರದ ‘ಮುಸ್ಲೀಮರ ಪ್ರಯಾಣ ನಿಷೇಧ ನೀತಿ’ ರದ್ದುಪಡಿಸಿದ ಬೈಡನ್..!
ಮಾಜಿ ಸೈನಿಕರು ಸಾರ್ವಜನಿಕ ಸಮಾರಂಭಗಳಲ್ಲಿ ಬ್ಯಾಡ್ಜ್/ಪದಕಗಳನ್ನು ಧರಿಸುವಂತಿಲ್ಲ !
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel