ಟ್ರಂಪ್ ಸರ್ಕಾರದ ‘ಮುಸ್ಲೀಮರ ಪ್ರಯಾಣ ನಿಷೇಧ ನೀತಿ’ ರದ್ದುಪಡಿಸಿದ ಬೈಡನ್..!
ಅಮೆರಿಕಾ : ಅಮೆರಿಕಾದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಟ್ರಂಪ್ ಸರ್ಕಾರದ ಹಲವು ನೀತಿಗಳನ್ನು ರದ್ದುಪಡಿಸಿದ್ದಾರೆ. ಹೌದು ಪ್ರಮುಖವಾಗಿ ಮುಸ್ಲೀಮರ ಪ್ರಯಾಣ ನಿಷೇಧಗೊಳಿಸಿದ್ದ ಟ್ರಂಪ್ ಸರ್ಕಾರದ ನೀತಿಯನ್ನ ತೆರವುಗೊಳಿಸಿದ್ದಾರೆ. ಜೊತೆಗೆ 17 ಪ್ರಮುಖ ಆದೇಶಗಳಿಗೆ ಬೈಡನ್ ಸಹಿ ಮಾಡಿದ್ದಾರೆ.
ಮುಸ್ಲೀಮರ ಪ್ರಯಾಣ ನಿರ್ಬಂಧ ನೀತಿಯಿಂದಾಗಿ ಮುಸ್ಲೀಮರು ಬಹುಸಂಖ್ಯಾತರಾಗಿರುವ ದೇಶಗಳ ಪ್ರಯಾಣಿಕರ ಅಮೆರಿಕ ಪ್ರಯಾಣವನ್ನು ನಿರ್ಬಂಧಿಸಲಾಗಿತ್ತು. ಇದೀಗ ಈ ನೀತಿಯಿಂದ ತೊಂದರೆ ಅನುಭವಿಸಿದ ಪ್ರದೇಶದವರಿಗೆ ವೀಸಾ ನೀಡುವ ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಲ್ಲದೇ ಅಕ್ರಮ ವಲಸಿಕರನ್ನು ಪತ್ತೆ ಮಾಡಿ ಗಡಿಪಾರು ಮಾಡುವ ಟ್ರಂಪ್ ಸರ್ಕಾರದ ಕ್ರಮಕ್ಕೆ ತಡೆಯೊಡ್ಡಿರುವ ಬೈಡನ್, ಮೆಕ್ಸಿಕೊ ಗಡಿಯುದ್ದಕ್ಕೂ ನಿರ್ಮಿಸಲು ಯೋಜಿಸಿದ್ದ ಗೋಡೆ ಕಾಮಗಾರಿಗೆ ತಕ್ಷಣದ ಮುಕ್ತಾಯ ಘೋಷಿಸಿದ್ದಾರೆ. ಪ್ಯಾರಿಸ್ ಒಪ್ಪಂದಕ್ಕೆ ಮರುಸೇರ್ಪಡೆ ಹಾಗೂ ವಲಸಿಗ ನಿರಾಶ್ರಿತರ ರಕ್ಷಣೆಗೂ ಕ್ರಮ ಕೈಗೊಂಡಿದ್ದಾರೆ.
ಇಂದು ದಿ. ಸುಶಾಂತ್ ಸಿಂಗ್ ಹುಟ್ಟುಹಬ್ಬ : ತಾರೆಯರಿಂದ ಬಾವನಾತ್ಮಕ ಸಂದೇಶ ರವಾನೆ..!
ಮಾಜಿ ಸೈನಿಕರು ಸಾರ್ವಜನಿಕ ಸಮಾರಂಭಗಳಲ್ಲಿ ಬ್ಯಾಡ್ಜ್/ಪದಕಗಳನ್ನು ಧರಿಸುವಂತಿಲ್ಲ !
60 ನಿಮಿಷಗಳಲ್ಲಿ ನಾನ್-ವೆಜ್ ಥಾಲಿ ತಿನ್ನಿ – ಹೊಚ್ಚ ಹೊಸ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ ಗೆಲ್ಲಿ !
ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ನೆನೆದು ಈ ದಿನದ ರಾಶಿ ಫಲಫಲಾ ತಿಳಿಯಿರಿ…!!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel