ಯಶ್ ಮುಂದೆ ಮಂಡಿಯೂರಿದ ಬಾಲಿವುಡ್ ಖಾನ್..!

1 min read

ಯಶ್ ಮುಂದೆ ಮಂಡಿಯೂರಿದ ಬಾಲಿವುಡ್ ಖಾನ್..!

ಇಡೀ ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಎದುರು ನೋಡ್ತಿರುವ ಚಿತ್ರ ಅಂದ್ರೆ ಅದು ಪ್ರಶಾಂತ್ ನೀಲ್  ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2.. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಭಾರತದಾದ್ಯಂತ ಅಷ್ಟೇ ಅಲ್ಲ ಬೇರೆ ದೇಶಗಳ  ಅಭಿಮಾನಿಗಳು ಕೂಡ ಕಾತರದಿಂದ ಕಾಯ್ತಾಯಿದ್ದಾರೆ.. ಈ ಸಿನಿಮಾ ಏಪ್ರಿಲ್  14ರಂದು ರಿಲೀಸ್ ಆಗಲಿದೆ..

ಆದ್ರೆ ಇದೇ “ಕೆಜಿಎಫ್ ಚಾಪ್ಟರ್ 2” ಸಿನಿಮಾ ಮುಂದೆ ಧೈರ್ಯ ಮಾಡಿ  ಹೋರಾಟಕ್ಕೆ ನಿಂತಿದೆ ಬಾಲಿವುಡ್ ನ ಸ್ಟಾರ್ ಖಾನ್ , ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಅವರ “ಲಾಲ್ ಸಿಂಗ್ ಚಡ್ಡಾ” ವೆಬ್ ಸೀರೀಸ್..

ಹೌದು ಲಾಲ್ ಸಿಂಗ್ ಚಡ್ಡಾ RRR , ಗಂಗೂಭಾಯಿ ಕಾಥೇಯವಾಡಿ, ಕಿಲಾಡಿಯಂತಹ ಪ್ಯಾನ್ ಇಂಡಿಯಾ ಬಿಗ್ ಬಜೆಟ್ ಸಿನಿಮಾಗಳಿಗೆ ಹೆದರಿ 2 -3 ಸಲ ರಿಲೀಸ್ ಡೇಟ್ ಮುಂದೂಡಿ ಕಡೆಗೆ ಬಂದು ಬಂದು ಕೆಜಿಎಫ್ 2 ರಿಲೀಸ್ ದಿನದಂದೇ ಸಿನಿಮಾ ರಿಲೀಸ್ ಮಾಡುವುದಕ್ಕೆ ಪ್ಲಾನ್ ಮಾಡಿದೆ..

ಆದ್ರೆ ಅಮೀರ್ ಖಾನ್ ಈ ಬಗ್ಗೆ ಇಡೀ ಕೆಜಿಎಫ್ ತಂಡಕ್ಕೆ ಸಂದರ್ಶನವೊಂದ್ರಲ್ಲಿ ಕ್ಷಮೆಯಾಚಿಸಿರೋದಾಗಿ ವರದಿಯಾಗಿದೆ.. ಹೌದು.. ಸಿನಿಮೋದ್ಯಮ ವಿಶ್ಲೇಷಕ ಕೋಮಲ್ ನಹಥಾ ಜೊತೆಗಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅಮೀರ್ ಖಾನ್, ನನ್ನ ಸಿನಿಮಾವನ್ನು  ಕೆಜಿಎಫ್ 2 ಸಿನಿಮಾದ ಬಿಡುಗಡೆ ದಿನದಂದೇ ಬಿಡುಗಡೆ ಮಾಡುತ್ತಿರುವುದಕ್ಕೆ ಕೆಜಿಎಫ್ 2 ತಂಡದ ಬಳಿ ಮನಸ್ಪೂರ್ತಿಯಾಗಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ ಎಂದು ವರದಿ ಮಾಡಲಾಗಿದೆ..

ಅಲ್ಲದೇ ಅದೇ ದಿನವೇ ಸಿನಿಮಾ ರಿಲೀಸ್ ಮಾಡುವುದಕ್ಕೆ ಕಾರಣ ಕೊಟ್ಟಿರುವ ಅಮೀರ್ ನಾನು “ಲಾಲ್ ಸಿಂಗ್ ಛಡ್ಡಾ” ಸಿನಿಮಾದಲ್ಲಿ ಮೊದಲ ಬಾರಿಗೆ ಸಿಖ್ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದೇನೆ. ಹಾಗಾಗಿ ಸಿಖ್ ರ ಪವಿತ್ರ ಹಬ್ಬವಾದ ಬೈಸಾಖಿ ಹಬ್ಬದ ದಿನದಂದು ಈ ಸಿನಿಮಾ ಬಿಡುಗಡೆ ಆಗುವುದು ಸೂಕ್ತ ಎನಿಸಿತು. ಹಾಗಾಗಿ ನಾನು  ಲಾಲ್ ಸಿಂಗ್ ಛಡ್ಡಾ  ಸಿನಿಮಾದ ಬಿಡುಗಡೆ ದಿನಾಂಕವನ್ನು ಏಪ್ರಿಲ್ 14 ಕ್ಕೆ ನಿಗದಿಪಡಿಸಿದೆ. ಬೇರೆ ಸಿನಿಮಾಗಳಿಗೆ ತೊಂದರೆ ಕೊಡುವ ಉದ್ದೇಶದಿಂದ ಅಲ್ಲ. ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗಿದ್ದರೆ ಅದೇ ದಿನ ನನ್ನ ಸಿನಿಮಾ ಬಿಡುಗಡೆ ಮಾಡುವುದಿಲ್ಲ ನಾನು. ಆದರೆ ಬೈಸಾಖಿ ಹಬ್ಬದ ದಿನವೇ ನನ್ನ ಸಿನಿಮಾ ಬಿಡುಗಡೆ ಆಗುವುದು ಸೂಕ್ತವೆಂಬ ಕಾರಣಕ್ಕೆ ಈ ನಿರ್ಧಾರ ಮಾಡಬೇಕಾಯಿತು ಎಂದಿದ್ದಾರೆ.

ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ…?

ಅಷ್ಟೇ ಅಲ್ಲ  ಬಿಡುಗಡೆ ದಿನಾಂಕ ಘೋಷಣೆಗೂ ಮುನ್ನವೇ  ಕೆಜಿಎಫ್ 2  ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರ್, ಪ್ರಶಾಂತ್ ನೀಲ್ ಹಾಗೂ ನಾಯಕ ಯಶ್‌ ಗೆ ಮನಸಾರೆ ಕ್ಷಮೆ ಕೇಳಿದೆ.   ನಾನು ಅವರಿಗೆ ಪತ್ರ ಬರೆದು ನನ್ನ ಸಿನಿಮಾವನ್ನು ಏಕೆ ಏಪ್ರಿಲ್ 14ರಂದೇ ಬಿಡುಗಡೆ ಮಾಡಲು ಮುಂದಾಗಿದ್ದೇನೆ ಎಂಬುದನ್ನು ವಿವರಿಸಿದೆ. ಅವರು ಸಹ ಬಹಳ ಪ್ರೀತಿಯಿಂದ ನನ್ನ ನಿರ್ಣಯವನ್ನು ಒಪ್ಪಿದರು. ಹಾಗೂ ಸಿನಿಮಾ ಬಿಡುಗಡೆ ಮಾಡುವಂತೆ ಹೇಳಿದರು ಎಂದಿದ್ದಾರೆ.

ಅಷ್ಟೇ ಅಲ್ಲದೆ  ಯಶ್‌ ಜೊತೆ ಮಾತನಾಡಿದ್ದಾಗಿಯೂ ಅಮೀರ್ ಖಾನ್ ಹೇಳಿದ್ದಾರೆ.  ನಾನು ಯಶ್‌ ಜೊತೆಗೆ ತೆರೆದ ಹೃದಯದಿಂದ ಸುದೀರ್ಘವಾಗಿ ಮಾತುಕತೆ ನಡೆಸಿದೆ. ಕೆಜಿಎಫ್  ಸಿನಿಮಾ ಸರಣಿಯ ಅಭಿಮಾನಿಯಾಗಿರುವ ಬಗ್ಗೆಯೂ ಹೇಳಿದೆ. ನನ್ನದು ಕೌಟುಂಬಿಕ ಹಾಗೂ ಪ್ರೇಮ ಕತೆ,  ಕೆಜಿಎಫ್ 2  ಆಕ್ಷನ್ ಸಿನಿಮಾ ಆಗಿರುವ ಕಾರಣ ಒಬ್ಬರ ಸಿನಿಮಾದ ಕಲೆಕ್ಷನ್ ಅನ್ನು ಇನ್ನೊಂದು ಸಿನಿಮಾ ಒಡೆಯುವುದಿಲ್ಲ ಎಂದೂ ಯಶ್‌ ಗೆ ಮನದಟ್ಟು ಮಾಡಿಸಿದೆ ಎಂದಿದ್ದಾರೆ.

ಅಲ್ಲದೇ ಅಮೀರ್ ಖಾನ್ ಯಶ್ ಅನ್ನು ಹೊಗಳಿದ್ದು, ಯಶ್‌ ಜೊತೆ ಮಾತನಾಡಿದ್ದು ಖುಷಿ ಕೊಟ್ಟಿತು. ಯಶ್‌ ರ ಮುಂದಿನ ಸಿನಿಮಾಗಳನ್ನು ನಾನು ಸ್ವಯಂಪ್ರೇರಿತವಾಗಿ ಪ್ರಚಾರ ಮಾಡುತ್ತೇನೆ. ಅಷ್ಟೇ ಅಲ್ಲದೆ ಏಪ್ರಿಲ್ 14 ರಂದು ಕೆಜಿಎಫ್ 2 ಸಿನಿಮಾವನ್ನು ಚಿತ್ರಮಂದಿರಕ್ಕೆ ಹೋಗಿ ವೀಕ್ಷಣೆ ಮಾಡುತ್ತೇನೆ  ಎಂದಿದ್ದಾರೆ .

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd