ಭದ್ರತಾ ಸವಾಲುಗಳನ್ನ ಗಮನದಲ್ಲಿಟ್ಟುಕೊಂಡು ವ್ಯಾಪಾರಿ ಕಾರಿಡಾರ್ ಬಲಪಡಿಸಬೇಕು – ಅಮಿತ್ ಶಾ..
ಭಾರತದ ವ್ಯಾಪಾರ ಕಾರಿಡಾರ್ಗಳು ಬಹಳ ಅವಶ್ಯಕವಾಗಿದೆ ಮತ್ತು ನೆರೆಯ ದೇಶಗಳ ವ್ಯಾಪಾರ ಹರಿವು ಮತ್ತು ಸ್ವರೂಪವನ್ನು ಬದಲಾಯಿಸುವುದು ವ್ಯಾಪಾರ ಕಾರಿಡಾರ್ಗಳ ಜವಾಬ್ದಾರಿಯಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದರು. ಭದ್ರತಾ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ವ್ಯಾಪಾರ ಕಾರಿಡಾರ್ಗಳ ರಚನೆಯನ್ನು ಬಲಪಡಿಸಬೇಕು ಎಂದು ಅವರು ಹೇಳಿದರು. ಅವರು ಇಂದು ನವದೆಹಲಿಯಲ್ಲಿ ಭಾರತೀಯ ಭೂ ಬಂದರು ಪ್ರಾಧಿಕಾರದ 10ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.
ಭೂಮಾರ್ಗಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತಾ ಅಮಿತ್ ಶಾ ಹೇಳಿದರು, ಭಾರತೀಯ ಸಂಸ್ಕೃತಿಯ ಧ್ವಜಧಾರಿಗಳು ಭೂಮಾರ್ಗಗಳ ಮೂಲಕ ಏಷ್ಯಾದಾದ್ಯಂತ ಹರಡಿದರು. ವ್ಯಾಪಾರದ ಬೆಳವಣಿಗೆ ಮತ್ತು ಸಂಸ್ಕೃತಿಯ ಹರಡುವಿಕೆಯಲ್ಲಿ ಭೂ ಮಾರ್ಗಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಅವರು ಹೇಳಿದರು.
ನೆರೆಯ ದೇಶಗಳೊಂದಿಗೆ ಸಂವಹನ ಮತ್ತು ಸಂಬಂಧವನ್ನು ಸುಧಾರಿಸುವಲ್ಲಿ ಪ್ರಾಧಿಕಾರವು ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಭೂ ಬಂದರು ಪ್ರಾಧಿಕಾರದ ಪಾತ್ರವನ್ನು ಶ್ಲಾಘಿಸಿದರು.








