ಅವಳಿ ಮಕ್ಕಳ ಫೋಟೋ ರಿವೀಲ್ ಮಾಡಿ, ನಟಿ ಅಮೂಲ್ಯ ಸರ್ಪ್ರೈಸ್
ಕೃಷ್ಣಜನ್ಮಾಷ್ಟಮಿಯಂದು ನಟಿ ಅಮುಲ್ಯ ಇದೇ ಮೊದಲ ಭಾರಿಗೆ ತಮ್ಮ ಅವಳಿ ಮಕ್ಕಳ ಪೋಟೋ ಬಹಿರಂಗಪಡಿಸಿದ್ದಾರೆ. ಬರೋಬ್ಬರಿ ಐದೂವರೆ ತಿಂಗಳ ಬಳಿಕ ನಟಿ ಅಮೂಲ್ಯ ತಮ್ಮ ಮಕ್ಕಳ ಪೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಶ್ರೀ ಕೃಷ್ಣಜನ್ಮಾಷ್ಟಮಿಯಿಂದು ಮಕ್ಕಳನ್ನು ಪರಿಚಯಿಸುತ್ತಿದ್ದೇನೆ. ನಿಮ್ಮ ಆಶೀರ್ವಾದ ಇರಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ಮನವಿ ಮಾಡಿದ್ದಾರೆ. ಆದರೆ ಅವಳಿ ಮಕ್ಕಳ ಹೆಸರು ಬಹಿರಂಗ ಪಡಿಸಿಲ್ಲ. ಪತಿ ಜಗದೀಶ್ ಆರ್ ಚಂದ್ರ ಹಾಗೂ ಮಕ್ಕಳ ಜೊತೆ ಮುದ್ದಾಗಿರುವ ಫೋಟೋ ಶೂಟ್ ಮಾಡಿಸಿಕೊಂಡಿರುವ ಅಮೂಲ್ಯ ಎಲ್ಲಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿವಿಧ ಥೀಮ್ಗಳಲ್ಲಿ ಫೋಟೋ ಶೂಟ್ ಮಾಡಿಸಲಾಗಿದೆ.
ಅಮೂಲ್ಯ ಮಾರ್ಚ್ 1, 2022ರಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ರು. ಅಮೂಲ್ಯ ತಾಯಿಯಾದ ಬಳಿಕ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದರು. ಇದೀಗ ಮತ್ತೆ ತಮ್ಮ ಅವಳಿ ಮಕ್ಕಳನ್ನು ಪರಿಚಯಿಸುವ ಮೂಲಕ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.